Advertisement

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

12:54 PM Apr 24, 2024 | Team Udayavani |

ಬ್ರಹ್ಮಾವರ: ಬ್ರಹ್ಮಾವರ ನಗರವು ಮಂಗಳವಾರ ಸಂಜೆ ಅಕ್ಷರಸಹಃ ಕಾಂಗ್ರೆಸ್‌ ಹಾಗೂ ಬಿಜೆಪಿಯ ಶಕ್ತಿ ಪ್ರದರ್ಶನದ ವೇದಿಕೆಯಾಗಿ ಮಾರ್ಪಾಡಾಯಿತು.

Advertisement

ಒಂದು ಕಡೆ ಕಾಂಗ್ರೆಸ್‌ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ಅವರ ಪರ ಬೃಹತ್‌ ಸಾರ್ವಜನಿಕ ಸಭೆ, ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ಪರ ನಾಯಕ ಅಣ್ಣಾಮಲೈ ಅವರಿಂದ ಬೃಹತ್‌ ರೋಡ್‌ ಶೋ. ಎರಡೂ ಕಡೆಯವರಿಂದ ಸಹಸ್ರ ಸಹಸ್ರ ಸಂಖ್ಯೆಯ ಬೆಂಬಲಿಗರು..!

ಬಂಟರ ಭವನದ ಎದುರು ಆಯೋಜಿಸಲಾದ ಕಾಂಗ್ರೆಸ್‌ ಸಭೆಗೆ ಮಧ್ಯಾಹ್ನದಿಂದಲೇ ಜನ ಸೇರತೊಡಗಿದರೆ, ಆಕಾಶವಾಣಿಯಿಂದ ನಡೆಯುವ ಬಿಜೆಪಿ ರೋಡ್‌ ಶೋಗೆ ಗಾಂಧಿಮೈದಾನದಲ್ಲಿ ಜನರು ಜಮಾವಣೆಯಾಗತೊಡಗಿದರು.  ಪೇಟೆಯ ಸಭೆ ಮುಗಿಯುತ್ತಿದ್ದಂತೆ ರಥಬೀದಿಯ ಮೂಲಕ ಸಾಗಿ ಬಂದ ಮೆರವಣಿಗೆ ಕುಂಜಾಲು ಕ್ರಾಸ್‌ಗೆ ಆಗಮಿಸುತ್ತಿದ್ದಂತೆ ಸಾವಿರಾರು ಜನರ ಸಮಾಗಮನವಾಯಿತು. ಎಲ್ಲಾ ಕಡೆಗಳಲ್ಲಿ ಟ್ರಾಫಿಕ್‌ಜಾಮ್‌ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next