Advertisement

ಜಾತ್ಯತೀತ ಶಕ್ತಿ ಪ್ರದರ್ಶನಕ್ಕೆ ಸಮಾವೇಶ

03:12 PM Mar 30, 2019 | Team Udayavani |

ಮಾಗಡಿ: ಕೋಮವಾದಿಗಳನ್ನು ದೂರವಿಡಲು ರಾಜ್ಯದಲ್ಲಿ ಜಾತ್ಯಾತೀತ ಶಕ್ತಿಗಳು ಒಂದಾಗಿದ್ದೇವೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಮತ್ತು ಎಚ್‌.ಡಿ.ದೇವೇಗೌಡ ನೇತೃತ್ವದಲ್ಲಿ ಜಾತ್ಯಾತೀತ ಶಕ್ತಿಗಳ ಪ್ರದರ್ಶನಕ್ಕೆ ಮಾ.31ರಂದು ಭಾನುವಾರ ಸಂಜೆ ಬೆಂಗಳೂರಿನ ನೈಸ್‌ ರಸ್ತೆ ಸಮೀಪ ಬೃಹತ್‌ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಶಾಸಕ ಎ.ಮಂಜು ತಿಳಿಸಿದರು.

Advertisement

ಪಟ್ಟಣದಲ್ಲಿ ಶುಕ್ರವಾರ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮಾವೇಶದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದಲೂ ಚುನಾವಣೆ ಯುದ್ಧವೇ ನಡೆಯುತ್ತಿತ್ತು. ಹಾವು ಮುಂಗಿಸಿಯಂತೆ ಕಚ್ಚಾಡಿಕೊಂಡು ರಾಜಕೀಯ ಮಾಡುತ್ತಿದ್ದೆವು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಅಭ್ಯರ್ಥಿ ಡಿ.ಕೆ.ಸುರೇಶ್‌ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುತ್ತಾರೆ ಎಂಬ ನಂಬಿಕೆಯಿಂದ ವೈಯಕ್ತಿಕ ವಿಚಾರಗಳಿಗೆ ಕ್ಷೇತ್ರದ ಜನರನ್ನು ಬಲಿಕೊಡಬಾರದು, ಅಭಿವೃದ್ಧಿಯಲ್ಲೂ ಕುಂಠಿತವಾಗಬಾರದು ಎಂಬ ಚಿಂತನೆಯಿಂದ ಇಲ್ಲಿಯೂ ಮೈತ್ರಿ ಬೆಸುಗೆ ಹಾಕಿಕೊಂಡಿದ್ದೇವೆ.

ಕ್ಷೇತ್ರದ ಅಭಿವೃದ್ಧಿಗಾಗಿ ಭಿನ್ನಾಭಿಪ್ರಾಯ ಬದಿಗೊತ್ತಿ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್‌ಗೆ ಮತ ನೀಡಬೇಕು. ಕ್ಷೇತ್ರದ ಉಭಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಸಮಾವೇಶದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ತಿಳಿಸಿದರು.

ಸಮಾವೇಶಕ್ಕೆ ಸರ್ಕಾರದಿಂದ ಬಸ್‌ ವ್ಯವಸ್ಥೆ: ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ಮಾತನಾಡಿ, ಮೈತ್ರಿ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಿದೆ. ಮತ ಹಾಕುವ ಮೂಲಕ ಕ್ಷೇತ್ರದ ಜನರು ಸರ್ಕಾರದ ಋಣ ತೀರಿಸಬೇಕಿದೆ. ಮಾ.31ರಂದು ನಡೆಯುವ ಮೈತ್ರಿ ಸಮಾವೇಶಕ್ಕೆ 200 ಬಸ್‌ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ.

Advertisement

ಎಲ್ಲವೂ ಮೈತ್ರಿ ಬಸ್ಸುಗಳೇ ಆಗಿರುತ್ತವೆ. ಮೈತ್ರಿ ಬಸ್ಸಿನಲ್ಲೇ ಒಗ್ಗಟಾಗಿ ಮೈತ್ರಿ ಕಾರ್ಯಕರ್ತರು ಸಮಾವೇಶಕ್ಕೆ ತೆರಳಬೇಕಿದೆ. ಪ್ರತ್ಯೇಕ ಬಸ್ಸುಗಳಿಲ್ಲ ಎಂದು ಹೇಳಿದರು. ಕಾಂಗ್ರೆಸ್‌ ಪಕ್ಷದ ವರಿಷ್ಠ ರಾಹುಲ್‌ ಗಾಂಧಿ ಮತ್ತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಸಚಿವರಾದ ಡಿ.ಕೆ.ಶಿವಕುಮಾರ್‌, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್‌,

