Advertisement

ಸ್ವದೇಶಿ ವಸ್ತು ಬಳಸಿ ಆರ್ಥಿಕ ಅಭಿವೃದ್ಧಿಗೆ ಸಹಕರಿಸಿ: ಶಿರವಾಳಿ

05:04 PM Aug 16, 2017 | |

ಶಹಾಪುರ: ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಮಿತಿ ಮೀರುತ್ತಿದ್ದು, ಅಲ್ಲದೆ ಗಡಿ ತಕರಾರುಗಳಿಂದ ನಡೆಯುವ ಯುದ್ಧ ರಂಗದಲ್ಲಿ ದೇಶದ ಸಾವಿರಾರು ಯೋಧರು ಬಲಿದಾನವಾಗುತ್ತಿದ್ದಾರೆ. ಅವರ ಬೆಂಬಲಕ್ಕೆ ಸಹಕರಿಸಲು ನಾವೆಲ್ಲ ಸಿದ್ಧರಿರಬೇಕು ಎಂದು ಶಾಸಕ ಗುರು ಪಾಟೀಲ್‌ ಶಿರವಾಳ ಹೇಳಿದರು. ನಗರದ ಪ್ರಥಮ ದರ್ಜೆ ಕಾಲೇಜು ಹತ್ತಿರದ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ನಡೆದ 71ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ದೇಶದ ಗಡಿಯಲ್ಲಿ ರಾತ್ರಿ ಹಗಲು ನಿಂತು ದೇಶ ಕಾಯುತ್ತಿರುವ ಯೋಧರ ಸಬಲೀಕರಣಕ್ಕೆ ಅವರ ಶಕ್ತಿಗೆ ಇನ್ನಷ್ಟು ಬಲ ತುಂಬಬೇಕಾದ್ದಲ್ಲಿ, ಹಲವು ಕ್ರಮಗಳಿವೆ. ಕನಿಷ್ಟ ಅವುಗಳನ್ನಾದರೂ ಅಳವಡಿಸಿಕೊಳ್ಳುವ ಮೂಲಕ ದೇಶದ ಸುಭದ್ರತೆಗೆ ಕೈ ಜೋಡಿಸೋಣ. ಸ್ವದೇಶಿ ಸಾಮಾಗ್ರಿಗಳನ್ನು ಬಳಸುವ ಮೂಲಕ ದೇಶದ ಅಭಿವೃದ್ಧಿಗೆ ಸಹಕರಿಬಹುದು. ವಿರೋಧಿದೇಶದ ಸಾಮಾಗ್ರಿಗಳೇಕೆ ಖರೀ ಸಬೇಕು. ಅಲ್ಲದೆ ಕೆಲವು ವರ್ಷಗಳಿಂದ ವಿದೇಶಿ ಕಂಪನಿಗಳಿಂದ ಒಡಂಬಡಿಕೆ ಮಾಡಿಕೊಂಡ ಕಾರಣ ವಿದೇಶಿ ಕಂಪನಿಗಳು ದೇಶದಲ್ಲಿ ರಾರಾಜುಸುತ್ತಿವೆ. ಹಿಂದಿನ ಸರ್ಕಾರಗಳು ಮಾಡಿದ ತಪ್ಪನ್ನು ಪ್ರಸ್ತುತ ಸರ್ಕಾರ ಮುಂದಿನ ಸರ್ಕಾರಗಳು ಮಾಡದಿರಲಿ. ಪಕ್ಷಬೇಧ ಮರೆತು ದೇಶದ ಸಮಗ್ರ ಅಭಿವೃದ್ಧಿಗೆ ಸನ್ನದ್ಧರಾಗಬೇಕಿದೆ. ವಿದೇಶಿ ವಸ್ತುಗಳನ್ನು ಬಳಸುವುದರಿಂದ ದೇಶದ ಅಭದ್ರತೆಯಡೆಗೆ ಆರ್ಥಿಕವಾಗಿ ಹಿಂದುಳಿಯಲು ಕಾರಣ ಆಗುತ್ತಿದೆ. ಕಾರಣ ಸ್ವದೇಶಿ ಜಾಗೃತಿ ಅಗತ್ಯವಾಗಿದ್ದು, ಆದಷ್ಟು ಸ್ವದೇಶಿಗೆ ಮಾನ್ಯತೆ ನೀಡುವ ಮೂಲಕ ದೇಶದ ಸಮೃದ್ಧಿಗೆ ಸರ್ವರು ಕೈ ಜೋಡಿಸಬೇಕು ಎಂದರು. ತಹಶೀಲ್ದಾರ ಸೋಮಶೇಖರ, ತಾಪಂ ಅಧ್ಯಕ್ಷ ಹೊನ್ನಪ್ಪಗೌಡ ಹೋತಪೇಟ, ತಾಪಂ ಸಿಇಒ ಕಾರ್ಯ ನಿರ್ವಹಣಾಧಿಕಾರಿ ಎಸ್‌.ಕೆ. ಟಕ್ಕಳಕಿ, ಕೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ನಗರದ ಹಲವು ಶಾಲಾ ಮಕ್ಕಳು ಭಾಗವಹಿಸಿದ್ದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next