Advertisement
ಅರಮನೆ ಮೈದಾನದಲ್ಲಿ ಸಂಜೆ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ಯೋಜನೆಗಳು ಮಾತ್ರ ವೇಗವಾಗಿ ಸಾಗುತ್ತಿವೆ. 2014ರಲ್ಲಿ ನಮ್ಮ ಮೆಟ್ರೋದ ನೆಟ್‌ವರ್ಕ್ ಕೇವಲ 17 ಕಿಮೀ ಇತ್ತು, ಈಗ ಅದು 70 ಕಿಮೀಗಿಂತ ಹೆಚ್ಚಿದೆ. ರೇಷ್ಮೆ ಕೃಷಿ ಪುನರುಜ್ಜೀವನ ಮತ್ತು ಅಭಿವೃದ್ಧಿಗಾಗಿ ಎನ್‌ಡಿಎ ಸರಕಾರ ಕೆಲಸ ಮಾಡುತ್ತಿದೆ. ಕರ್ನಾಟಕದ ಅಭಿವೃದ್ಧಿ ನಮ್ಮ ಆದ್ಯತೆಯಾಗಿದೆ.ರಾಜ್ಯದಲ್ಲಿ ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದ್ದೇವೆ. ಕಳೆದ ಹತ್ತು ವರ್ಷಗಳಲ್ಲಿ ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಸಂಖ್ಯೆ 25 ರಿಂದ 49 ಕ್ಕೆ ಏರಿದೆ. ಹಿಂದಿನ ಸರ್ಕಾರದ ದುರಾಡಳಿತದಲ್ಲಿ ಜನರು ಎಲ್ಲ ನಿರೀಕ್ಷೆಗಳನ್ನು ಕಳೆದುಕೊಂಡಿದ್ದರು.ಆದರೆ ಎನ್‌ಡಿಎ ಸರಕಾರದ ಅಡಿಯಲ್ಲಿ, ಮೋದಿಯ ಗ್ಯಾರಂಟಿ ಸರಕಾರದ ಮೇಲಿನ ಜನರ ನಂಬಿಕೆಯನ್ನು ಪುನಃಸ್ಥಾಪಿಸಲು ಸಹಾಯ ಮಾಡಿದೆ” ಎಂದರು.
Related Articles
Advertisement
‘2014 ಮತ್ತು 2019 ರಲ್ಲಿ, ನೀವು ದಾಖಲೆಯ ಮತಗಳಿಂದ ನಮ್ಮನ್ನು ಗೆಲ್ಲಿಸುವ ಮೂಲಕ ಬಲವಾದ ಸರಕಾರವನ್ನು ರಚಿಸಲು ಸಹಾಯ ಮಾಡಿದ್ದೀರಿ. ಇದು ಭಾರತವನ್ನು ಬಲಿಷ್ಠಗೊಳಿಸಿತು. ಭಾರತವು ಐದು ಪ್ರಬಲ ಆರ್ಥಿಕತೆಗಳಲ್ಲಿ ಒಂದಾಗಿದೆ. ಇಂದು ಜಗತ್ತಿನ ಎಲ್ಲ ದೇಶಗಳೂ ಭಾರತದೊಂದಿಗೆ ಬೆರೆಯಲು ಮತ್ತು ಭಾರತದಲ್ಲಿ ಹೂಡಿಕೆ ಮಾಡಲು ಬಯಸುತ್ತಿವೆ. ಭಾರತ ದಾಖಲೆ ಪ್ರಮಾಣದಲ್ಲಿ ರಫ್ತು ಮತ್ತು ಉತ್ಪಾದನೆ ಮಾಡುತ್ತಿದೆ. ಕಳೆದ 10 ವರ್ಷಗಳಲ್ಲಿ ನೀವು ಈ ಪರಿವರ್ತನೆಗೆ ಸಾಕ್ಷಿಯಾಗಿದ್ದೀರಿ.ಈ ರೂಪಾಂತರವು ನಿಮ್ಮ ಒಂದು ಮತದಿಂದ ಸಾಧ್ಯವಾಗಿದೆ’ ಎಂದರು.