ಬೇಸಿಗೆಯ ಬಿಸಿಲು ನೆತ್ತಿ ಸುಡುತ್ತಿದೆ. ಇಂಥ ಸಂದರ್ಭದಲ್ಲಿ ಕೂಡಾ ಕೂಲ್ ಆಗಿ ಇರಬೇಕೆಂದರೆ ಬಿಸಿಲಿನಿಂದ ರಕ್ಷಣೆ ಒದಗಿಸುವಂತ ಬಟ್ಟೆ ಧರಿಸಬೇಕು. ಯಾವ ತರಹದ ಬಟ್ಟೆಗಳು ಹಾಗೂ ಯಾವ್ಯಾವ ಡಿಸೈನ್‌ನ ಬಟ್ಟೆಗಳನ್ನು ಧರಿಸಿದರೆ ಚೆಂದ ಎಂದು ತಿಳಿಯಬೇಕೆ? ಈ ಬರಹ ಓದಿ.
ಬೇಸಿಗೆ ಶುರುವಾಗಿದೆ. ಅಂತೆಯೇ ನಿಮ್ಮ ವಾಡ್ರೋಬ…ಅನ್ನು ಅಪ್‌ಡೇಟ್ ಮಾಡಿಕೊಳ್ಳಿ. ಲೈಟ್ ವೇಯ್r ಮತ್ತು ಕಲರ್‌ಫುಲ್ ಬಟ್ಟೆಗಳು ಈ ಬೇಸಿಗೆಯಲ್ಲಿ ನಿಮ್ಮ ಸಂಗಾತಿಯಾಗಲಿ. ಡೆನಿಮ… ಶರ್ಟ್ ಜೊತೆ ಹಳದಿ ಬಣ್ಣದ ಸ್ಲಿವ್ ಲೆಸ್ ಟೀ ಶರ್ಟ್ ಹಾಕಿ ಪ್ರಿಂಟೆಡ್ ಲೆಗಿಂಗ್ ತೊಡುವುದು ಈ ಬೇಸಿಗೆಯ ಟ್ರೆಂಡಿಂಗ್ ಔಟ್‌ಫಿಟ್. ಆದ್ದರಿಂದ ಈ ಕಾಂಬಿನೇಶನ್‌ನಲ್ಲೆ ಎಕ್ಸ್…ಪೆರಿಮೆಂಟ್ ಮಾಡಿ ಹಳದಿ ಬಣ್ಣದ ಬದಲಿಗೆ ತಿಳಿ ಹಸಿರು, ತಿಳಿ ನೀಲಿ ಅಥವಾ ಕೇಸರಿ ಬಣ್ಣದ ಟೀಶರ್ಟ್ ಹಾಕಿ ಅದೇ ಬಣ್ಣದ ಪ್ರಿಂಟ್ ಇರೋ ಲೆಗಿಂಗ್ ಹಾಕಿ ನೋಡಿ.
ಈ ಲುಕ್‌ಗೆ ಸಾಲಿಡ್ ಕಲರ್ ಪಾದರಕ್ಷೆ ಹಾಕಿಕೊಳ್ಳಿ. ಕಂದು ಬಣ್ಣದ ಸ್ನೀಕರ್ಸ್ ತುಂಬ ಚೆನ್ನಾಗಿ ಕಾಣುತ್ತದೆ. ಲೇಸು ಕಟ್ಟುವ ಅಗತ್ಯವಿಲ್ಲದ ಶೂಸ್ ಕೊಂಡರೆ ಉತ್ತಮ. ಇಲ್ಲವಾದರೆ ಶೂಸ್ ಜೊತೆ ಸಾಕÕ… ಕೂಡ ಹಾಕಬೇಕಾಗುತ್ತೆ. ಇದು ಬೇಸಿಗೆಯಲ್ಲಿ ಅಸಾಧ್ಯವಾದ ಮಾತು! ಕಾಟನ್ ಬಟ್ಟೆ ಬೇಸಿಗೆಯಲ್ಲಿ ನಮ್ಮನ್ನು ತಂಪಾಗಿರಿಸುತ್ತೆ. ಅಲ್ಲದೆ ಬೆವರನ್ನು ಹೀರಿ ನಮ್ಮನ್ನು ಯಾವತ್ತೂ ಡ್ರೈ ಯಾಗಿರಿಸುತ್ತೆ. ಟ್ರಡೀಷನಲ… ಮತ್ತು ಇಂಡಿಯನ್ ಉಡುಪುಗಳನ್ನು ತೊಡಲು ಇಷ್ಟಪಡುವವರು ಖಾದಿ ಬಟ್ಟೆಯ ಕುರ್ತಾ, ಲಂಗ, ಸೀರೆ, ಚೂಡಿದಾರ್ ಅಥವಾ ಸಲ್ವಾರ್ ಕಮೀಜ… ಉಡುವುದು ಉತ್ತಮ. ಅದರಲ್ಲೂ ಪೇಸ್ಟಲ… ಬಣ್ಣಗಳು, ಅಂದರೆ ಬಳಪದ ಕಡ್ಡಿಯ ಬಣ್ಣಗಳು (ತಿಳಿ ಬಣ್ಣಗಳು) ಕಣ್ಣಿಗೂ ತಂಪು ದೇಹಕ್ಕೂ ತಂಪು.
