Advertisement

ಯೋಜನೆ ಅನುಷ್ಠಾನಕ್ಕೆ ತರಬೇತಿ ಸಹಕಾರಿ

12:28 PM Jan 05, 2017 | |

ದಾವಣಗೆರೆ: ಕೇಂದ್ರ, ರಾಜ್ಯ ಸರ್ಕಾರ ಪರಿಶಿಷ್ಟ  ಪಂಗಡಗಳಿಗೆ ರೂಪಿಸಿರುವ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ತಿಳಿಸಿದ್ದಾರೆ. 

Advertisement

ಬುಧವಾರ ಜಿಲ್ಲಾ ಆಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಮೈಸೂರಿನ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅನುಷ್ಠಾನ ಕುರಿತು ಪರಿಶಿಷ್ಟ ಪಂಗಡದ ಜನಪ್ರತಿನಿಧಿಗಳು ಹಾಗೂ ಅನುಷ್ಠಾನಾಧಿಧಿಕಾರಿಗಳಿಗೆ ಅರಿವು ಮೂಡಿಸುವ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಕೇಂದ್ರ-ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡಗಳಿಗೆ ರೂಪಿಸಿರುವ ಎಲ್ಲ ಯೋಜನೆಗಳ ಬಗ್ಗೆ ತಿಂಗಳಿಗೆ ಕನಿಷ್ಠ ಒಂದಾದರೂ ತರಬೇತಿ ಕಾರ್ಯಕ್ರಮ ಆಗಬೇಕು. ಆಗ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯ ಎಂದರು. ಯಾವುದೇ ಯೋಜನೆಗಳ ಅನುಷ್ಠಾನ ಕುರಿತು ವರ್ಷದಲ್ಲಿ ಒಂದು ದಿನ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡರೆ ಏನೂ ಪ್ರಯೋಜನವಾಗದು. 

ನಿಯಮಿತವಾಗಿ ಅರಿವು ತರಬೇತಿ ಕಾರ್ಯಕ್ರಮ ನಡೆಸಬೇಕು. ಆಗ ಯೋಜನೆಗಳ ಮನನದಿಂದ ಅನುಷ್ಠಾನ ಸುಲಭ ಆಗಲಿದೆ. ಬರದ ಹಿನ್ನೆಲೆಯಲ್ಲಿ ಜನರಿಗೆ ಕೆಲಸದ ಅವಶ್ಯಕತೆ ತುಂಬಾ ಇದೆ. ಹಾಗೆಯೇ ಗ್ರಾಮ ಪಂಚಾಯತಿಗಳಿಗೂ ಕೆಲಸ ಒದಗಿಸುವುದು ಕಷ್ಟ ಆಗುತ್ತಿದೆ.

ಸದಸ್ಯರು ಮನಸ್ಸು ಮಾಡಿದರೆ ಬುಡಕಟ್ಟು ಸಮುದಾಯಕ್ಕೆ ಉತ್ತಮವಾಗಿ ಸ್ಪಂದಿಸಿ, ಒಳ್ಳೆಯ ಫಲ ನೀಡಬಹುದು. ಈ ಹಿನ್ನೆಲೆಯಲ್ಲಿ ಖಾತರಿ ಒಳಗೊಂಡಂತೆ ಎಲ್ಲ ಯೋಜನೆಗಳ ಬಗ್ಗೆ ತಾವು ಮೊದಲು ಸಂಪೂರ್ಣವಾಗಿ ತಿಳಿದು, ಸಮುದಾಯಗಳ ಏಳ್ಗೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು. 

Advertisement

ಜಿಪಂ ಉಪ ಕಾರ್ಯದರ್ಶಿ ಜಿ. ಎಸ್‌. ಷಡಕ್ಷರಪ್ಪ ಮಾತನಾಡಿ, ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತ್‌ಗೆ ಆಯ್ಕೆ ಆಗಿ ಬಂದ ಮೇಲೆ ಸದಸ್ಯರು ಮುಖ್ಯವಾಗಿ ಪಕ್ಷ ಮತ್ತು ಜಾತಿ ಮೋಹ ತ್ಯಜಿಸಬೇಕು. ಗ್ರಾಮದ ಉದ್ದಾರಕ್ಕೆ ಯಾವ ಯೋಜನೆಗಳಿವೆ ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಹೇಗೆ ಅನುಷ್ಠಾನಗೊಳಿಸಬೇಕೆಂಬ ಬಗ್ಗೆ ಚಿಂತಿಸಬೇಕು. 

ಗ್ರಾಮ ಪಂಚಾಯತ್‌ ಸದಸ್ಯರಿಗೆ ಆಡಳಿತದಲ್ಲಿ ಹೆಚ್ಚಿನ ಅಧಿಧಿಕಾರವಿದ್ದು, ಅದ್ಭುತ ರೀತಿಯಲ್ಲಿ ಕೆಲಸ ಮಾಡುವ ಅವಕಾಶವಿದೆ ಎಂದು ತಿಳಿಸಿದರು. ಕಾರ್ಯಕಾರಿ ಅಭಿಯಂತರ ಜೆ. ಟಿ. ರಾಮಕೃಷ್ಣ ಮಾತನಾಡಿ, ಕೇವಲ ರಾಷ್ಟ್ರೀಯ ಉದ್ಯೋಗ ಖಾತರಿ ಎನ್ನದೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಎಂದು ಬಳಸುವುದು ಕಡ್ಡಾಯ. 

