Advertisement
ಹೀಗೆ ನಾವು ನೀವೆಲ್ಲರೂ ಸಮಯವನ್ನು ಹೇಗೆ ಬಳಸಬೇಕು ಎಂಬುದರ ಅರಿವಿಲ್ಲದೇ ಸಮಯವನ್ನು ವ್ಯರ್ಥ ಮಾಡುತ್ತಿದ್ದೇವೆ. ಕೆಲವರಂತೂ ನನಗೆ ಸಮಯವೇ ಸಿಗುತ್ತಿಲ್ಲವೆಂದು ಹೇಳುವುದುಂಟು. ಸಮಯವನ್ನು ಸೂಕ್ತವಾಗಿ ಬಳಸಿಕೊಳ್ಳುವುದೂ ಒಂದು ಕಲೆ. ಆ ಕಲೆಯನ್ನು ಕರಗತ ಮಾಡಿಕೊಂಡವರು ಅಸಾಮಾನ್ಯ ವ್ಯಕ್ತಿಗಳಾಗಿದ್ದಾರೆ. ಸಮಯ ಯಾರಿಗೂ ಕಾಯುವುದಿಲ್ಲ. ಹೋದ ಕಾಲ ಮತ್ತೆ ಬಾರದು. ಇರುವ ಸಮಯವನ್ನು ಸದ್ಬಳಕೆ ಮಾಡಿಕೊಳ್ಳುವುದು ಆವಶ್ಯಕವಾದುದು.
Related Articles
Advertisement
ಮನುಷ್ಯನಿಗೆ ಒಂದು ಕೆಟ್ಟ ಸ್ವಭಾವವಿದೆ. ಮಾಡಬೇಕಾದ ಕೆಲಸವೂ ಕುತ್ತಿಗೆಗೆ ಬರುವ ವರೆಗೂ ಮಾಡುವುದಿಲ್ಲ. ಇದು ಸಾಕಷ್ಟು ಒತ್ತಡವನ್ನು ನೀಡುತ್ತದೆ. ಅಂದಿನ ಕೆಲಸವನ್ನು ಅಂದೇ ಮುಗಿಸುವುದು ಒಳ್ಳೆಯದು. ಒಂದು ಕೆಲಸವನ್ನು ಇಂತಿಷ್ಟು ದಿನಗಳಲ್ಲಿ ಮುಗಿಸುತ್ತೇನೆ ಎಂದು ಗಡುವು ಹಾಕಿಕೊಳ್ಳಿ. ಆ ಅವಧಿಯಲ್ಲಿ ನೀವು ನಿಮ್ಮ ಕೆಲಸವನ್ನು ಮುಗಿಸುತ್ತೀರಿ.
ನಿಮ್ಮ ಬಳಿ ಸದಾ ಇರುವಂತೆ ಚಿಕ್ಕ ಕಾಗದದ ತುಂಡು ಹಾಗೂ ಪೆನ್ನನ್ನು ಇಟ್ಟುಕೊಳ್ಳಿ. ನಿಮ್ಮಲ್ಲಿ ಬರುವ ಹೊಸ ಆಲೋಚನೆಗಳನ್ನು ಆಗಿಂದಾಗ್ಗೆ ಬರೆದಿಡಿ. ಕೇಳಿಸಿಕೊಳ್ಳುವುದು ಒಂದು ಕಲೆ. ಆ ಕಲೆಯನ್ನು ಕರಗತ ಮಾಡಿಕೊಳ್ಳಿ. ನೀವು ನಿರ್ವಹಿಸುವ ಪ್ರತಿ ಕೆಲಸದಲ್ಲಿ ಸಮಯವನ್ನು ಉಳಿಸಲು ಪ್ರಯತ್ನಿಸಿ. ನೀವು ಅಭ್ಯಸಿಸುವ ಕೊಠಡಿ ಹಾಗೂ ಟೇಬಲ್ ಸ್ವಚ್ಛವಾಗಿರಲಿ. ಬೇಡವಾದ ಕಡತಗಳನ್ನು ಆಗಿಂದಾಗ್ಗೆ ವಿಲೇವಾರಿ ಮಾಡುತ್ತಿರಿ.
ನಿಮ್ಮ ಕೆಲಸಗಳಲ್ಲಿ ಬದ್ಧತೆ ಇರಲಿ. ಮೊಬೈಲ್ ಹಾಗೂ ನಿಮ್ಮನ್ನು ಋಣಾತ್ಮಕವಾಗಿ ಪ್ರಚೋದಿಸುವ ಗೆಳೆಯರಿಂದ ಆದಷ್ಟು ದೂರವಿರುವುದು ಸೂಕ್ತ. ಮಾಡಬೇಕಾದ ಕೆಲಸವನ್ನು ಒಂದು ಚಿಕ್ಕ ಕಾಗದದ ಮೇಲೆ ಬರೆದು ಆಗಾಗ ಅದನ್ನು ಗಮನಿಸುತ್ತಿದ್ದರೆ ತಾನಾಗಿಯೇ ಕೆಲಸ ಮುಗಿಸುವ ಹುಮ್ಮಸ್ಸು ಬರುತ್ತದೆ. ನಮ್ಮ ಕೆಲಸದಲ್ಲಿ ಬದ್ಧತೆ ಬಹಳ ಮುಖ್ಯ. ಸೂಕ್ತ ಯೋಜನೆಯನ್ನು ಮಾಡಿಕೊಂಡ ಕಾರ್ಯ ಪ್ರವೃತ್ತರಾದರೆ ಯಶಸ್ಸಿಗೆ ಹತ್ತಿರವಾಗುತ್ತೀರಿ.
ಸಂತೋಷ್ ಇರಕಸಂದ್ರ
ವಿ.ವಿ., ತುಮಕೂರು