Advertisement

ಪರಪ್ಪನ ಅಗ್ರಹಾರ ಕೈದಿಗಳಿಗೆ ಸಿಮ್‌ ಸಪ್ಲೈ:ಪೇದೆ ಅರೆಸ್ಟ್‌ 

02:35 PM Oct 12, 2017 | |

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮಗಳು ಮುಂದುವರಿದಿರುವುದಕ್ಕೆ ಸಾಕ್ಷಿಯಾಗಿ  ಕೈದಿಗಳಿಗೆ ಸಿಮ್‌ ಸರಬರಾಜು ಮಾಡಿರುವ ಆರೋಪದಲ್ಲಿ ಪೇದೆಯೊಬ್ಬನನ್ನು ಬಂಧಿಸಲಾಗಿದೆ.

Advertisement

ದಿನೇಶ್‌ ಎಂಬ ಜೈಲು ಸಿಬಂದಿಯನ್ನು ಬಂಧಿಸಿರುವ ಬಗ್ಗೆ ವರದಿಯಾಗಿದ್ದು, ಈತ ವಾರಂಟ್‌ ತೆಗೆದುಕೊಂಡು ಹೋಗುವ ನೆಪದಲ್ಲಿ ಸಿಮ್‌ಗಳನ್ನು ನೀಡುತ್ತಿದ್ದ ಎಂದು ಹೇಳಲಾಗಿದೆ. 

ಈ ಬಗ್ಗೆ ಡಿಸಿಪಿ ಬೋರಲಿಂಗಯ್ಯ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ‘ಪೇದೆಯನ್ನು ವಶಕ್ಕೆ ಪಡೆದಿದ್ದು, ನಿನ್ನೆ ಪರಿಶೀಲನೆ ವೇಳೆ 2 ಸಿಮ್‌ ಇಲ್ಲದ ಮೊಬೈಲ್‌ಗ‌ಳು ಪತ್ತೆಯಾಗಿವೆ. ತನಿಖೆ ಮುಂದುವರಿಸಿದ್ದೇವೆ’ ಎಂದು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next