Advertisement

ಶ್ರೀಕ್ಷೇತ್ರ ಪೇಟೆಬೆಟ್ಟು ಕಟಪಾಡಿ- ಜ.4,5: ಬಬ್ಬುಸ್ವಾಮಿ, ಪರಿವಾರ ದೈವಗಳ ನೇಮೋತ್ಸವ

11:53 AM Jan 03, 2025 | Team Udayavani |

ಕಟಪಾಡಿ: ಶ್ರೀ ಕ್ಷೇತ್ರ ಪೇಟೆಬೆಟ್ಟು ಕಟಪಾಡಿಯ ಭಗವಾನ್‌ ಶ್ರೀ ಬಬ್ಬುಸ್ವಾಮಿ ದೈವಸ್ಥಾನ, ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಬಬ್ಬು ಸ್ವಾಮಿ ಹಾಗೂ ಪರಿವಾರ ದೈವಗಳ ನೇಮೋ ತ್ಸವವು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಜ.4 ಮತ್ತು ಜ.5ರಂದು ಜರಗಲಿದೆ.

Advertisement

ಜ.3ರಂದು ಬೆಳಗ್ಗೆ 8 ಗಂಟೆಗೆ ಸತ್ಯ ಕಂಬೆರ್ಲು ದೇವರ ದರ್ಶನ ಸೇವೆಯೊಂದಿಗೆ ಮುಹೂರ್ತ ಗೊಳ್ಳಲಿದೆ. ಜ.4ರಂದು ಬೆಳಗ್ಗೆ 7.30ಕ್ಕೆ ಧ್ವಜಸ್ತಂಭ (ಗಜಕಂಬ) ಮುಹೂರ್ತ, ಮಧ್ಯಾಹ್ನ 12ಕ್ಕೆ ಚಪ್ಪರ ಆರೋಹಣ, 12.45ಕ್ಕೆ ಮಹಾ ಅನ್ನ ಸಂತರ್ಪಣೆ, ಸಂಜೆ 4ಕ್ಕೆ ಶ್ರೀ ಕ್ಷೇತ್ರ ಶುದ್ಧಿ ಪೂಜೆ ನಡೆಯಲಿದೆ. ಸಂಜೆ 6ಕ್ಕೆ ಭಂಡಾರ ಹೊರಟು ಕಟಪಾಡಿ ಪೇಟೆಯ ಮೂಲಕ ವಿಜೃಂಭಣೆಯ ಭವ್ಯ ಮೆರವಣಿಗೆ ಯಲ್ಲಿ ಸಾಗಿ ಬರಲಿದೆ. ರಾತ್ರಿ 10ಕ್ಕೆ ಬಬ್ಬುಸ್ವಾಮಿ ನೇಮ ಹಾಗೂ ರಾತ್ರಿ 1 ಗಂಟೆಗೆ ಆದಿಶಕ್ತಿ ಶ್ರೀ ತನ್ನಿಮಾನಿಗ ದೇವಿಯ ನೇಮ ಜರಗಲಿದೆ.

ಜ.5ರ ಬೆಳಗ್ಗೆ 9ಕ್ಕೆ ಶ್ರೀ ಧೂಮಾವತಿ ಹಾಗೂ ಬಂಟ ದೈವಗಳ ನೇಮ, ಅಪರಾಹ್ನ 3 ಗಂಟೆಗೆ ಕೊರಗಜ್ಜ ದೈವದ ನೇಮ ಜರಗಲಿದೆ.

ಜ.4ರಂದು ಬೆಳಗ್ಗೆ 9ರಿಂದ ಸಂಜೆಯ ತನಕವೂ ಸಾಂಸ್ಕೃತಿಕ ಕಾರ್ಯ ಕ್ರಮವು ಜರಗಲಿವೆ ಎಂದು ಪಾಂ ಗಾಳ ನಾಯಕ್‌ ಮನೆತನ ಕಟಪಾಡಿ ಹೊಸ ಮನೆಯ ವೈ. ಭರತ್‌ ಹೆಗ್ಡೆ ಕಟಪಾಡಿ , ಗರಡಿಮನೆ ಅಶೋಕ್‌ ಎನ್‌. ಪೂಜಾರಿ ಕಟಪಾಡಿ, ಕೆ. ಪ್ರೇಮ್‌ ಕುಮಾರ್‌ ಕಟಪಾಡಿ, ಶ್ರೀ ಕ್ಷೇತ್ರದ ಗುರಿಕಾರ ಹರಿಶ್ಚಂದ್ರ ಪಿಲಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next