ಉಡುಪಿ: ಭರತನಾಟ್ಯ ಸಹಿತ ವಿವಿಧ ನೃತ್ಯ ಕಲೆಗಳು ಆತ್ಮ ವಿಶ್ವಾಸವನ್ನು ವೃದ್ಧಿಸಿದವು. ನನ್ನ ಪರಿಶ್ರಮ ಅಲ್ಪ ಪ್ರಮಾಣದಲ್ಲಿದ್ದರೂ ದೈವ, ದೇವರ ಆಶೀರ್ವಾದದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಫೆಮಿನಾ 2022 ಮಿಸ್ ಇಂಡಿಯಾ ವಿಜೇತೆ ಸಿನಿ ಶೆಟ್ಟಿ ಹೇಳಿದರು.
ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ, ಉಡುಪಿ ತಾಲೂಕು ಸಮಿತಿ ಹಾಗೂ ಉಡುಪಿ ತಾಲೂಕಿನ ಎಲ್ಲ ಗ್ರಾಮೀಣ ಬಂಟರ ಸಂಘಗಳ ವತಿಯಿಂದ ಮಂಗಳವಾರ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಬೇಸರವಾದಾಗ ನೃತ್ಯ ಮಾಡುತ್ತಿದ್ದೆ; ಮನಸ್ಸು ಹಗುರವಾಗುತ್ತಿತ್ತು. ಸಾಧನೆ ಮಾಡಲು ಮನಸ್ಸು ಪ್ರೇರಣೆ ನೀಡು ತ್ತಿತ್ತು. ನಮ್ಮ ನೆಚ್ಚಿನ ಆಸಕ್ತಿಯ ಕ್ಷೇತ್ರದಲ್ಲಿ ಛಲಬಿಡದೆ ಮುಂದುವರಿಯಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ. ಮುಂದಿನ ದಿನಗಳಲ್ಲಿ ಮಿಸ್ ವರ್ಲ್ಡ್ ಸ್ಪರ್ಧೆಯತ್ತ ಗಮನಹರಿಸಿದ್ದು, ಗೆಲುವು ಪಡೆದ ಬಳಿಕ ಉಡುಪಿಗೆ ಬರುತ್ತೇನೆ. ಉಡುಪಿ, ಮಂಗಳೂರು ಜನರು ನನ್ನ ಮೇಲಿಟ್ಟಿರುವ ಅಭಿಮಾನ, ಪ್ರೀತಿಗೆ ಚಿರಋಣಿ ಎಂದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಅಂತಾರಾಷ್ಟ್ರೀಯ ಬಂಟ್ಸ್ ವೆಲ್ಫೆàರ್ ಟ್ರಸ್ಟ್ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ತಾಲೂಕು ಸಮಿತಿ ಸಂಚಾಲಕ ಜಯರಾಜ ಹೆಗ್ಡೆ, ತಾ| ಬಂಟರ ಸಂಘದ ಸಾಯಿರಾಧಾ ಮನೋಹರ್ ಶೆಟ್ಟಿ, ಮಾತೃ ಸಂಘದ ತಾಲೂಕು ಸಮಿತಿ ಸದಸ್ಯರಾದ ಬಾಲಕೃಷ್ಣ ಹೆಗ್ಡೆ, ಸುಭಾಷ್ ಬಲ್ಲಾಳ್, ಶ್ರೀನಾಥ್ ಹೆಗ್ಡೆ, ಸಾಯಿನಾಥ್ ಶೆಟ್ಟಿ, ಗೀತಾ ನಾಗೇಶ್ ಹೆಗ್ಡೆ, ವಿಶ್ವನಾಥ ರೈ ಹಿರಿಯಡಕ, ಕುರ್ಕಾಲು ದಿನಕರ ಶೆಟ್ಟಿ, ವಿವಿಧ ಗ್ರಾಮೀಣ ಬಂಟರ ಸಂಘದ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಪಡುಬಿದ್ರಿ, ಪುರುಷೋತ್ತಮ ಶೆಟ್ಟಿ ಉಡುಪಿ, ಸಖಾರಾಮ ಶೆಟ್ಟಿ ಅಲೆವೂರು, ವೀಣಾ ಶೆಟ್ಟಿ ಮಹಿಳಾ ವೇದಿಕೆ, ಶಾಂತಾರಾಮ ಸೂಡ ಪೆರ್ಡೂರು, ದಯಾನಂದ ಶೆಟ್ಟಿ ಕಟಪಾಡಿ, ಮನೋಹರ್ ಶೆಟ್ಟಿ ತೋನ್ಸೆ, ಮಹಾಬಲ ಶೆಟ್ಟಿ ನಿಟ್ಟೂರು, ಮೈರ್ಮಾಡಿ ಸುಧಾಕರ ಶೆಟ್ಟಿ ಬ್ರಹ್ಮಾವರ, ಡಾ| ಪ್ರಶಾಂತ್ ಶೆಟ್ಟಿ ಉಪ್ಪೂರು, ಭಾಸ್ಕರ ಶೆಟ್ಟಿ ಹಾವಂಜೆ, ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ಪ್ರಸಾದ್ ಹೆಗ್ಡೆ ಕುಕ್ಕೆಹಳ್ಳಿ, ಬಂಟರ ಚಾವಡಿ ಪರ್ಕಳ ತಾರಾನಾಥ ಹೆಗ್ಡೆ, ಶಿವಪ್ರಸಾದ್ ಶೆಟ್ಟಿ ಕಂಬಳಕಟ್ಟ ಕೊಡವೂರು, ಲೀಲಾಧರ ಶೆಟ್ಟಿ ಕಾಪು, ಶಂಕರ ಶೆಟ್ಟಿ ಪುತ್ತೂರು, ಸಿನಿ ಶೆಟ್ಟಿ ಹೆತ್ತವರಾದ ಸದಾನಂದ ಶೆಟ್ಟಿ, ಹೇಮಾ ಶೆಟ್ಟಿ ದಂಪತಿ ಉಪಸ್ಥಿತರಿದ್ದರು.
ತಾ| ಸಮಿತಿ ಸದಸ್ಯ ಹರೀಶ್ ಶೆಟ್ಟಿ ಚೇರ್ಕಾಡಿ ಸ್ವಾಗತಿಸಿ, ನಿರೂಪಿಸಿದರು. ಸಹ ಸಂಚಾಲಕ ನಿತೀಶ್ ಕುಮಾರ್ ಶೆಟ್ಟಿ ವಂದಿಸಿದರು. ಇಂದಿರಾ ಸುಬ್ಬಯ್ಯ ಹೆಗ್ಡೆ ಪರಿಚಯಿಸಿದರು. ಅಭಿಮಾನಿ ಗಳು ಶುಭ ಹಾರೈಸಿದರು. ಬೆಳ್ಳಿ ಕಿರೀಟ ತೊಡಿಸಿ ಅಭಿನಂದಿಸಲಾಯಿತು.