Advertisement

ಮಣ್ಣಿನ ಪಾತ್ರೆಯಲ್ಲಿ ತಯಾರಿಸಿದ ಆಹಾರ.. ಆರೋಗ್ಯಕ್ಕೆ ಹಿತಕರ!

07:01 PM Aug 11, 2018 | |

ಮಣ್ಣಿನ ಪಾತ್ರೆಗಳು ಪರಿಸರ ಸ್ನೇಹಿಯಾಗಿವೆ. ಯಾವುದೇ ರಾಸಾಯನಿಕ ಅಂಶಗಳ ಮಿಶ್ರಣವಿಲ್ಲದಿರುವುದರಿಂದ ಪ್ರಕೃತಿಗೆ ಯಾವುದೇ ಹಾನಿಯಾಗುವುದಿಲ್ಲ ಮಾತ್ರವಲ್ಲದೇ ಮಣ್ಣಿನ ಪಾತ್ರೆಯಲ್ಲಿ ತಯಾರಿಸಿದ ಆಹಾರದಲ್ಲಿ ಪೌಷ್ಟಿಕಾಂಶ ನಾಶವಾಗುವುದಿಲ್ಲ ಎಂಬುದು ನಂಬಿಕೆ. 

Advertisement

ಮಣ್ಣಿನ ಪಾತ್ರೆಗಳಲ್ಲಿ ಔಷಧೀಯ ಗುಣಗಳಿದ್ದು, ಹಿಂದಿನ ಕಾಲದಲ್ಲಿ ನಮ್ಮ ಹಿರಿಯರೆಲ್ಲರೂ ದಿನಪಯೋಗಿ ವಸ್ತುಗಳಾಗಿ ಮಣ್ಣಿನ ಪಾತ್ರೆಗಳನ್ನೇ ಬಳಸುತ್ತಿದ್ದರು. ನಮ್ಮ ಈಗಿನ ಸ್ಟೀಲ್ ಹಾಗೂ ಅಲ್ಯೂಮಿನಿಯಂ ಕಾಲದಲ್ಲಿ ಮಣ್ಣಿನ ಪಾತ್ರೆಗಳು ತಮ್ಮ ಸ್ಥಾನವನ್ನು ಕಳೆದುಕೊಂಡಿದೆ. ಆದರೂ ಈ ಆಧುನಿಕ ಯಗದಲ್ಲಿ ಆರೋಗ್ಯದ ದೃಷ್ಟಿಯಲ್ಲಿ ಕೂಡ ಒಮ್ಮೊಮ್ಮೆ ಮಣ್ಣಿನ ಪಾತ್ರೆಗಳನ್ನು ಉಪಯೋಗಿಸುವುದು ಕಾಣಬಹುದು. ಆಹಾರವನ್ನು ನಿಧಾನವಾಗಿ ಬೆಂಕಿಯಿಂದ ಬೇಯಿಸಬೇಕೆಂದು ಆಯುರ್ವೇದ ಹೇಳಿದೆ. ಆದರೆ ಸ್ಟೀಲ್ ಹಾಗೂ ಅಲ್ಯೂಮಿನಿಯಂ ಪಾತ್ರೆಯಲ್ಲಿ ಸಾಧ್ಯವಿಲ್ಲ ಅವುಗಳಲ್ಲಿ ಆಹಾರವನ್ನು ವೇಗವಾಗಿ ತಯಾರಿಸಲಾಗುತ್ತದೆ. ಮಣ್ಣಿನ ಪಾತ್ರೆಯಲ್ಲಿ ಮಾಡಿದ ಆಹಾರವು ರುಚಿಕರವಾಗಿರುವುದು ಮಾತ್ರವಲ್ಲ ಮತ್ತು ಪೌಷ್ಟಿಕಾಂಶವನ್ನು ನೀಡುತ್ತದೆ. ಮಣ್ಣಿನ ಪಾತ್ರೆಯ ಮಾಡುವ ಅಡುಗೆಯ ರುಚಿ ಇತರ ಪಾತ್ರೆ ನೀಡುವುದಿಲ್ಲ.

ಮಣ್ಣಿನ ಪಾತ್ರೆಯಲ್ಲಿ ತಯಾರಿಸಿದ ಅಡುಗೆಯ ಉಪಯೋಗಗಳು:
1. ರುಚಿ, ಪೋಷಕಾಂಶಗಳ ದೃಷ್ಟಿಕೋನ:

 ಮಣ್ಣಿನ ಪಾತ್ರೆಗಳು ಸೂಕ್ತವಾಗಿದ್ದು ಅಲ್ಲದೆ ಆಯುರ್ವೇದದ ಪ್ರಕಾರ ಹೆಚ್ಚಾಗಿ ಎಲ್ಲಾ ತರಹದ ಅಡುಗೆಗಳಿಗೆ ಮಣ್ಣಿನ ಪಾತ್ರೆಯಲ್ಲಿ ನಿಧಾನ ಗತಿಯಲ್ಲಿ ಅಡುಗೆ ತಯಾರಿಸುವುದರಿಂದ ಗುಣಮಟ್ಟ ಹೆಚ್ಚಿಸುವುದಲ್ಲದೇ ರುಚಿಯಾದ ಅಡುಗೆಯ ಜೊತೆಗೆ ಸಮತೋಲನ ಪೋಷಕಾಂಶಗಳು ದೊರೆಯುತ್ತದೆ. ಮಣ್ಣಿನಲ್ಲಿರುವ ನೈಸರ್ಗಿಕ ನಿರೋಧಕ ಗುಣಗಳಿಂದಾಗಿ ಶಾಖ ಮತ್ತು ತೇವಾಂಶ ಮಣ್ಣಿನ ಪಾತ್ರೆಯಲ್ಲಿ ಸಮಾನವಾಗಿ ಪ್ರಸರಿಸಿ ಪೋಷಕಾಂಶಗಳನ್ನು ಕರಗದಂತೆ ಹಾಗೂ ಆಹಾರ ಸುಡದಂತೆ ತಡೆಯುತ್ತದೆ.

