Advertisement
ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಸೋಮವಾರದಿಂದ ಆರಂಭವಾಗಿರುವ ಚರಿತ ದಾಸಪ್ಪ ಅವರ ಬ್ರಹ್ಮಾಂಡ ಶೀರ್ಷಿಕೆಯಡಿಯ ಚಿತ್ರಕಲಾ ಪ್ರದರ್ಶನದಲ್ಲಿ ಬದುಕಿನ ಬಿಂಬ ತೋರುವ ಚಿತ್ರಗಳಿವೆ. ಡಿ.9ರವರೆಗೂ ಚಿತ್ರಕಲಾ ಪ್ರದರ್ಶನ ನಡೆಲಿದೆ. ಅಣುವಿನಿಂದ ಆಕಾಶದೆತ್ತರಕ್ಕೆ ಬೆಳೆಯುವ ಈ ಬದುಕಿನಲ್ಲಿ ಎಲ್ಲವೂ ತಾತ್ಕಲಿಕವೆಂದು ತೋರಿಸುವ ಚಿತ್ರಗಳೂ ಇವೆ.
Related Articles
Advertisement
ಬದುಕಿನ ಹೋರಾಟಗಳನ್ನು ಮುಗಿಸಿ ತಣ್ಣಗೆ ಹರಿಯುತ್ತಿರುವ ನದಿಯ ದಂಡೆ ಮೇಲೆ ಕುಳಿತಿರುವ ಹುಡುಗಿಯ ಚಿತ್ರ ಜೀವನದ ಭರವಸೆ ಕಳೆದಂತೆ ಕಾಣುತ್ತದೆ. ನಂತರ ಕಾಣುವ ಅರಳಿನಿಂತ ಗುಲಾಬಿ ಹೂವುಗಳ ಚಿತ್ರ ಬದುಕಿನ ವಸಂತಕಾಲದಂತೆ ಬಿಂಬಿತವಾಗುತ್ತದೆ.
ಚಿತ್ರಕಲಾ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷೆ ಪ್ರೊ.ಎಂ.ಜೆ.ಕಮಲಾಕ್ಷಿ, ಕಲಾ ಇತಿಹಾಸಕಾರ ಸುರೇಶ ಜಯರಾಮ, ವಿಮರ್ಶಕ ಎಸ್.ಆರ್.ವಿಜಯಶಂಕರ್ ಮತ್ತಿತರರು ಹಾಜರಿದ್ದರು.
ಎಚ್.ಸಿ.ದಾಸಪ್ಪ ಮತ್ತು ಯಶೋಧರ ದಾಸಪ್ಪ ಅವರು ಸಾರ್ವಜನಿಕ ಜೀವನದಲ್ಲಿ ಅನೇಕ ಕೊಡುಗೆ ನೀಡಿದ್ದಾರೆ. ಅವರ ಮೊಮ್ಮಗಳು ಚಿತ್ರಕಲೆಯ ಮೂಲಕ ಸಮಾಜಕ್ಕೆ ಸ್ಪೂರ್ತಿ ತುಂಬುತ್ತಿದ್ದಾರೆ.-ಚೀರಂಜೀವಿ ಸಿಂಗ್, ನಿವೃತ್ತ ಐಎಎಸ್ ಅಧಿಕಾರಿ. ಮನಸ್ಸಿನ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ ಕಲೆ ಎಲ್ಲರನ್ನು ಒಮ್ಮೆಲೆ ಸೆರೆಹಿಡಿಯಲಿದೆ. ಚರಿತ ದಾಸಪ್ಪ ಅವರ ಕಲಾಕೃತಿಗಳ ಪರಿಕಲ್ಪನೆ ಅದ್ಭುತವಾಗಿದೆ. ಬ್ರಹ್ಮಾಂಡ ಪರಿಕಲ್ಪನೆಯಲ್ಲಿ ಶಾಶ್ವತದಿಂದ ತಾತ್ಕಲಿಕದವರೆಗೆ ಬದುಕಿನ ಆಯಾಮಗಳನ್ನು ಬಿಡಿಸಿಟ್ಟಿದ್ದಾರೆ.
-ಡಾ.ಬಿ.ಎಲ್.ಶಂಕರ್, ಕರ್ನಾಟಕ ಚಿತ್ರಕಲಾ ಪರಿಷತ್‌ನ ಅಧ್ಯಕ್ಷ