Advertisement
ಬಜಪೆ ಪೇಟೆಯಲ್ಲಿರುವ ಅದ್ಯಪಾಡಿ, ಮುಚ್ಚಾರಿಗೆ ಹೋಗುವ ಬಸ್ ತಂಗುದಾಣ ಹಾಗೂ ಮಂಗಳೂರು, ಸುರತ್ಕಲ್‌ಗೆ ಹೋಗುವ ಬಸ್ ತಂಗುದಾಣವನ್ನು ತೆರವುಗೊಳಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಬಜಪೆ ಪಟ್ಟಣ ಪಂಚಾಯತ್‌ಗೆ ಮನವಿ ಮಾಡಿತ್ತು. ಅ ಮನವಿಯ ಮೇರೆಗೆ ಬಜಪೆ ಪಟ್ಟಣ ಪಂಚಾಯತ್ ಆ ಎರಡು ಬಸ್ ತಂಗುದಾಣವನ್ನು ತೆರವುಗೊಳಿಸಿದೆ.
ಮಂಗಳೂರು, ಸುರತ್ಕಲ್, ಅದ್ಯಪಾಡಿ, ಮುಚ್ಚಾರು ಹೋಗುವ ಪ್ರಯಾಣಿಕರು ಬಸ್ ತಂಗುದಾಣ ಇಲ್ಲದೇ ಬಿಸಿಲಿಗೆ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನೆರಳು ನೀಡುವ ತಾತ್ಕಾಲಿಕ ಛಾವಣಿಯ ಅಗತ್ಯವಿದೆ.
Related Articles
Advertisement
ಅಪೂರ್ಣ ಕಾಮಗಾರಿಯಿಂದ ಚರಂಡಿಯಲ್ಲೇ ನಿಂತ ನೀರುಬಜಪೆ ಕಿನ್ನಿಪದವಿನಿಂದ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸಮೀಪದ ವರೆಗೆ ರಸ್ತೆ ಕಾಂಕ್ರೀಟ್ ಹಾಗೂ ವಿಸ್ತರಣೆ ಕಾಮಗಾರಿಯು ನಡೆದಿದ್ದು, ಕೆಲವೆಡೆ ರಸ್ತೆ ವಿಸ್ತರಣೆ ಕಾಮಗಾರಿಗೆ ಸ್ಥಳದ ಸಮಸ್ಯೆ ಎದುರಾಗಿದೆ. ಈ ಕಾಮಗಾರಿಗೆ ಹಿನ್ನೆಡೆಯಿಂದ ಇಲ್ಲಿನ ಅಪಾಯಕಾರಿ ತೆರೆದ ಚರಂಡಿಯಲ್ಲಿ ಮಳೆಯ ನೀರು ಹರಿಯಲು ಸಾಧ್ಯವಾಗದೇ ಅದರಲ್ಲಿ ಸೊಳ್ಳೆ ಉತ್ಪತ್ತಿಯಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಚರಂಡಿಯಲ್ಲಿನ ಹೂಳು ಅರ್ಧದಷ್ಟು ಮಾತ್ರ ತೆಗೆಯಲಾಗಿದೆ. ಮಳೆಯ ನೀರು ನಿಲ್ಲಲು ಕಾರಣವಾಗಿದೆ. ಸಮೀಪದಲ್ಲಿಯೇ ವಿದ್ಯಾರ್ಥಿ ನಿಲಯವೂ ಇದೆ. ಸೊಳ್ಳೆ ಉತ್ಪತ್ತಿಯಾಗುವುದು ಅಪಾಯಕಾರಿ. ಲೋಕೋಪಯೋಗಿ ಇಲಾಖೆ ರಸ್ತೆ ವಿಸ್ತರಣೆ ಕಾಮಗಾರಿ ಶೀಘ್ರ ಆರಂಭಗೊಳಿಸಬೇಕಾಗಿದ್ದು ಈ ಚರಂಡಿಯಲ್ಲಿ ನಿಂತಿರುವ ಕೊಳಚೆ ನೀರನ್ನು ಅದಷ್ಟು ಬೇಗ ತೆಗೆಯಬೇಕಾಗಿದೆ. ಈಗಾಗಲೇ ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.