ಪೇಸ್ಟಲ… ಶೇಡ್‌ನ ಬಣ್ಣದ ಶರ್ಟ್‌ಗಳ ಜೊತೆ ಫ್ಲೋರಲ್ ಪ್ರಿಂಟ್ ಇರೋ ಬಿಳಿ ಬಣ್ಣದ ಸ್ಲಿಮ…ಫಿಟ್ ಪ್ಯಾಂಟ್, ಲೆಗಿಂಗ್Yಗಳು ಚೆನ್ನಾಗಿ ಕಾಣಿಸುತ್ತವೆ. ಪೇಸ್ಟಲ… ಶೇಡ್‌ನ ಟಾಪ್ ಜೊತೆ ಕಪ್ಪು ಬಣ್ಣದ ಪ್ಯಾಂಟ್ ಚೆನ್ನಾಗಿ ಕಾಣಿಸುವುದಿಲ್ಲ. ಆದ್ದರಿಂದ ಬಿಳಿ, ಕಂದು, ಆಫ್ ವೈಟ್ ಅಥವಾ ತಿಳಿ ನೀಲಿ ಬಣ್ಣದ ಸ್ಕರ್ಟ್, ಪ್ಯಾಂಟ್ ಮತ್ತು ಶಾರ್ಟ್ಸ್ ಹಾಕಿಕೊಳ್ಳಬೇಕು.
ಇಂಡಿಯನ್ ಪ್ರಿಂಟ್ ಇರುವ ಪಲಾಝೊà, ಹಾರೆಮ… ಪ್ಯಾಂಟ್ ಅಥವಾ ಸ್ಕರ್ಟ್ ಹಾಕುವುದಾದರೆ ಅದಕ್ಕೆ ತಕ್ಕ ಟಾಪ್ ಹಾಕಬೇಕು. ಪ್ರಿಂಟೆಡ್ ಪ್ಯಾಂಟ್‌ಗೆ ಅದೇ ಬಣ್ಣ ಅಥವಾ ಬೇರೆ ಬಣ್ಣದ ಪ್ಲೇನ್ ಟಾಪ್ ಹಾಕಬಹುದು. ಲೂಸ್ ಪ್ಯಾಂಟ್‌ಗೆ ಲೂಸ್ ಶರ್ಟ್ ಹಾಕಬಾರದು. ಬದಲಿಗೆ ಫಿಟ್ಟಿಂಗ್ ಇರುವ ಟೀ ಶರ್ಟ್ ಹಾಕಿ ಅದರ ಮೇಲೆ ಲೂಸ್ ಶರ್ಟ್ ಅಥವಾ ಶ್ರಗ್ ಹಾಕಿಕೊಳ್ಳಬಹುದು. ಒಂದು ವೇಳೆ ಲೂಸ್ ಶರ್ಟ್ ಹಾಕುವುದಾದರೆ ಸ್ಕಿನ್ನಿ ಅಥವಾ ಸ್ಲಿಮ… ಫಿಟ್ ಪ್ಯಾಂಟ್ ಧರಿಸಬೇಕು. ಪ್ರಿಂಟೆಡ್ ಸ್ಕರ್ಟ್, ಹಾರೆಮ…, ಪಲಾಝೊ, ಲೆಗಿಂಗ್, ಪ್ಯಾಂಟ್ ಹಾಕುವಾಗ ಪ್ಲೇನ್ ಟಾಪ್ ತೊಡಬೇಕು. ಅಂತೆಯೇ ಪ್ರಿಂಟೆಡ್ ಟಾಪ್ ಹಾಕುವಾಗ ಪ್ಲೇನ್ ಸ್ಕರ್ಟ್ ಅಥವಾ ಪ್ಯಾಂಟ್ ಹಾಕಬೇಕು.
