ಬೆಂಗಳೂರು: ಬಿಜೆಪಿ ಆಡಳಿತದಲ್ಲಿ ತಂದಿದ್ದ ಮತಾಂತರ ನಿಷೇಧ ಕಾಯಿದೆಯನ್ನು ರದ್ದುಗೊಳಿಸುವ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ ಹೊರ ಹಾಕಿದೆ.
ರಾಷ್ಟ್ರಹಿತ, ರೈತ ಹಿತ ಮತ್ತು ಸಂಸ್ಕೃತಿಯ ರಕ್ಷಣೆಯ ಭಾಗವಾಗಿ ನಮ್ಮ ಸರ್ಕಾರ ಎಪಿಎಂಸಿ ಕಾಯ್ದೆ, ಪಠ್ಯ ಪರಿಷ್ಕರಣೆ, ಮತಾಂತರ ನಿಷೇಧ ಮುಂತಾದ ಕಾಯ್ದೆಗಳನ್ನು ಜಾರಿಗೆ ತಂದಿತ್ತು. ರಾಜಕೀಯವಾಗಿ ನಮ್ಮನ್ನು ವಿರೋಧಿಸುವ ಭರದಲ್ಲಿ ಅವುಗಳನ್ನು ಹಿಂತೆಗೆದುಕೊಳ್ಳುವ ನಿರ್ಣಯವನ್ನು ಸಂಪುಟ ಸಭೆಯಲ್ಲಿ ತೆಗೆದುಕೊಳ್ಳುವ ಮೂಲಕ ಕಾಂಗ್ರೆಸ್ ರಾಷ್ಟ್ರವಿರೋಧಿ ಮತ್ತು ರೈತವಿರೋಧಿ ಧೋರಣೆಗಳನ್ನು ಪ್ರದರ್ಶಿಸುತ್ತಿದೆ. ಸಿದ್ದರಾಮಯ್ಯ ಅವರ ಸರ್ಕಾರ ನಿತ್ಯವೂ ಹೊಸ ಅಧಃಪತನ ಕಾಣುತ್ತಿದೆ. ದೇಶವನ್ನೇ ಶಿಥಿಲಗೊಳಿಸಲು ಹವಣಿಸುತ್ತಿರುವ ಕಾಂಗ್ರೆಸ್ ಜನರ ಭಾವನೆಗಳಿಗೆ ಕೊಳ್ಳಿ ಇಡುವ ಮೂಲಕ ಸ್ವತಃ ಶಿಥಿಲಗೊಳ್ಳಲಿದೆ” ಎಂದು ಬಿಜೆಪಿ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದೆ.
ಕಾಂಗ್ರೆಸ್ ಪಕ್ಷವನ್ನು “ಹೊಸ ಮುಸ್ಲಿಂ ಲೀಗ್” ಇದು “ಮೊಹಬ್ಬತ್ ಕಿ ದುಕಾನ್” ರಾಹುಲ್ ಗಾಂಧಿ?” ಎಂದು ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಬಸನಗೌಡ ಆರ್ ಪಾಟೀಲ್ ಯತ್ನಾಳ್ ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದೂ ವಿರೋಧಿ ಅಜೆಂಡಾ ಬಹಿರಂಗವಾಗಿದೆ. ಹಿಂದೂಗಳು ನಾಶವಾಗಬೇಕೆಂದು ನೀವು ಬಯಸುತ್ತೀರಾ? ಬಿಜೆಪಿ ಜಾರಿಗೆ ತಂದ “ಮತಾಂತರ ವಿರೋಧಿ ಕಾನೂನನ್ನು” ಹಿಂಪಡೆಯಲು ಸಿದ್ದರಾಮಯ್ಯ ಮತ್ತು ಅವರ ಸಂಪುಟದ ಮೇಲೆ ಮತಾಂತರ ಮಾಫಿಯಾ ಪ್ರಭಾವ ಬೀರಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. .
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯಿಸಿ, ಕರ್ನಾಟಕದಲ್ಲಿರುವ ಮತಾಂತರ ಮಾಫಿಯಾ, ಬಿಜೆಪಿ ಸರ್ಕಾರ ತಂದಿದ್ದ ಮತಾಂತರ ವಿರೋಧಿ ಕಾನೂನನ್ನು ಹಿಂದೂ ವಿರೋಧಿಗಳು ರದ್ದುಪಡಿಸುವುದನ್ನು ಖಾತ್ರಿಪಡಿಸುತ್ತದೆ. “ಕಾಂಗ್ರೆಸ್ ಹೊಸ ಮುಸ್ಲಿಂ ಲೀಗ್ ಮತ್ತು ಅದು ಹಿಂದೂಗಳನ್ನು ನೋಯಿಸಲು ಯಾವುದೇ ಹಂತಕ್ಕೆ ಹೋಗುತ್ತದೆ” ಎಂದು ಆರೋಪಿಸಿದ್ದಾರೆ.