ಹೊಸದಿಲ್ಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಸಂಘಟನ ಚತುರರೆಂದು ಪರಿಗಣಿ ಸಲಾಗಿರುವ ನಾಲ್ವರು ಪ್ರಭಾವಿ ನಾಯಕರ ಹೆಸರು ಕೇಳಿಬಂದಿದೆ.
ಮುಂಚೂಣಿಯಲ್ಲಿ ಕೇಳಿಬರುತ್ತಿರುವ ಹೆಸರು ವಿನೋದ್ ತಾಬ್ಡೆ. ಪ್ರಸ್ತುತ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಆಗಿರುವ ಅವರು ಮಹಾರಾಷ್ಟ್ರದ ಮಾಜಿ ಸಚಿವರು.
ಮತ್ತೊಂದು ಪ್ರಭಾವಿ ಹೆಸರು ಕೆ. ಲಕ್ಷ್ಮಣ್. ಬಿಜೆಪಿ ಒಬಿಸಿ ಮೋರ್ಚಾದ ಮುಖ್ಯಸ್ಥರಾದ ಅವರು ತೆಲಂಗಾಣದಲ್ಲಿ ಪಕ್ಷದ ಅಧ್ಯಕ್ಷರಾಗಿದ್ದರು. ಪ್ರಸಕ್ತ ಪಶ್ಚಿಮ ಬಂಗಾಲ, ತೆಲಂಗಾಣ, ಒಡಿಶಾ ರಾಜ್ಯಗಳ ಬಿಜೆಪಿ ಉಸ್ತುವಾರಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿರುವ ಸುನಿಲ್ ಬನ್ಸಾಲ್ ಹೆಸರೂ ಕೇಳಿಬರುತ್ತಿದೆ. ರಾಜ್ಯಸಭೆಯಲ್ಲಿ ರಾಜಸ್ಥಾನವನ್ನು ಪ್ರತಿನಿಧಿಸುತ್ತಿರುವ ಓಂ ಮಾಥುರ್ ಹೆಸರೂ ಕೂಡ ಕೇಳಿಬರುತ್ತಿದೆ.ಈ ಮಧ್ಯೆ ಬಿಜೆಪಿ ಪಕ್ಷದ ಅಧ್ಯಕ್ಷರ ಸ್ಥಾನಕ್ಕೆ ಮೊದಲ ಬಾರಿಗೆ ಮಹಿಳೆಯನ್ನು ಆಯ್ಕೆ ಮಾಡುವ ಚಿಂತನೆಯನ್ನೂ ಹೊಂದಿದೆ ಎನ್ನಲಾಗಿದೆ.
ಯಾರು ಸ್ಪರ್ಧೆಯಲ್ಲಿ ?
-ವಿನೋದ್ ತಾಬ್ಡೆ, ಕೆ. ಲಕ್ಷ್ಮಣ್, ಬನ್ಸಾಲ್, ಮಾಥುರ್
-ಮೊದಲ ಬಾರಿಗೆ ಮಹಿಳೆಯ ಆಯ್ಕೆಗೂ ಚಿಂತನೆ