Advertisement

ಪಂಚರಾಜ್ಯ ಚುನಾವಣೆಗೆ ವೆಚ್ಚ ನಿಗದಿ ಮಾಡಿದ ಆಯೋಗ

11:45 AM Jan 07, 2022 | Team Udayavani |

ಬೆಂಗಳೂರು : ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಅಭ್ಯರ್ಥಿಗಳಿಗೆ ವೆಚ್ಚದ ಮಿತಿಯನ್ನು‌ ನಿಗದಿಗೊಳಿಸಿದೆ. ಗೋವಾ, ಪಂಜಾಬ್, ಉತ್ತರ ಪ್ರದೇಶ, ಮಣಿಪುರ, ಉತ್ತರಖಂಡ ರಾಜ್ಯಗಳಿಗೆ ಈ ವರ್ಷ ಚುನಾವಣೆ ನಡೆಯಲಿದ್ದು, ಆಯೋಗ ತನ್ನ ಪ್ರಕ್ರಿಯೆ ಆರಂಭಿಸಿದೆ.

Advertisement

ಐದು ರಾಜ್ಯಗಳಲ್ಲಿ ನಿರ್ಣಾಯಕ ವಿಧಾನಸಭಾ ಚುನಾವಣೆಗೆ ಮುನ್ನ, ಭಾರತೀಯ ಚುನಾವಣಾ ಆಯೋಗ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿಯನ್ನು ಹೆಚ್ಚಿಸಿದೆ.

ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈಗಿರುವ ₹ 20 ಲಕ್ಷದಿಂದ  ₹ 28 ಲಕ್ಷಕ್ಕೆ ಮತ್ತು ₹ 28 ಲಕ್ಷದಿಂದ 40 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಸಂಸತ್ ಕ್ಷೇತ್ರಗಳಲ್ಲಿ ಮಿತಿಯನ್ನು ಪ್ರಸ್ತುತ ಇರುವ ₹ 54 ಲಕ್ಷದಿಂದ ₹ 75 ಲಕ್ಷಕ್ಕೆ ಮತ್ತು ₹ 70 ಲಕ್ಷದಿಂದ ₹ 95 ಲಕ್ಷಕ್ಕೆ ಏರಿಸಲಾಗಿದೆ ಎಂದು ಚುನಾವಣಾ ಸಮಿತಿ ಪ್ರಕಟಣಯಲ್ಲಿ ತಿಳಿಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

Advertisement

Udayavani is now on Telegram. Click here to join our channel and stay updated with the latest news.

Next