Advertisement

ಸ್ವಚ್ಛ ಸರ್ವೇಕ್ಷಣ ಸ್ಪರ್ಧೆ; ನಗರದಲ್ಲಿ ಕೇಂದ್ರ ತಂಡದ ಸಮೀಕ್ಷೆ ಆರಂಭ

11:11 AM Apr 03, 2022 | Team Udayavani |

ಲಾಲ್‌ಬಾಗ್‌: ದೇಶಾದ್ಯಂತ ನಗರ ಸ್ವಚ್ಛತಾ ಪರಿಕಲ್ಪನೆಯಲ್ಲಿ ನಡೆಯಲಿರುವ ‘ಸ್ವಚ್ಛ ಸರ್ವೇಕ್ಷಣಾ-2022’ಕ್ಕೆ ಮಂಗಳೂರು ನಗರ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ಸಮೀಕ್ಷಾ ತಂಡ ಶುಕ್ರವಾರ ನಗರಕ್ಕೆ ಆಗಮಿಸಿ ಸಮೀಕ್ಷೆ ಆರಂಭಿಸಿದೆ. ಮಣ್ಣಗುಡ್ಡೆ, ಕುದ್ರೋಳಿ, ಕಾರ್‌ಸ್ಟ್ರೀಟ್‌, ಬಂದರು ಸಹಿತ ವಿವಿಧ ಪ್ರದೇಶಗಳಿಗೆ ತಂಡದ ಸದಸ್ಯರು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

Advertisement

ಕಸ ವಿಂಗಡಣೆ, ಕಸ ನಿರ್ವಹಣೆ ಹಾಗೂ ವಿಲೇವಾರಿ ಯಾವ ಪ್ರಮಾಣದಲ್ಲಿ ನಡೆಯುತ್ತಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ನಗರದ ಕೆಲವು ಮನೆಗೆ ಭೇಟಿ ನೀಡಿದ ತಂಡವು ತ್ಯಾಜ್ಯ ಸಾಗಾಟ ಪ್ರಕ್ರಿಯೆ ಯಾವ ರೀತಿಯಲ್ಲಿ ನಡೆಯುತ್ತಿದೆ ಎಂಬ ವಿವರಗಳನ್ನು ಪಡೆದಿದ್ದಾರೆ.

ಕೇಂದ್ರ ಸಮೀಕ್ಷೆ ತಂಡದಲ್ಲಿ ಇಲಾಖೆ ನಿಯುಕ್ತಿ ಗೊಳಿಸಿದ ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದಾರೆ. ಮುಂದಿನ 2-3 ದಿನ ನಗರದಲ್ಲಿ ವಿವಿಧೆಡೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ.

ನಗರದ ದತ್ತಾಂಶ, ಇಲ್ಲಿನ ಅಭಿವೃದ್ಧಿ ಸೇರಿದಂತೆ ವಿವಿಧ ವಿಚಾರಗಳನ್ನು ಪಾಲಿಕೆ ಅಪ್‌ಲೋಡ್‌ ಮಾಡಿರುವ ಅಂಶವನ್ನು ಖುದ್ದಾಗಿ ಸ್ಥಳಕ್ಕೆ ತೆರಳಿ ಅವಲೋಕನ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next