Advertisement

ಮೋದಿ ವಿರುದ್ದ ಕಾಂಗ್ರೆಸ್‌ ಸಂಚು: ಬಿಜೆಪಿ ಪ್ರತಿಭಟನೆ

05:32 PM Jan 11, 2022 | Shwetha M |

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್‌ ಸಂಚು ರೂಪಿಸುತ್ತಿದೆ ಎಂದು ಆರೊಪಿಸಿ ಬಿಜೆಪಿ ಎಸ್ಸಿ ಮೋರ್ಚಾದಿಂದ ನಗರದಲ್ಲಿ ಕಪ್ಪು ಬಟ್ಟೆ ಪ್ರದರ್ಶಿಸಿ, ಮೌನ ಪ್ರತಿಭಟನೆ ನಡೆಸಲಾಯಿತು.

Advertisement

ಸೋಮವಾರ ನರಗದ ಜಿಪಂ ಎದುರು ಇರುವ ಡಾ| ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆ ಬಳಿ ಕಪ್ಪು ಬಟ್ಟೆ ಪ್ರದರ್ಶಿಸಿ, ಮೌನವಾಗಿ ಪ್ರತಿಭಟನೆ ನಡೆಸಿದ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯಕರ್ತರು, ಕಾಂಗ್ರೆಸ್‌ ಹಾಗೂ ಪಂಜಾಬ್‌ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈ ವೇಳೆ ವೂಡಾ ಮಾಜಿ ಅಧ್ಯಕ್ಷ ಭೀಮಾಶಂಕರ ಹದನೂರ ಮಾತನಾಡಿ, ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಪಂಜಾಬ ರಾಜ್ಯದ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ ಆಡಳಿತದ ಸರ್ಕಾರ ಪ್ರಧಾನಿಯನ್ನು 20 ನಿಮಿಷಗಳ ಕಾಲ ಮೇಲ್ಸೇತುವೆ ಮೇಲೆ ಕಾಯುವಂತೆ ಮಾಡಿತ್ತು. ಇದು ಪ್ರಧಾನಿ ಭದ್ರತೆ ವಿಷಯದಲ್ಲಿ ನಡೆಸಿದ ಸಂಚು ಹಾಗೂ ಇಡಿ ದೇಶಕ್ಕೆ ಮಾಡಿದ ಅಪಮಾನ ಎಂದು ಕಿಡಿಕಾರಿದರು.

ಪಂಜಾಬ್‌ ಸರ್ಕಾರವನ್ನು ತಕ್ಷಣ ವಜಾ ಮಾಡಬೇಕು. ಸಂಖ್ಯಾಬಲವನ್ನು ಕಳೆದುಕೊಂಡ ಕಾಂಗ್ರೆಸ್‌ ದಿಕ್ಕಿಲ್ಲದಂತಾಗಿದ್ದು, ಇಂಥ ಹೀನ ಕೃತ್ಯ ಮಾಡುತ್ತಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದೇ ಕೀಳು ಮಟ್ಟದ ಕೃತ್ಯದಲ್ಲಿ ತೊಡಗಿರುವ ಕಾಂಗ್ರೆಸ್‌ ರಾಜಕಾರಣ ಮಾಡುವಲ್ಲಿ ನೈತಿಕತೆ ಕಳೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗೋಪಾಲ ಘಟಕಾಂಬಳೆ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ವಿಶೇಷ ಗೌರವ ತಂದುಕೊಟ್ಟೊರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್‌ ಸಂಚು ರೂಪಿಸಿದ್ದು ಖಂಡನೀಯ. ಪ್ರಧಾನಿ ಭದ್ರತೆ ವಿಷಯದಲ್ಲಿ ನಿರ್ಲಕ್ಷé ತೋರಿದ ಅಲ್ಲಿನ ಸರ್ಕಾರ ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

Advertisement

ಜಿಲ್ಲಾ ಮಾಧ್ಯಮ ಸಂಚಾಲಕ ವಿಜಯ ಜೋಶಿ, ಕಾಂತು ಶಿಂಧೆ, ಮಳುಗೌಡ ಪಾಟೀಲ, ರಾಜಕುಮಾರ ಸಗಾಯಿ, ರಾಜೇಶ ತವಸೆ, ರಾಜಶೇಖರ, ಬಸವರಾಜ ಹೂಗಾರ, ಉದಯ ಕನ್ನೊಳ್ಳಿ, ರಮೇಶ ದೇವಕರ, ಸದಾಶಿವ ಚಲವಾದಿ, ರಮೇಶ ದೇವಕರ, ಉದಕ ಕನ್ನೊಳ್ಳಿ, ಪ್ರಕಾಶ ಇರಕಲ, ಕಾಂತು ಶಿಂದೆ, ಉದಯ ಘಟಕಾಂಬಳೆ, ಪ್ರದೀಪ ಬಿಸನಾಳ, ಮುಕೇಶ, ಬಾಜಿರಾವ ಡೇರೆ, ಪವನ ನಾಯಕ, ರಾಜೇಶ, ಪಿಂಟು, ವಿನಯ, ಕಾಶಿನಾಥ್‌, ಪ್ರವೀಣ ಘಟಕಾಂಭಲೆ, ವಿನಯ ಬಬಲೇಶ್ವರ, ಬಾಬು, ಮಾನೆ, ಮಾಂತು, ಮಾಧು, ಸಚಿವನ, ಯುವರಾಜ, ರಾಜು, ವಿಜಯ, ಸಲೀಂ, ಸುರೇಶ, ಶಬ್ಬೀರ್‌, ಸಾಗರ, ಹನಮಂತ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next