Advertisement

ಆಸ್ಪತ್ರೆಯಲ್ಲಿರುವ ಸಚಿವ ಸದಾನಂದ ಗೌಡ ಆರೋಗ್ಯ ವಿಚಾರಿಸಿದ ಯಡಿಯೂರಪ್ಪ, ಸಚಿವರು

12:36 PM Jan 04, 2021 | Team Udayavani |

ಬೆಂಗಳೂರು: ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಕೇಂದ್ರ ಸಚಿವ ಡಿ. ವಿ.ಸದಾನಂದ ಗೌಡ ಅವರನ್ನು ಇಂದು ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರುಗಳು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

Advertisement

ಬಿ.ಎಸ್. ಯಡಿಯೂರಪ್ಪ ಜೊತೆ ಡಿಸಿಎಂ ಲಕ್ಷ್ಮಣ ಸವದಿ, ಅಶ್ವಥನಾರಾಯಣ, ಗೋವಿಂದ್ ಕಾರಜೋಳ ಸೇರಿದಂತೆ ಇತರ ಸಚಿವರು ಭೇಟಿಯಾಗಿ ಸದಾನಂದ ಗೌಡರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು.

ರವಿವಾರ ಶಿವಮೊಗ್ಗಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಧ್ಯಾಹ್ನ ಚಿತ್ರದುರ್ಗದ ಖಾಸಗಿ ಹೋಟೆಲ್ ಗೆ ಆಗಮಿಸಿದ್ದ ಸದಾನಂದ ಗೌಡ ಅವರು, ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾದ ಪರಿಣಾಮ ಕುಸಿದು ಬಿದ್ದರು. ಕೂಡಲೇ ಅವರನ್ನು ಸಮೀಪದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ:ಬಂಡಾಯದ ನೆಲೆಯ ರೈತನ ಪ್ರಯತ್ನಕ್ಕೆ ಕ್ರಿಕೆಟಿಗ ವಿ.ವಿ.ಎಸ್. ಲಕ್ಷ್ಮಣ್ ಮೆಚ್ಚುಗೆ

ಬಳಿಕ ಅವರನ್ನು ಝೀರೋ ಟ್ರಾಫಿಕ್ ಮೂಲಕ ಬೆಂಗಳೂರಿನ ಹೆಬ್ಬಾಳ ರಸ್ತೆಯಲ್ಲಿರುವ ಆಸ್ಟಾರ್ ಆಸ್ಪತ್ರೆಗೆ ದಾಖಲಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next