Advertisement

ಸುರಕ್ಷಾ ಸಂಚಾರಿ ಆಂಬ್ಯುಲೆನ್ಸ್‌ ಗೆ ಚಾಲನೆ

08:21 PM Jun 05, 2021 | Team Udayavani |

ಬೆಳಗಾವಿ: “ಸಾರಿಗೆ ಸುರಕ್ಷಾ’ ಹೆಸರಿನ ಸಂಚಾರಿ ಐಸಿಯು ಬಸ್‌ ಆಂಬ್ಯುಲೆನ್ಸ್‌ನು° ಸುವರ್ಣ ವಿಧಾನ ಸೌಧದ ಆವರಣದಲ್ಲಿ ಶುಕ್ರವಾರ ಸಿಎಂ ಯಡಿಯೂರಪ್ಪ ಲೋಕಾರ್ಪಣೆಗೊಳಿಸಿದರು.

Advertisement

ರಾಜ್ಯದಲ್ಲಿ ಕೋವಿಡ್‌-19 ಸಾಂಕ್ರಾಮಿಕ ರೋಗದ 2ನೇ ಅಲೆ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ವಾಯವ್ಯ ಸಾರಿಗೆ ಸಂಸ್ಥೆಯು ಸಾರಿಗೆ ಸುರûಾ ಹೆಸರಿನ ಆಂಬ್ಯುಲೆನ್ಸ್‌ ಪ್ರಾರಂಭಿಸಿದೆ. ಈ ಆಂಬ್ಯುಲೆನ್ಸ್‌ ನಿರ್ಮಾಣಕ್ಕೆ ಒಟ್ಟು 7.88 ಲಕ್ಷ ವೆಚ್ಚ ತಗುಲಿದ್ದು, ಹುಬ್ಬಳ್ಳಿಯ ವಾಯವ್ಯ ಸಾರಿಗೆ ಸಂಸ್ಥೆಯ ಪ್ರಾದೇಶಿಕ ಕಾರ್ಯಾಗಾರದಲ್ಲಿ ನಿರ್ಮಿಸಲಾಗಿದೆ. ಈ ಸಾರಿಗೆ ಸುರಕ್ಷಾ ವಾಹನದಲ್ಲಿ ನಾಲ್ಕು ಹಾಸಿಗೆಗಳಿದ್ದು, ಐಸಿಯು ಸೌಲಭ್ಯ ಹೊಂದಿವೆ.

ಪ್ರತಿಯೊಂದು ಬೆಡ್‌ಗೂ ಆಕ್ಸಿಜನ್‌ ವ್ಯವಸ್ಥೆ ಕೈಗೊಳ್ಳಲಾಗಿದೆ. ಪ್ರತಿ ಬೆಡ್‌ ಹಾಗೂ ಕಿಟಕಿಗಳಿಗೆ ಕರ್ಟನ್‌ ಅಳವಡಿಸಲಾಗಿದೆ. ಜತೆಗೆ ವಾಹನದಲ್ಲಿರುವ ಪ್ರತಿಯೊಂದು ಬೆಡ್‌ ಹಾಗೂ ವಾಹನದೊಳಗೆ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ವಾಹನದಲ್ಲಿರುವ 4 ಬೆಡ್‌ಗಳಿಗೂ ಪ್ಯಾನ್‌ ಅಳವಡಿಸಲಾಗಿದೆ. ಪ್ರತಿ ಬೆಡ್‌ಗಳ ನಡುವೆ ಔಷಧ ಹಾಗೂ ವಸ್ತುಗಳ ಸ್ಟೋರ್‌ ಸ್ಟಾಂಡ್‌ ಅಳವಡಿಸಲಾಗಿದ್ದು, ಐವಿ, ತುರ್ತು ಔಷಧಿ ವ್ಯವಸ್ಥೆ, ಥರ್ಮಾಮೀಟರ್‌ ಮತ್ತು ಆಕ್ಸಿಮೀಟರ್‌ ಒದಗಿಸಲಾಗಿದೆ. ಡ್ನೂಟಿ ಡಾಕ್ಟರ್‌ ಮತ್ತು ನರ್ಸ್‌ಗಳಿಗೆ ಪ್ರತ್ಯೇಕ ಕೌಂಟರ್‌ ಮತ್ತು ಫ್ಯಾನ್‌ ಅಳವಡಿಸಿರುವುದು ಈ ವಾಹನದ ವಿಶೇಷ. ಅಲ್ಲದೇ ವಾಯವ್ಯ ಸಾರಿಗೆ ಸಂಸ್ಥೆಯು ಹುಬ್ಬಳ್ಳಿಯ ಪ್ರಾದೇಶಿಕ ಕಾರ್ಯಾಗಾರದಲ್ಲಿ ಅನುಪಯುಕ್ತ ವಾಹನವನ್ನು ಸ್ತ್ರೀ ಶೌಚಾಲಯವನ್ನಾಗಿ ಪರಿವರ್ತಿಸಿದೆ. ಈ ಶೌಚಾಲಯದ ನಿರ್ಮಾಣಕ್ಕೆ 8,13,962 ರೂ. ವೆಚ್ಚ ತಗುಲಿದೆ.

