Advertisement

ಮುಂದುವರಿದ ಮಳೆ ಆರ್ಭಟ

05:38 AM May 28, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಬುಧವಾರ ಸುರಿದ ಧಾರಾಕಾರ ಮಳೆಗೆ 60ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ಮಲ್ಲೇಶ್ವರ ಸೇರಿದಂತೆ ಹಲವೆಡೆ ಮರಬಿದ್ದು ವಾಹನಗಳು ಜಖಂ  ಗೊಂಡಿವೆ. ಪೂರ್ವ ಮುಂಗಾರು ಅಬ್ಬರಕ್ಕೆ ನಗರದ ಜನ ತತ್ತರಿಸಿದರು. ಬುಧವಾರ ಮಧ್ಯಾಹ್ನ ಪ್ರಾರಂಭವಾದ ಮಳೆ ಇಳಿ ಸಂಜೆಯ ವರೆಗೆ ಸುರಿಯಿತು. ಅಲ್ಲದೆ, ನಗರದ ಹಲವು ಭಾಗಗಳಲ್ಲಿ ತಡರಾತ್ರಿಯವರೆಗೆ ತುಂತುರು ಮಳೆ ಮುಂದುವರಿಯಿತು.

Advertisement

ಅಭಿನಯ ಚಿತ್ರ ಮಂದಿರ, ಬಳೆಪೇಟೆ, ಮುನಿಕೊಳೆಲಾ, ಗೌಸಿಯಾ ಕಾಲೇಜು, 4ನೇ ಸಿ ಬ್ಲಾಕ್‌ ಬಳಿ ಬೃಹತ್‌ ಮರ, ಸಂಜಯನಗರ, ಹೆಬ್ಟಾಳದಲ್ಲಿ ತಲಾ ಒಂದು ಮರ ಧರೆಗುರುಳಿವೆ. ಮಲ್ಲೇಶ್ವರದ ಕಾಡು ಮಲ್ಲೇಶ್ವರದ ಬಳಿ 2 ಕಾರು ಹಾಗೂ ಆಟೋದ ಮೇಲೆ ಮರಗಳು ಬಿದ್ದ ಹಿನ್ನೆಲೆಯಲ್ಲಿ ಕಾರು ಹಾಗೂ ಆಟೋ ಜಖಂಗೊಂಡಿವೆ. ಆದರೆ, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ತಿಳಿಸಿದ್ದಾರೆ.

ತುರ್ತು ಪ್ರತಿಕ್ರಿಯಿಸದ ಕಂಟ್ರೋಲ್‌ ರೂಂ ?: ಧಾರಾಕಾರ ಮಳೆಗೆ ಮರಗಳು ಬೀಳುತ್ತಿದ್ದು, ತೆರವು ಹಾಗೂ ದೂರು ದಾಖಲಿಸಿಕೊಳ್ಳುವಲ್ಲಿ ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಪ್ರತಿಕ್ರಿಯೆ ನೀಡು ತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.  ಮಳೆಯಂತಹ ತುರ್ತು ಸಂದರ್ಭದಲ್ಲಿ ಪಾಲಿಕೆ ಕ್ಷೀಪ್ರವಾಗಿ  ಪ್ರತಿಕ್ರಿಯೆ ನೀಡುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲ ಯದಿಂದ ಕೇಳಿ ಬಂದಿದೆ.

ಈ ಸಂಬಂಧ ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌,  ನಗರದಲ್ಲಿ ಮಳೆ ಹಿನ್ನೆಲೆಯಲ್ಲಿ 500ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಎಲ್ಲ ದೂರುಗಳಿಗೂ ಸ್ಪಂದಿಸಲಾಗುತ್ತಿದೆ. ಹೆಚ್ಚು ಮರಗಳು ಧರೆಗುರುಳಿದ ಹಿನ್ನೆಲೆಯಲ್ಲಿ ಅವುಗಳನ್ನು ರಸ್ತೆಯಿಂದ ತೆರವು ಮಾಡಿ ಪಕ್ಕಕ್ಕೆ ಹಾಕಲಾಗುತ್ತಿದೆ.  ರಸ್ತೆಗಳ ಪಕ್ಕದಿಂದಲೂ ಶೀಘ್ರ ತೆರವು ಮಾಡಲಾಗುವುದು ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next