ಕನ್ಯಾಕುಮಾರಿ: ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವ ವಹಿಸಿರುವ “ಭಾರತ್ ಜೋಡೋ ಯಾತ್ರೆ’ ಗುರುವಾರ ಕನ್ಯಾಕುಮಾರಿ ಯಿಂದ ಆರಂಭವಾಗಿದೆ. ಒಟ್ಟು 3,570 ಕಿಮೀ ದೂರದ ಯಾತ್ರೆಯಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ರಾದ ಜೈರಾಂ ರಮೇಶ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಿದ್ದರೂ ಪಕ್ಷದ ಶಕ್ತಿ ಕುಂದಿಲ್ಲ ಎಂದು ಸಾಬೀತುಪಡಿಸುವ ನಿಟ್ಟಿನಲ್ಲಿ ಈ ಯಾತ್ರೆ ನಡೆದಿದೆ.
ವಿವಿಧ ರೀತಿಯ ವಾದ್ಯ ಘೋಷಗಳ ನಡುವೆ ಕನ್ಯಾ ಕುಮಾರಿಯ ವಿವೇಕಾನಂದ ಕಾಲೇಜು ರಸ್ತೆ ಯಿಂದ ಯಾತ್ರೆ ಆರಂಭವಾಯಿತು. ಕನ್ಯಾ ಕುಮಾರಿಯ ಅಗಸ್ತೀಶ್ವರಂ ಎಂಬಲ್ಲಿಗೆ ಯಾತ್ರೆ ಆಗಮಿಸುತ್ತಿ ದ್ದಂತೆಯೇ ಸ್ಥಳೀಯರು ವಯನಾಡ್ ಸಂಸದ ರಾಹುಲ್ ಗಾಂಧಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಯಾತ್ರೆಯ ಮೊದಲ ದಿನದ ಮೊದಲಾರ್ಧದಲ್ಲಿ ಕಾಂಗ್ರೆಸ್ ಮುಖಂಡರು ಒಟ್ಟು 13 ಕಿಮೀ ದೂರ ವನ್ನು ಕ್ರಮಿಸಿದ್ದಾರೆ. ಸಂಜೆಯ ವೇಳೆ ನಡೆದಿದ್ದ ಯಾತ್ರೆ ಯಲ್ಲಿ ರಾಹುಲ್ ಗಾಂಧಿ ಅವರು ಏಳು ಕಿಮೀ ದೂರವನ್ನು ಕ್ರಮಿಸಿದ್ದಾರೆ. ಯಾತ್ರೆಯ ಬಗ್ಗೆ ಮಾತನಾಡಿದ ರಾಜ್ಯಸಭಾ ಸದಸ್ಯ ಜೈರಾಂ ರಮೇಶ್, ಭಾರತ್ ಜೋಡೋ ಯಾತ್ರೆ ನೂರಕ್ಕೆ ನೂರು ಕಾಂಗ್ರೆಸ್‌ಗೆ ಸಂಜೀವಿನಿಯಾಗಿ ಪರಿಣಮಿಸಲಿದೆ ಮತ್ತು ಇದರಿಂದ ಪಕ್ಷಕ್ಕೆ ಅಭೂತಪೂರ್ವ ಜನಬೆಂಬಲ ಮತ್ತೂಮ್ಮೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿವಿಧ ಕಂಪೆನಿಗಳ ಶೂಗಳು: ದೀರ್ಘಾವಧಿಯ ಯಾತ್ರೆಯಾಗಿ ಕಾಂಗ್ರೆಸ್‌ನ ವಿವಿಧ ಮುಖಂಡರು ಮತ್ತು ಕಾರ್ಯಕರ್ತರು ಆ್ಯಸಿಕ್ಸ್, ಅಡಿಡಾಸ್ ಸೇರಿದಂತೆ ವಿವಿಧ ಜನಪ್ರಿಯ ಬ್ರಾಂಡ್‌ಗಳ ಶೂಗಳನ್ನು ಧರಿಸಿದ್ದು ಜನರ ಗಮನ ಸೆಳೆಯಿತು. ರಾಹುಲ್ ಗಾಂಧಿ ಅವರು ಆ್ಯಸಿಕ್ಸ್ ಶೂಗಳನ್ನು ಧರಿಸಿ ನಡೆಗೆ ಆರಂಭಿಸಿದರು.