Advertisement

ಸಂಚಾರ ನಿಯಮ ಜಾಗೃತಿಗೆ ಆಲ್ಬಂ ರಚಿಸಿದ ಕಾನ್‌ಸ್ಟೆಬಲ್‌

12:12 AM Nov 03, 2019 | Team Udayavani |

ಬೆಂಗಳೂರು: ನಗರ ಸಶಸ್ತ್ರ ಮೀಸಲು (ಸಿಎಆರ್‌) ದಕ್ಷಿಣ ವಿಭಾಗದ ಶ್ವಾನದಳದಲ್ಲಿ ಕಾನ್‌ಸ್ಟೆಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮೌಲಾಲಿ ಆಲಗೂರು ಅವರು, “ಸಂಚಾರ ನಿಯಮ’ ಕುರಿತು ಸಾಹಿತ್ಯ ರಚಿಸಿ, ಸ್ವತಃ ಹಾಡಿರುವ ಹಾಡುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಲಕ್ಷಾಂತರ ಜನರ ಮನ ಗೆದ್ದಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೋರಗಿ ಗ್ರಾಮದ ಮೌಲಾಲಿ ಅವರು, ಕೆಲ ವರ್ಷಗಳಿಂದ ಶ್ವಾನದಳದಲ್ಲಿ ಕಾನ್‌ಸ್ಟೆಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Advertisement

ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿರುವ ಅವರು, ಕೆಲಸದ ಒತ್ತಡದ ನಡುವೆಯೂ “ಸಂಚಾರ ನಿಯಮ ಪಾಲಿಸಿ’ ಎಂಬ ಶೀರ್ಷಿಕೆ ಅಡಿಯಲ್ಲಿ “ಮೂರು ಜನರು ಕುಳಿತುಕೊಂಡು ಫೈನು ನಮಗೆ ಕಟ್ಟಬೇಡಿ… ನಿಮ್ಗಳ ರಕ್ಷಣೆ ನಿಮ್ಮಯ ಕೈಯಲ್ಲಿ ಎಂಬುದನ್ನು ಮರೆಯಬೇಡಿ..! ಅವಸರ ಯಾಕೆ ನಿಮ್ಗೆ ಕ್ಷೇಮದಿಂದ ಹೋಗಿ ಸೇರಿ ಮನೆಗೆ.. ವೇಗವಾಗಿ ಹೋಗಬೇಡಿ, ನಿಧಾನದಿಂದ ಗಾಡಿ ಬಿಡಿ’ ಎಂಬ ಹಾಡನ್ನು ರಚಿಸಿ, ಸ್ವತಃ ಅವರೇ ಧ್ವನಿ ನೀಡಿದ್ದಾರೆ.

ಇತ್ತೀಚೆಗಷ್ಟೇ ಈ ಆಲ್ಬಮ್‌ನ್ನು ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಡಾ ಬಿ.ಆರ್‌.ರವಿಂಕಾಂತೇಗೌಡ ಬಿಡುಗಡೆ ಮಾಡಿದ್ದರು. ಅಲ್ಲದೆ, ಈ ಹಾಡನ್ನು ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ.ಡಿ.ಚೆನ್ನಣ್ಣನವರ್‌ ಫ್ಯಾನ್ಸ್‌ ಪೇಜ್‌ನಲ್ಲಿ ಹಾಕಿದ್ದು, ಆ ಮೂಲಕ ಸುಮಾರು 25 ಲಕ್ಷಕ್ಕೂ ಹೆಚ್ಚು ಜನರನ್ನು ಇದು ತಲುಪಿದೆ. ಜತೆಗೆ, 45 ಸಾವಿರ ಮಂದಿ ಅದನ್ನು ಹಂಚಿಕೊಂಡಿದ್ದಾರೆ.

ಈ ಸಮಾಜಮುಖಿ ಕೆಲಸಕ್ಕೆ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳು ಮೌಲಾಲಿ ಅವರಿಗೆ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ. ಇತ್ತೀಚೆಗೆ ಮೌಲಾಲಿ ಅವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಲಾ ಮತ್ತು ಸಾಂಸ್ಕೃತಿಕ ಸಂಘದ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next