ಈ ವಾಹನದಲ್ಲಿ ಮಗುವಿಗೆ ಡೈಪರ್‌ ಬದಲಾಯಿಸುವ ಸಲುವಾಗಿ ಮಗು ಆರೈಕೆ ವ್ಯವಸ್ಥೆಯ ಕೊಠಡಿ ಕಲ್ಪಿಸಲಾಗಿದೆ. ಮಗುವಿಗೆ ಹಾಲುಣಿಸುವ ಸಲುವಾಗಿ ಪ್ರತ್ಯೇಕ ಕೊಠಡಿ ನಿರ್ಮಿಸಲಾಗಿದೆ.

ಶೌಚಾಲಯದಲ್ಲಿ ನೀರಿನ ರಭಸವನ್ನು ಹೆಚ್ಚಿಸಲು ಪ್ರಶರ್‌ ಪಂಪ್‌ ಅಳವಡಿಸಲಾಗಿದೆ. ಚಾಲಕರ ಕ್ಯಾಬಿನ್‌ನಲ್ಲಿ 1,000 ಲೀಟರ್‌ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಟ್ಯಾಂಕ್‌ ಅಳವಡಿಸಲಾಗಿದೆ. ಬಸ್‌ನಲ್ಲಿ ಎರಡು ಇಂಡಿಯನ್‌ ಮಾದರಿ ಹಾಗೂ 2 ವೆಸ್ಟರ್ನ ಮಾದರಿಯ ಶೌಚಾಲಯಗಳಿವೆ. ಕೈ ತೊಳೆಯಲು ನಳ ಒಳಗೊಂಡಿರುವ 2 ಸಿಂಕ್‌ ಅಳವಡಿಸಲಾಗಿದೆ.

Advertisement

ವಿದ್ಯುತ್‌ ವ್ಯವಸ್ಥೆಗಾಗಿ 3.5 ಕೆವಿಎ ಸಾಮರ್ಥ್ಯದ ಯುಪಿಎಸ್‌ ಇನ್‌Ìರ್ಟರ್‌ ಅಳವಡಿಸಲಾಗಿದೆ. ವಾಹನದ ಎಲ್ಲಾ ಕೊಠಡಿಗಳಿಗೆ ಬೆಳಕು ಮತ್ತು ಫ್ಯಾನ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ, ಸಾರಿಗೆ ಸಚಿವ ಲಕ್ಷ್ಮಣ ಸವದಿ, ಗೃಹಸಚಿವ ಬಸವರಾಜ ಬೊಮ್ಮಾಯಿ, ಆಹಾರ, ಸಚಿವ ಉಮೇಶ ಕತ್ತಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next