2. ಅಸಿಡಿಟಿ ಸಮಸ್ಯೆ ಪರಿಹಾರ:
ಅಸಿಡಿಟಿ ಸಮಸ್ಯೆ ಇದ್ದವರು ಮಣ್ಣಿನ ಪಾತ್ರೆಯಲ್ಲಿ ತಯಾರಿಸಿದ ಆಹಾರ ಸೇವಿಸುವುದರಿಂದ ಅಸಿಡಿಟಿ ಸಮಸ್ಯೆಯಿಂದ ದೂರ ಉಳಿಯಬಹುದು.

3. ಮಾನವನ ದೇಹಕ್ಕೆ ಆರೋಗ್ಯಕರ:
ಮಣ್ಣಿನ ಪಾತ್ರೆಯನ್ನು ಮಾಡಲು ಉಪಯೋಗಿಸುವ ಮಣ್ಣಿನಲ್ಲಿ ಕ್ಷಾರೀಯ ಅಂಶವು ಅಡುಗೆ ತಯಾರಿಸುವಾಗ ಆಹಾರದಲ್ಲಿನ ಆಮ್ಲಿàಯ ಗುಣವನ್ನು ಸಮದೂಗಿಸುವುದಲ್ಲದೇ ಜೀರ್ಣಕ್ರಿಯೆಯನ್ನು ಸುಲಭ ಮಾಡುತ್ತದೆ. ಮಣ್ಣಿನ ಪಾತ್ರೆಗಳಲ್ಲಿ ತಯಾರಿಸಿದ ಆಹಾರದಲ್ಲಿ ಕಬ್ಬಿಣಾಂಶ, ಕ್ಯಾಲ್ಸಿಯಂ, ಮೆಗ್ನೇಷಿಯಂ ಹೇರಳವಾಗಿರುತ್ತದೆ. ಮಣ್ಣಿನ ಪಾತ್ರೆಯಲ್ಲಿ ನೈಸರ್ಗಿಕ ತೇವಾಂಶ ಅಡುಗೆ ತಯಾರಿಸಲು ಸಾಕಾಗುವುದಲ್ಲದೇ ಎಣ್ಣೆಯ ಉಪಯೋಗ ಕಡಿಮೆ ಮಾಡಬಹುದು.

Advertisement

4. ಮಲಬದ್ಧತೆಗೆ ಪರಿಹಾರ:
ಮಲಬದ್ಧತೆಯಿಂದ ತೊಂದರೆಗೆ ಒಳಗಾಗಿರುವ ವ್ಯಕ್ತಿ ಮಣ್ಣಿನ ಪಾತ್ರೆಯಲ್ಲಿ ತಯಾರಿಸಿದ ಆಹಾರ ಸೇವಿಸುವುದರಿಂದ ಮಲಬದ್ಧತೆಯನ್ನು ನಿವಾರಣೆ ಮಾಡಬಹುದು.

5. ಅಗ್ಗ ಮತ್ತು ಸುಲಭವಾಗಿ ಸಿಗುವಂತಹವು:
ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುವಂತಹವು ,ಬೇರೆ ಅಡುಗೆ ಪಾತ್ರೆಗಳಿಗೆ ಸೇರಿಸಿ ನೋಡಿದರೆ ಅಗ್ಗದಲ್ಲಿ ದೊರೆಯುತ್ತದೆ. ಅಲ್ಲದೇ ವಿವಿಧ ಗಾತ್ರದಲ್ಲಿ ದೊರೆಯುತ್ತದೆ.

ಎಚ್ಚರ ! ಹೊಳೆಯುವ ಮಣ್ಣಿನ ಪಾತ್ರೆಗಳನ್ನು ತಿರಸ್ಕರಿಸಿ
ಹೊಳಿಪಿನ ಮಿಶ್ರಣ ತಯಾರಿಸಲು ಹಲವು ಬಗೆಯ ರಾಸಾಯನಿಕ ವಸ್ತುಗಳನ್ನು ಉಪಯೋಗಿಸುತ್ತಾರೆ ಇದು ವಿಷಯುಕ್ತ ಹೊಗೆಯನ್ನು ಬಿಸಿ ಮಾಡಿದಾಗ ಉತ್ಪತ್ತಿ ಮಾಡುತ್ತದೆ ಹೆಚ್ಚಿನ ಹೊಳೆಯುವ ಬಣ್ಣದಲ್ಲಿ ಸೀಸದಂಶ ಇರುತ್ತದೆ ಆದ್ದರಿಂದ ಮಾರುಕಟ್ಟೆಯಲ್ಲಿ ಸಿಗುವ ಮಣ್ಣಿನ ಪಾತ್ರೆಯನ್ನು ಸರಿಯಾಗಿ ನೋಡಿ ಕೊಂಡುಕೊಳ್ಳುವುದು ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next