ಬಿಳಿ ಶರ್ಟ್ ಅಥವಾ ಟಾಪ್‌ಗೆ ನೀಲಿ ಬಣ್ಣದ ಪ್ಯಾಂಟೇ ಸರಿಯಾದ ಕಾಂಬಿನೇಶನ್. ಆದರೆ ಬಿಳಿ ಟಾಪ್ ಜೊತೆ ಸ್ಕರ್ಟ್/ ಲಂಗ ಹಾಕುವುದಾದರೆ ಕೆಂಪು, ಹಸಿರು, ಕೇಸರಿ ಸೇರಿದಂತೆ ಯಾವುದೇ ಗಾಢ ಬಣ್ಣಗಳನ್ನು ಧರಿಸಬಹುದು. ಆಫ್ ಶೋಲ್ಡರ್ ಅಥವಾ ಸ್ಲಿàವ್‌ಲೆಸ್ ಬಟ್ಟೆ ಧರಿಸುವಾಗ ಸನ್ ಸ್ಕ್ರೀನ್ ಹಚ್ಚಲು ಮರೆಯಬೇಡಿ. ಮನೆಯಿಂದ ಹೊರ ಹೋಗುವ 20 ನಿಮಿಷಗಳ ಮುನ್ನ ಸನ್ ಸ್ಕ್ರೀನ್ ಹಚ್ಚಿರಿ. ಇಲ್ಲವಾದರೆ ಬಿಸಿಲಿನಿಂದಾಗಿ ಕೈ ಮತ್ತು ಮೈಯ ಬಣ್ಣ ಬದಲಾಗುತ್ತೆ. ಅಲ್ಲದೆ ಚರ್ಮ ಸಂಬಂಧಿತ ಸಮಸ್ಯೆಗಳೂ ಬರುವ ಸಾಧ್ಯತೆ ಇವೆ.
ನಿಮ್ಮ ವಾರ್ಡ್‌ರೋಬ…ನಲ್ಲಿ 2, 3 ಸ್ಕಾಫ್ìಗಳು ಇರಲಿ. ಪ್ಲೇನ್ ಸ್ಕಾಫ್ìಗಳ ಬದಲಿಗೆ ಫ್ಲೋರಲ್ ಪ್ಯಾಟರ್ನ್, ಅನಿಮಲ… ಪ್ರಿಂಟ್ ಮತ್ತು ಇಂಡಿಯನ್ ಡಿಸೈನ್‌ನ ವೆರೈಟಿ ಇರಲಿ. ಆಗ ಬೋರಿಂಗ್ ಬಟ್ಟೆ ಜೊತೆ ಸ್ಕಾಫ್ì ತೊಟ್ಟಾಗ ಉಡುಪು ಇಂಟರೆಸ್ಟಿಂಗ್ ಆಗುತ್ತೆ! ಸ್ಕಾಫ್ì ಕೇವಲ ಕತ್ತಿಗಷ್ಟೇ ಅಲ್ಲ… ತಲೆ, ಕೈಗೆ ಮತ್ತು ಸಾರೊಂಗ್ ಥರ ಸೊಂಟಕ್ಕೂ ಕಟ್ಟಿಕೊಂಡು ಫ್ಯಾಷನ್ ಸ್ಟೇಟ್‌ಮೆಂಟ್ ಮಾಡಬಹುದು!
ಅದಿತಿ ಮಾನಸ. ಟಿ. ಎಸ್