Advertisement

ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ: ಸಿ ಫೋರ್‌ ಸಮೀಕ್ಷೆ

06:00 AM Mar 27, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಿಫೋರ್‌ ಸಂಸ್ಥೆಯ ಸಮೀಕ್ಷೆ ಹೇಳಿದೆ. ಒಟ್ಟು 224 ಸ್ಥಾನಗಳ ಪೈಕಿ 126 ಸ್ಥಾನಗಳೊಂದಿಗೆ ಕಾಂಗ್ರೆಸ್‌ ಮತ್ತೆ ಅಧಿಕಾರ ಹಿಡಿಯಲಿದೆ. 

Advertisement

ಬಿಜೆಪಿ ಮತಗಳಿಕೆ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲಿದೆಯಾದರೂ 20 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳ ಬೇಕಾಗಿದೆ. ಜೆಡಿಎಸ್‌ ಕೇವಲ 27 ಸ್ಥಾನ ಮಾತ್ರ ಗಳಿಸಲಿದೆ.

ಪಕ್ಷೇತರರು ಒಂದು ಸ್ಥಾನವಷ್ಟೇ ಗಳಿಸಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. 2018ರ ಮಾ. 1ರಿಂದ 25ರ ಅವಧಿಯಲ್ಲಿ 30 ಜಿಲ್ಲೆಗಳ 154 ವಿಧಾನಸಭಾ ಕ್ಷೇತ್ರಗಳ 22357 ಮತದಾರರನ್ನು ಸಂಪರ್ಕಿಸಿದ್ದು, 326 ನಗರ ಮತ್ತು 977 ಗ್ರಾಮೀಣ ಸೇರಿದಂತೆ 2367 ಮತಗಟ್ಟೆಗಳ ವ್ಯಾಪ್ತಿಯಲ್ಲಿ ವಿವಿಧ ಸಮುದಾಯ, ಜಾತಿಗಳನ್ನು ಪ್ರತಿನಿಧಿಸುವವರ ಅಭಿಪ್ರಾಯದೊಂದಿಗೆ ಈ ಸಮೀಕ್ಷಾ ವರದಿ ಸಿದಟಛಿಪಡಿಸಲಾಗಿದೆ ಎಂದು ಸಿ ಫೋರ್‌ ಸಂಸ್ಥೆ ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next