Advertisement
ಶನಿವಾರ ಮಣಿಪಾಲದಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಆಯೋಗಗಳು ಬಂದು ನಕ್ಸಲ್ ಎನ್ಕೌಂಟರ್ ತಪ್ಪು ಅನ್ನುತ್ತದೆ. ನಕ್ಸಲ್ ಪರವಾಗಿ ಮಾತನಾಡುವ ನಗರ ನಕ್ಸಲರ ಬಗ್ಗೆ ಸರಕಾರ ಮೃದು ಧೋರಣೆ ತಾಳುತ್ತದೆ. ಹಿಂದು ಕಾರ್ಯಕರ್ತರ ಮೇಲೆ ಸುಮೊಟೊ ಕೇಸ್ ಹಾಕಲಾಗುತ್ತದೆ. ಸರಕಾರ ತನ್ನ ನಿಲುವಿನಿಂದ ಹೊರಬಂದು ಸಾಧು ಸಂತರಿಗೆ ಗೌರವ ಕೊಡಬೇಕು ಎಂದು ಆಗ್ರಹಿಸಿದರು.
ಬಾಂಗ್ಲಾದಲ್ಲಿ ಇಸ್ಕಾನ್ ಮುಖ್ಯಸ್ಥರ ಮೇಲಿನ ದೌರ್ಜನ್ಯ ಪ್ರಜಾಪ್ರಭುತ್ವ ವಿರೋಧಿ ನಡೆ. ಬಾಂಗ್ಲಾ ಇಸ್ಕಾನ್ ಮುಚ್ಚಲು ಹೊರಟಿದೆ. ಬಾಂಗ್ಲಾದ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಡಿ.4 ಮತ್ತು 5ರಂದು ಪ್ರತಿಭಟನೆ ನಡೆಸಲಿದ್ದೇವೆ. ಉಡುಪಿಯಲ್ಲಿ ಡಿ. 4ರಂದು ಪ್ರತಿಭಟನೆ ನಡೆಯಲಿದೆ ಎಂದರು.