Advertisement
ಶನಿವಾರ ಬೆಳ್ಳಂಬೆಳಗ ನಗರಸಭೆ ಅಧ್ಯಕ್ಷ ಮಕ್ಭೂಲ್ ಪಾಷಾ ಸಿಬ್ಬಂದಿಯೊಂದಿಗೆ ತೆರವು ಕಾರ್ಯಾಚರಣೆಗೆ ಇಳಿದಿದ್ದರು. ನಗರದ ನಗರಸಭೆ ಸ್ಥಳ ಮತ್ತು ಪಾದಚಾರಿ ರಸ್ತೆಗಳನ್ನು ಆಕ್ರಮಿಸಿಕೊಂಡು ಪರವಾನಗಿ ಇಲ್ಲದೆ ಅಂಗಡಿ ಮಳಿಗೆಗಳನ್ನು ತೆರೆದು ಮತ್ತೂಬ್ಬರಿಗೆ ಬಾಡಿಗೆಗೆ ಕೊಟ್ಟು ಹಣ ಮಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ. ಹಲವು ವರ್ಷಗಳಿಂದ ನಗರಸಭೆ ಜಾಗ ಮತ್ತು ಪಾದಚಾರಿ ರಸ್ತೆಗಳನ್ನು ಕೆಲವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಬ್ಬಿಣ ಮತ್ತು ಮರದಲ್ಲಿ ನಿರ್ಮಾಣ ಮಾಡಿದ ಪೆಟ್ಟಿಗೆ ಅಂಗಡಿಗಳನ್ನು ತೆರೆದು ಕಬ್ಬಿನ ರಸ, ಎಳನೀರು ಮಾರಾಟ ಮಾಡುವ ವ್ಯಾಪಾರಿಗಳಿಗೆ ಕೊಟ್ಟು ಬಾಡಿಗೆ ಪಡೆಯುವ ದಂಧೆ ಮಾಡಿಕೊಂಡಿದ್ದರು. ಈ ಅಂಗಡಿ ಮಳಿಗೆಗಳನ್ನು ಬಾಡಿಗೆಗೆ ಪಡೆದ ವ್ಯಾಪಾರಿಗಳು ಉತ್ಪತ್ತಿಯಾಗುವ ತಾಜ್ಯವನ್ನು ಪಕ್ಕದಲ್ಲಿದ್ದ ಚರಂಡಿಗೆ ಸುರಿಯುತ್ತಿದ್ದರು. ಇದರಿಂದ ಚರಂಡಿಗಳಲ್ಲಿ ನೀರು ಶೇಖರಣೆಯಾಗಿ ದುರ್ವಾಸನೆ ಬೀರುವುದರ ಜೊತೆಗೆ ಮಳೆಗಾಲದಲ್ಲಿ ಚರಂಡಿಗಳಲ್ಲಿ ತ್ಯಾಜ್ಯ ಕಟ್ಟಿಕೊಂಡು ನೀರು ಮುಂದೆ ಹರಿದು ಹೋಗಲು ಜಾಗವಿಲ್ಲದೆ ರಸ್ತೆಯ ಮೇಲೆ ಹರಿಯುತ್ತಿತ್ತು.
Advertisement
ನಗರಸಭೆಯಿಂದ ಅಕ್ರಮ ಮಳಿಗೆಗಳ ತೆರವು
11:31 AM Mar 14, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.