Advertisement

ಕಾಫಿ ದೈತ್ಯ ಸ್ಟಾರ್ ಬಕ್ಸ್ ಗೆ ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ ಹೊಸ ಸಿಇಒ

04:16 PM Sep 02, 2022 | Team Udayavani |

ವಾಷಿಂಗ್ಟನ್: ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ ಅವರನ್ನು ಕಾಫಿ ದೈತ್ಯ ಸ್ಟಾರ್‌ ಬಕ್ಸ್‌ ನ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಎಂದು ಹೆಸರಿಸಲಾಗಿದೆ.

Advertisement

ಲಕ್ಷ್ಮಣ್ ನರಸಿಂಹನ್ ಅವರು ಅಕ್ಟೋಬರ್ 1 ರಂದು ಕಂಪನಿಗೆ ಸೇರಿಕೊಳ್ಳಲಿದ್ದಾರೆ. ಏಪ್ರಿಲ್ 2023ರಲ್ಲಿ ಪ್ರಸ್ತುತ ಸಿಇಒ ಹೋವರ್ಡ್ ಶುಲ್ಟ್ಜ್ ನಿರ್ಗಮನದ ಬಳಿಕ ಲಕ್ಷ್ಮಣ್ ಈ ಸ್ಥಾನವನ್ನು ಅಲಂಕರಿಸಲಿದ್ದಾರೆ.

ಲಕ್ಷ್ಮಣ್ ನರಸಿಂಹನ್ ಅವರು ರೆಕಿಟ್‌ ಸಂಸ್ಥೆಯ ಸಿಇಒ ಆಗಿದ್ದರು. ರೆಕಿಟ್ ಸಂಸ್ಥೆಯು ಡ್ಯೂರೆಕ್ಸ್ ಕಾಂಡೋಮ್‌ಗಳು, ಎನ್‌ಫಾಮಿಲ್ ಬೇಬಿ ಫಾರ್ಮುಲಾ ಮತ್ತು ಮ್ಯೂಸಿನೆಕ್ಸ್ ಕೋಲ್ಡ್ ಸಿರಪ್ ಅನ್ನು ಸಹ ತಯಾರಿಸುತ್ತದೆ.

55 ವರ್ಷ ವಯಸ್ಸಿನ ಲಕ್ಷ್ಮಣ್ ಈ ಹಿಂದೆ ಪೆಪ್ಸಿಕೋದ ಜಾಗತಿಕ ಮುಖ್ಯ ವಾಣಿಜ್ಯ ಅಧಿಕಾರಿಯಾಗಿ ಕೆಲಸ ಮಾಡಿದ್ದರು.

ಲಕ್ಷ್ಮಣ್ ಅವರು ಶಕ್ತಿಯುತ ಗ್ರಾಹಕ ಬ್ರಾಂಡ್‌ಗಳನ್ನು ನಿರ್ಮಿಸುವಲ್ಲಿ ಆಳವಾದ ಅನುಭವವನ್ನು ಹೊಂದಿರುವ ಸ್ಟಾಟೆರ್ಜಿಕ್ ನಾಯಕರಾಗಿದ್ದಾರೆ” ಎಂದು ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ಪ್ರಸ್ತುತ ಸಿಇಒ ಶುಲ್ಟ್ಜ್ ತಿಳಿಸಿದ್ದಾರೆ.

Advertisement

ಲಕ್ಷ್ಮಣ್ ನರಸಿಂಹನ್ ಅವರು ಪುಣೆ ವಿಶ್ವವಿದ್ಯಾಲಯದಿಂದ ಪದವೀಧರರಾಗಿದ್ದಾರೆ. ಅಲ್ಲದೆ ಪೆನ್ಸಿಲಾವೇನಿಯಾ ವಿಶ್ವವಿದ್ಯಾನಿಲಯದ ಲಾಡರ್ ಇನ್‌ಸ್ಟಿಟ್ಯೂಟ್‌ ನಿಂದ ಜರ್ಮನ್ ಮತ್ತು ಅಂತಾರಾಷ್ಟ್ರೀಯ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಅವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ವಾರ್ಟನ್ ಶಾಲೆಯಿಂದ ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಹೊಂದಿದ್ದಾರೆ.

ಇದನ್ನೂ ಓದಿ:ಭೈಚುಂಗ್ ಭುಟಿಯಾ ಸೋಲಿಸಿ ಎಐಎಫ್‌ಎಫ್ ಅಧ್ಯಕ್ಷರಾದ ಕಲ್ಯಾಣ್ ಚೌಬೆ

2019ರ ಸೆಪ್ಟೆಂಬರ್ ನಲ್ಲಿ ರೆಕಿಟ್‌ ಗೆ ಸೇರಿದ ಅವರು ಕೋವಿಡ್ -19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಉತ್ಪನ್ನಗಳ ಮಾರಾಟ ಹೆಚ್ಚಿಳಕ್ಕೆ ಕಾರಣವಾದರು. ಇದಕ್ಕೂ ಮೊದಲು ಪೆಪ್ಸಿಕೋದಲ್ಲಿ ಜಾಗತಿಕ ಮುಖ್ಯ ವಾಣಿಜ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಲ್ಯಾಟಿನ್ ಅಮೇರಿಕಾ, ಯುರೋಪ್ ಮತ್ತು ಉಪ-ಸಹಾರನ್ ಆಫ್ರಿಕಾದಲ್ಲಿ ಪೆಪ್ಸಿಕೋ ಕಾರ್ಯಾಚರಣೆಗಳನ್ನು ಸಹ ನೋಡಿಕೊಂಡಿದ್ದರು.

ಗುರುವಾರ, ಲಕ್ಷ್ಮಣ್ ನರಸಿಂಹನ್ ಅವರು ಸಿಇಒ ಹುದ್ದೆಯಿಂದ ಕೆಳಗಿಳಿಯುತ್ತಿರುವ ಬಗ್ಗೆ ರೆಕಿಟ್ ಘೋಷಿಸಿತ್ತು. ಈ ಘೋಷಣೆಯ ಬಳಿಕ ಎಫ್‌ಟಿಎಸ್‌ಇ-ಪಟ್ಟಿ ಮಾಡಿದ ರೆಕಿಟ್‌ ನ ಷೇರುಗಳು ಶೇಕಡಾ 4 ರಷ್ಟು ಕುಸಿದವು.

Advertisement

Udayavani is now on Telegram. Click here to join our channel and stay updated with the latest news.

Next