Advertisement

ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ಧ ಜಾತಿನಿಂದನೆ ದೂರು

08:30 AM Apr 11, 2018 | Team Udayavani |

ಬೆಳ್ತಂಗಡಿ: ಕಲ್ಲಡ್ಕ ಪ್ರಭಾಕರ ಭಟ್‌ ಅವರು ದೈವ ನರ್ತನದಲ್ಲಿ ತೊಡಗಿರುವ ನಲಿಕೆ ಸಮುದಾಯವನ್ನು ಸಾರ್ವಜನಿಕವಾಗಿ ನಿಂದಿಸಿ, ಅವಮಾನಗೈದು ಜಾತಿನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಬೆಳ್ತಂಗಡಿ ನಲಿಕೆ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ಎಸ್‌. ಪ್ರಭಾಕರ್‌ ಶಾಂತಿಗೋಡು ಮಂಗಳವಾರ ದೂರು ದಾಖಲಿಸಿದ್ದಾರೆ.

Advertisement

ಬಳಿಕ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ನಲಿಕೆಯವರ ಸಮಾಜ ಸೇವಾ ಸಂಘದ ನಿಕಟಪೂರ್ವ ಅಧ್ಯಕ್ಷ ಸೇಸಪ್ಪ ನಲಿಕೆ ಮಾತನಾಡಿದರು. ಆರ್‌ಎಸ್‌ಎಸ್‌ ನಾಯಕ ಕಲ್ಲಡ್ಕ ಪ್ರಭಾಕರ ಭಟ್‌ ಭೂತ ಕಟ್ಟುವವನಿಗೆ ತಲೆ ಸರಿ ಇಲ್ಲ ಎಂದು ಸಾರ್ವಜನಿಕವಾಗಿ ನಿಂದಿಸಿ, ಅವಮಾನಿಸಿದ್ದು, ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಅವರ ವಿರುದ್ಧ ಪ್ರಕರಣ ದಾಖ ಲಿಸಿ ಜೈಲಿಗಟ್ಟಬೇಕು ಎಂದರು.

ದೈವ ನರ್ತನ ಸಂದರ್ಭ ಯಾರೇ ಬಂದರೂ ಭಕ್ತಿಯಿಂದ ಪ್ರಸಾದ ಹಾಗೂ ಬೂಳ್ಯ ನೀಡುವುದು ತುಳುನಾಡಿನ ಸಂಪ್ರದಾಯ. ಜನರ ನಂಬಿಕೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದವರು ಹೇಳಿದರು.

ಪ್ರಭಾಕರ ಭಟ್‌ ನೇತೃತ್ವದಲ್ಲಿರುವ ಕಲ್ಲಡ್ಕದ ಶ್ರೀರಾಮ ಮಂದಿರಕ್ಕೂ ಮುಸ್ಲಿಮರು ಭಕ್ತಿಯಿಂದ ಹೋಗಿದ್ದಾರೆ. ಮೊದಲು ಈ ಶ್ರೀರಾಮ ಮಂದಿರಕ್ಕೆ ಬ್ರಹ್ಮಕಲಶ ಮಾಡಲಿ. ಸಂವಿಧಾನ ವಿರೋಧಿ ಹೇಳಿಕೆ ನೀಡುವ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಎಲ್ಲ ದಲಿತ ಸಂಘಟನೆಗಳೊಂದಿಗೆ ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಕೀಳು ಮಟ್ಟದ ಹೇಳಿಕೆ ಸರಿಯಲ್ಲ
ಅಧ್ಯಕ್ಷ ಎಸ್‌. ಪ್ರಭಾಕರ ಶಾಂತಿಕೋಡಿ ಮಾತನಾಡಿ, ಸಂಕುಚಿತ ಮನಸ್ಸಿನವರಿಂದಾಗಿ ಬುದ್ಧಿವಂತರ ಜಿಲ್ಲೆಯೆಂದು ಹೆಸರಾದ ಜಿಲ್ಲೆಗೆ ಕಳಂಕ ಬರುತ್ತಿದೆ. ಅವರು ರಾಜಕೀಯ ಮಾಡಲಿ, ಆದರೆ ಒಂದು ಸಮುದಾಯದ ಕುರಿತು ಕೀಳು ಮಟ್ಟದ ಹೇಳಿಕೆ ನೀಡುವುದು ಸರಿಯಲ್ಲ ಎಂದರು.

Advertisement

ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಶ್ಯಾಮ್‌ಸುಂದರ್‌, ದೈವ ನರ್ತಕ ಜನಾರ್ದನ ಬಳ್ಳಮಂಜ, ಯುವ ವೇದಿಕೆ ಅಧ್ಯಕ್ಷ ಹರೀಶ್‌ ನಾವೂರು, ಉಪಾಧ್ಯಕ್ಷ ರಾಮ್‌ ಶಿಶಿಲ ಸದಸ್ಯರಾದ ವಿನಯಕುಮಾರ್‌ ಎರುಕಡಪು, ಸೀತಾರಾಮ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next