Advertisement

“ಕಾಂಗ್ರೆಸ್‌ ದುರಾಡಳಿತ ದಿಂದ ಹಿಂದೂಗಳ ಹತ್ಯೆ’

01:39 PM Dec 23, 2017 | |

ದೇವನಹಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್‌ ದುರಾಡಳಿತದಿಂದ ರಾಜ್ಯದಲ್ಲಿ ಹಿಂದೂಗಳ ಹತ್ಯೆ ನಡೆಯುತ್ತಿದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಚ್‌.ಎಂ.ರವಿಕುಮಾರ್‌ ಆರೋಪಿಸಿದರು.

Advertisement

ತಾಲೂಕಿನ ಕೊಯಿರಾ ಗ್ರಾಮದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಎನ್‌.ರಮೇಶ್‌ ಬಾಬು ನಿವಾಸದಲ್ಲಿ ಆವತಿ ಶಕ್ತಿ ಕೇಂದ್ರದ
ವತಿಯಿಂದ ಹಮ್ಮಿಕೊಂಡಿದ್ದ ಬೂತ್‌ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಪರಿವರ್ತನಾ ಯಾತ್ರೆ ನಡೆಯುತ್ತಿದ್ದು, ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಇದರಿಂದ ಕಾಂಗ್ರೆಸ್‌ ಪಕ್ಷದಲ್ಲಿ ಆತಂಕ ಉಂಟಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.

ಹೋರಾಟ: ಮಹದಾಯಿ ಹೋರಾಟ ಸುಮಾರು ವರ್ಷಗಳಿಂದ ನಡೆಯುತ್ತಿದ್ದು, ಅದರ ಪರಿಹಾರಕ್ಕೆ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಗೋವಾ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಬಗೆಹರಿಸಲು ಯತ್ನಿಸುತ್ತಿದ್ದಾರೆ. ಎಂಟು ಜಿಲ್ಲೆಗಳಿಗೆ
ಕುಡಿಯುವ ನೀರು ಪೂರೈಸಲು ಆದ್ಯತೆ ನೀಡುತ್ತಿದ್ದಾರೆ ಎಂದರು. 

ಬಸ್‌ ಇಲ್ಲ: ತಾಲೂಕಿನ ಕೊಯಿರಾ ಸುತ್ತಮುತ್ತಲ ಗ್ರಾಮಗಳಾದ ಶ್ಯಾನಪ್ಪನಹಳ್ಳಿ ಮತ್ತು ಕೊಯಿರಾ ಹೊಸೂರು ಗ್ರಾಮಗಳಿಗೆ ಬಸ್‌ಗಳ ಸೌಲಭ್ಯವಿಲ್ಲದೇ ಜನ ನಡೆದುಕೊಂಡು ವಿಶ್ವನಾಥಪುರ ಕಾಲೇಜು ಹತ್ತಿರದ ಮಾರ್ಗವಾಗಿ ಗ್ರಾಮಕ್ಕೆ 2-3 ಕಿ.ಮೀ. ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಈ ಗ್ರಾಮಗಳಿಗೆ ಬಸ್‌ ನ  ಲಭ್ಯಗಳಿಲ್ಲ. ರಸ್ತೆ ಗುಂಡಿಗಳು ಬಿದ್ದು ರಸ್ತೆ ಹಾಳಾಗಿವೆ. ಹಲವಾರು ಬಾರಿ ಶಾಸಕರ ಗಮನಕ್ಕೂ ತಂದರೂ ದುರಸ್ತಿಯಾಗಿಲ್ಲ.

ಅದಕ್ಕಾಗಿ ಈ ಬಾರಿ ಬಿಜೆಪಿ ಶಾಸಕರನ್ನು ಗೆಲ್ಲಿಸುವ ಮೂಲಕ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ
ಬಂದರೆ ಗ್ರಾಮಗಳಲ್ಲಿರುವ ಸಮಸ್ಯೆಗಳು ಪರಿಹಾರವಾಗುತ್ತದೆ. ಸಂಸದ ವೀರಪ್ಪ ಮೊಯ್ಲಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಪಡಿಸುವುದರಲ್ಲಿ ವಿಫ‌ಲರಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜನ ತಕ್ಕಪಾಠ ಕಲಿಸುತ್ತಾರೆ ಎಂದು ಹೇಳಿದರು.

Advertisement

 ವಿಷಬೀಜ: ತಾಲೂಕು ಸೊಸೈಟಿ ಮಾಜಿ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ ಮಾತನಾಡಿ, ಕಾಂಗ್ರೆಸ್‌ ಒಡೆದು ಆಳುವ ಬ್ರಿಟಿಷರ ಪದ್ಧತಿ ಅನುಸರಿಸುತ್ತಿದೆ. ಜಾತಿ, ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುತ್ತಿದೆ. ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯ ನೋಡಿ ಹಲವಾರು ಜನ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಕಾಂಗ್ರೆಸ್‌ ಮುಕ್ತ ರಾಜ್ಯ ಮಾಡುವುದೇ ನಮ್ಮ ಗುರಿಯಾಗಿದೆ. 

ರಾಜ್ಯ ಬಿಜೆಪಿ ಆದೇಶದಂತೆ ಬೂತ್‌ ಮಟ್ಟದಲ್ಲಿ ಪದಾಧಿಕಾರಿಗಳ ಸಭೆಯನ್ನು ಮಾಡಿ ಶಕ್ತಿಗೊಳಿಸುವ ಕೆಲಸವನ್ನು ಮಾಡುತ್ತಿದೆ. ಆವತಿ, ಕೊಯಿರಾ, ವಿಶ್ವನಾಥಪುರ, ಇತರೆ ಗ್ರಾಪಂ ಮಟ್ಟದಲ್ಲಿ ಸಭೆಗಳನ್ನು ಕರೆದು ಕಾರ್ಯಕರ್ತರ ಸಮಸ್ಯೆ ಆಲಿಸುತ್ತಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ ಎಂದರು. 

ಜಿಲ್ಲಾ ಕಾರ್ಯದರ್ಶಿ ಕೆ.ಎನ್‌.ರಮೇಶ್‌ ಬಾಬು, ಆವತಿ ಶಕ್ತಿ ಕೇಂದ್ರದ ಅಧ್ಯಕ್ಷ ರಮೇಶ್‌, ಪ್ರಧಾನ ಕಾರ್ಯದರ್ಶಿ
ಮಂಜುನಾಥ ಗೌಡ, ಸ್ಲಂ ಮೋರ್ಚಾ ತಾಲೂಕು ಅಧ್ಯಕ್ಷ ದುಗೇìಶ್‌, ಮಾಜಿ ಶಕ್ತಿ ಕೇಂದ್ರದ ಅಧ್ಯಕ್ಷ ಉತ್ನಾಳಪ್ಪ, ಗ್ರಾಪಂ ಸದಸ್ಯ ನಾಗರಾಜ್‌, ಮುಖಂಡ ಕೃಷ್ಣಮೂರ್ತಿ, ಸುಬ್ಬಣ್ಣ, ರಾಮಕೃಷ್ಣ, ಅಶ್ವತ್‌ಗೌಡ, ರಮೇಶ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next