Advertisement
ಕಂಟೈನ್ಮೆಂಟ್ ವಲಯ, ಸೀಲ್‌ಡೌನ್ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿ ಹೊಣೆಗಾರಿಕೆ ಆಯಾ ಡಿಸಿಪಿಗಳಿಗೆ ನೀಡಲಾಗುವುದು. ವಿದೇಶದಿಂದ ಬಂದವರ ಕ್ವಾರಂಟೈನ ಮಾಡುವ ಮಾದರಿಯಲ್ಲೇ ಆ ಪ್ರದೇಶಗಳಲ್ಲಿ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Related Articles
Advertisement
ಮುಂಬರುವ ದಿನಗಳಲ್ಲಿ ಹೋಂ ಕ್ವಾರಂಟೈನ್ ಮಹತ್ವ ಪಡೆದುಕೊಳ್ಳುವುದರಿಂದ ಹೋಂ ಕ್ವಾರಂಟೈನ್ ವ್ಯವಸ್ಥೆಯಲ್ಲಿ ಸಮುದಾಯವನ್ನು ಭಾಗಿಯಾಗಿಸಬೇಕು. ವಾರ್ಡ್‌ವೈಸ್ ಬಿಬಿಎಂಪಿ ಪೊಲೀಸ್, ಗೃಹರಕ್ಷಕ ದಳ, ಸ್ವಯಂ ಸೇವಕರು ಸಮನ್ವಯತೆಯಿಂದ ಕೆಲಸ ಮಾಡಬೇಕು. ಆಸ್ಪತ್ರೆ, ವೈದ್ಯರ ಜೋಡಣೆ, ಅವರ ಚಲನವಲನ, ಅಕ್ಕ ಪಕ್ಕದವರನ್ನು ಜಾಗೃತಿಗೊಳಿಸುವುದು. ಹೋಂ ಕ್ವಾರಂಟೈನ್ ಆಗಿರುವವರಿಗೆ ಆ್ಯಪ್ ಜೋಡಣೆಯಾಗಿರುತ್ತದೆ. ಅದರ ಮಾಹಿತಿಯೂ ಪೊಲೀಸರಿಗೆ ಇರಬೇಕು ಎಂದು ಹೇಳಿದರು.
ರಾತ್ರಿ ಕರ್ಫ್ಯೂ 8 ರಿಂದ 5 ಗಂಟೆವರೆಗೂ ಜನ ವಾಹನ ಸಂಚಾರ ನಿಲ್ಲಿಸಬೇಕು. ಈ ಬಗ್ಗೆ ಜನರಲ್ಲೂ ಜಾಗೃತಿ ಮೂಡಿಸಲಾಗುವುದು. 600 ಆಟೋ ರಿಕ್ಷಾದಲ್ಲಿ ರಾತ್ರಿ ಕರ್ಫ್ಯೂ ಜಾರಿ, ಮಾಸ್ಕ್ ಧರಿಸದಿದ್ದರೆ ದಂಡ, ಸೀಲ್‌ಡೌನ್ ಪ್ರದೇಶಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ತಿಳಿಸಲಾಗುವುದು ಎಂದರು.
ರಾತ್ರಿ ಕರ್ಫ್ಯೂ ಕಟ್ಟು ನಿಟ್ಟಿನ ಪಾಲನೆಯಾಗಲಿದ್ದು ಜನ-ವಾಹನ ಓಡಾಟದ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೋವಿಡ್-19 ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿರುವುದರಿಂದ ಪೊಲೀಸ್ ಇಲಾಖೆ ಮೇಲೆಯೂ ಹೆಚ್ಚಿನ ಹೊಣೆಗಾರಿಕೆ ಇದೆ ಎಂದು ಹೇಳಿದರು.
ಕೋವಿಡ್-19 ಸೇವೆಗೆ ಸಂಘ-ಸಂಸ್ಥೆಗಳು ಕೋವಿಡ್-19 ಸ್ವಯಂ ಸೇವಕರು 60 ಸಾವಿರ ನೋಂದಣಿಯಾಗಿದ್ದಾರೆ. ಅವರಿಗೆ ಸಂಪೂರ್ಣವಾಗಿ ಜವಾಬ್ದಾರಿ ಕೊಟ್ಟು ವಾರ್ಡ್‌ನಲ್ಲಿ ಬಳಕೆ ಮಾಡಬೇಕು ಎಂಬ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ವಲಯ, ಸೀಲ್‌ಡೌನ್ ಪ್ರದೇಶಗಳು ಹೆಚ್ಚಾಗುತ್ತಿರುವುದು ಲಾಕ್‌ಡೌನ್ ಅಗತ್ಯವೇ ಎಂಬ ಪ್ರಶ್ನೆಗೆ ಸೀಲ್‌ಡೌನ್ ಎಂದರೆ ಲಾಕ್‌ಡೌನ್ ಅಲ್ಲ ಎಂದು ಉತ್ತರಿಸಿದರು.