ಜಿಲ್ಲೆಯಲ್ಲಿ 2011 ರಿಂದ 2014 ರ ವರೆಗೆ ಈ ಯೋಜನೆ ಅತ್ಯುತ್ತಮವಾಗಿ ಅನುಷ್ಠಾನಗೊಂಡಿದೆ. 2013 ರಲ್ಲಿ ಯೋಜನೆಯಡಿ ಕೆಲಸಗಳ ಅತ್ಯುತ್ತಮ ನಿರ್ವಹಣೆಗಾಗಿ ದಾವಣಗೆರೆ ಜಿಲ್ಲೆಗೆ ರಾಷ್ಟ್ರಮಟ್ಟದ ಪ್ರಶಸ್ತಿ ದೊರೆತಿತ್ತು. ಆ ನಂತರ ಮಾರ್ಗಸೂಚಿಗಳು ಸ್ವಲ್ಪ ಬಿಗಿಯಾದವು. ಕೇವಲ ಪಿಡಿಓ ಮತ್ತು ಇಂಜಿನಿಯರ್‌ ಗಳಿಂದ ಯೋಜನೆ ಅನುಷ್ಠಾನ ಸಾಧ್ಯವಿಲ್ಲ. 

ಮುಖ್ಯವಾಗಿ ಸದಸ್ಯರ ಸಂಪೂರ್ಣ ಬೆಂಬಲ ಮತ್ತು ನೈಜ ಕಾರ್ಮಿಕರು ಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಪೊ. ಟಿ.ಟಿ. ಬಸವನಗೌಡ ಮಾತನಾಡಿ, ರಾಜ್ಯದ 30 ಜಿಲ್ಲೆಗಳಲ್ಲಿ 50 ವಿವಿಧ ಬುಡಕಟ್ಟು ಸಮುದಾಯಗಳಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಅನೇಕ ಯೋಜನೆ ರೂಪಿಸಿವೆ.

ರಾಜ್ಯ ಸರ್ಕಾರ 4,500 ಕೋಟಿ ಅನುದಾನ ಮೀಸಲಿಟ್ಟಿದೆ. ಸಮುದಾಯದ 43 ಲಕ್ಷದಷ್ಟಿರುವ ಪರಿಶಿಷ್ಟ  ಪಂಗಡಳ ಜನರಿಗಾಗಿ ಇರುವ 42 ಯೋಜನೆಗಳ ಅರಿವು ಮೂಡಿಸಲು ಸಂಸ್ಥೆ ಹಲವಾರು ತರಬೇತಿ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ ಎಂದು ತಿಳಿಸಿದರು. ಬುಡಕಟ್ಟು ಸಮುದಾಯದಲ್ಲಿ ಹೆಚ್ಚಿನವರು ಕೂಲಿಕಾರರಿದ್ದು ಅವರಿಗೆ ಯೋಜನೆಗಳ ಅರಿವೇ ಇಲ್ಲ. 

ಹಾಗಾಗಿ ಯೋಜನೆ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ. ಅರಿವು ಮೂಡಿಸುವ ಕಾರ್ಯ ಮೊದಲು ಆಗಬೇಕು. ಜಿಲ್ಲಾ, ತಾಲೂಕು, ಗ್ರಾಪಂಗಳು ಸಮುದಾಯದ ಅಭಿವೃದ್ಧಿ ರಥ ಗಾಲಿಗಳಿದ್ದಂತೆ. ಜನಪ್ರತಿನಿಧಿಧಿಗಳು ಮನಸ್ಸು ಮಾಡಿದರೆ ಸಮುದಾಯದ ಜನರನ್ನು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಂದೆ ತರಬಹುದು ಎದು ತಿಳಿಸಿದರು. 

ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಧಿಕಾರಿ ಡಿ. ದೇವೆಂದ್ರಪ್ಪ ಸ್ವಾಗತಿಸಿದರು. ಕಾರ್ಯಕ್ರಮಕ್ಕೂ ಮುನ್ನ ರಾಜ್ಯದ ಸಹಕಾರ ಮತ್ತು ಸಕ್ಕರೆ ಸಚಿವ ಎಚ್‌. ಎಸ್‌. ಮಹದೇವ ಪ್ರಸಾದರವರ ನಿಧನಕ್ಕೆ ಮೌನ ಆಚರಿಸುವ ಮೂಲಕ ಸಂತಾಪ ಸೂಚಿಸಲಾಯಿತು. ಖಾತರಿ ಯೋಜನೆ ಮತ್ತು 21 ಅಂಶಗಳ ಕಾರ್ಯಕ್ರಮಗಳ ಕೈಪಿಡಿ ಹಾಗೂ ವಾರ್ಷಿಕ ಕ್ಯಾಲೆಂಡರ್‌ ಬಿಡುಗಡೆಗೊಳಿಸಲಾಯಿತು.   

Advertisement

Udayavani is now on Telegram. Click here to join our channel and stay updated with the latest news.

Next