ಹೊಸದಿಲ್ಲಿ: ಕೋವಿಡ್-19 ಕಾರಣದಿಂದ ಮುಚ್ಚಲ್ಪಟ್ಟಿರುವ ಕಾಲೇಜುಗಳ ಮರು ಆರಂಭಿಸಲು ಕೊನೆಗೂ ದಿನಾಂಕ ನಿಗದಿಯಾಗಿದೆ. ಕಾಲೇಜುಗಳ ಮರುಆರಂಭದ ಬಗ್ಗೆ ಯುಜಿಸಿ ಮಾರ್ಗಸೂಚಿ ಪ್ರಕಟಿಸಿದ್ದು, ನವೆಂಬರ್ ಒಂದರಿಂದ ಕಾಲೇಜುಗಳು ಆರಂಭವಾಗಲಿದೆ.
ಪ್ರಸ್ತಾವಿತ ಮಾರ್ಗಸೂಚಿಯ ಪ್ರಕಾರ ನವೆಂಬರ್ 1ರಿಂದ ಕಾಲೇಜು ತರಗತಿಗಳು ಆರಂಭವಾಗಲಿದೆ. ಮೊದಲ ಸೆಮಿಸ್ಟರ್ ಪರೀಕ್ಷೆಗಳು 2021ರ ಮಾರ್ಚ್ 8ರಿಂದ ಮಾರ್ಚ್ 26ರ ವರೆಗೆ ನಡೆಯಲಿದೆ. ಮಾರ್ಚ್ 27ರಿಂದ ಎಪ್ರಿಲ್ 4ರವರೆಗೆ ಸೆಮಿಸ್ಟರ್ ಬ್ರೇಕ್ ಇರಲಿದೆ.
ಎರಡನೇ ಸೆಮಿಸ್ಟರ್ ನ ತರಗತಿಗಳು 2021ರ ಎಪ್ರಿಲ್ 5ರಿಂದ ಆರಂಭವಾಗಲಿದೆ. ಇದರ ಪರೀಕ್ಷೆಗಳು ಆಗಸ್ಟ್ 9ರಿಂದ 21ರವರೆಗೆ ನಡೆಯಲಿದೆ. 2021-22ನೇ ಸಾಲಿನ ತರಗತಿಗಳು 2021ರ ಆಗಸ್ಟ್ 30ರ ನಂತರ ಆರಂಭವಾಗಲಿದೆ ಎಂದು ಪ್ರಸ್ತಾವಿತ ಮಾರ್ಗಸೂಚಿಯಲ್ಲಿ ಯುಜಿಸಿ ತಿಳಿಸಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳಕ್ಕೆ ಹೆಚ್ಚು ಅಲ್‌ಖೈದಾ ನಂಟು: ಎನ್‌ಐಎ
ನವೆಂಬರ್ ಒಂದರಿಂದ ಈ ಬಾರಿಯ ತರಗತಿಗಳು ಆರಂಭವಾಗುವ ಕಾರಣ ಅಕ್ಟೋಬರ್ 31ರ ಒಳಗೆ ಪ್ರಥಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಯುಜಿಸಿ ತಿಳಿಸಿದೆ.