ಮಾಜಿ ಸಿಎಂ. ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅದಕ್ಕಾಗಿ ಜಾತ್ಯಾತೀತ ಶಕ್ತಿಗಳು ಒಂದಾಗಿದ್ದೇವೆ. ಇದೊಂದು ಅವಕಾಶ ತಮ್ಮೆಲ್ಲರಿಗೂ ಸಿಕ್ಕಿದೆ. ಬೆಂಗಳೂರು ಗ್ರಾಮಾಂತರ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್‌ಗೆ ಮತ ನೀಡಿ ಗೆಲ್ಲಿಸಿಕೊಳ್ಳೋಣ. ಈ ಮೂಲಕ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಸಹಕಾರ ನೀಡಿ ಎಂದರು.

ಈ ವೇಳೆ ಎಂಎಲ್‌ಸಿ ಎಸ್‌.ರವಿ, ತಾಲೂಕು ಜೆಡಿಎಸ್‌ ಅಧ್ಯಕ್ಷ ಪೊಲೀಸ್‌ ರಾಮಣ್ಣ, ಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ತಾಪಂ ಅಧ್ಯಕ್ಷ ಕೆ.ಎಚ್‌.ಶಿವರಾಜು, ಜೆ.ಪಿ.ಚಂದ್ರೇಗೌಡ, ಜಿಪಂ ಸದಸ್ಯರಾದ ಎಚ್‌.ಎನ್‌.ಅಶೋಕ್‌, ದಿವ್ಯಾ, ಮಾಗಡಿ ಕಮಲಮ್ಮ,

ಮಾಜಿ ಅಧ್ಯಕ್ಷ ಎಂ.ಕೆ.ಧನಂಜಯ, ಸಿ.ಜಯರಾಮ್‌, ಬಮೂಲ್‌ ನಿರ್ದೇಶಕ ನರಸಿಂಹಮೂರ್ತಿ, ಎಂ.ಸಿ.ಮಾರೇಗೌಡ, ಇನಾಯಿತ್‌ ಉಲ್ಲಾ ಖಾನ್‌, ಬೆಸ್ಕಾಂ ನಿರ್ದೇಶಕ ಬಿ.ವಿ.ಜಯರಾಮ್‌, ವಿಜಯಕುಮಾರ್‌, ಕೆ.ಎಚ್‌.ಕೃಷ್ಣಮೂರ್ತಿ, ಬೋರ್‌ವೆಲ್‌ ನರಸಿಂಹಯ್ಯ, ತೋ.ವಿ.ಗಿರೀಶ್‌, ಮರಿಗೌಡ, ದೊಡ್ಡಯ್ಯ, ಮರೂರು ವೆಂಕಟೇಶ್‌, ಕಾಂತರಾಜು,

ತಾಪಂ ಸದಸ್ಯರಾದ ನಾರಾಯಣಪ್ಪ, ಕೋರಮಂಗಲ ಶ್ರೀನಿವಾಸ್‌, ಬಿ.ಟಿ.ವೆಂಕಟೇಶ್‌, ಗಾಣಕಲ್‌ ನಟರಾಜ್‌, ರಮೇಶ್‌, ಅಣ್ಣೇಗೌಡ, ಕುದೂರು ಗ್ರಾಪಂ ಅಧ್ಯಕ್ಷ ಕೆ.ಎಂ.ರಾಘವೇಂದ್ರ, ಕೆಇಬಿ ರಾಜಣ್ಣ, ಹೊಸಹಳ್ಳಿ ಮುನಿರಾಜು, ರಂಗಣ್ಣ, ಯೋಗಣ್ಣ, ಸೀಗೇಕುಪ್ಪೆ ಶಿವಣ್ಣ, ಅನಿತಾ, ಬೆಳಗವಾಡಿ ಸುರೇಶ್‌, ಸಿದ್ದಪ್ಪ, ಕುಮಾರ್‌, ಬಸವರಾಜು, ಡಿಂಗ್ರಿ ನರಸಿಂಹಯ್ಯ, ಲೋಕೇಶ್‌ ಹಾಜರಿದ್ದರು.

ಮಾಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಮೈತ್ರಿ ಧರ್ಮ ಪಾಲನೆಯಿಂದ ಜೋಡಿ ಎತ್ತುಗಳು ಒಂದಾಗಿದ್ದವು. ಇದೊಂದು ಐತಿಹಾಸಿಕ ದಿನ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದರು. ಇದೇ ಧರ್ಮ ಸ್ಥಳೀಯ ಚುನಾವಣೆಗೂ ಮುಂದುವರಿಯಲಿದೆ.
-ಎಚ್‌.ಸಿ.ಬಾಲಕೃಷ್ಣ, ಮಾಜಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next