Advertisement

12th Class ಅಂಕಪಟ್ಟಿಯಲ್ಲಿ ಇನ್ನು 9-11 ತರಗತಿ ಮಾರ್ಕ್ಸ್

01:46 AM Aug 27, 2024 | Team Udayavani |

ಹೊಸದಿಲ್ಲಿ: 12ನೇ ತರಗತಿ ಬೋರ್ಡ್‌ ಪರೀಕ್ಷೆಗಳಿಗೆ ಹೊಸ ಮೌಲ್ಯ ಮಾಪನ ಮಾದರಿಯನ್ನು ರಾಷ್ಟ್ರಿಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಪ್ರಸ್ತಾವಿಸಿದೆ.

Advertisement

12ನೇ ತರಗತಿ ಅಂಕ ಪಟ್ಟಿಯು 9ರಿಂದ 11ನೇ ತರಗತಿಯ ಅಂಕಗಳನ್ನೂ ಒಳಗೊಂಡಿರಲಿದೆ. ಹೊಸ ಮಾದರಿ ಯಲ್ಲಿ ಕೌಶಲಾ ಧಾರಿತ ಹಾಗೂ ವೃತ್ತಿಪರ ತರಬೇತಿಗಳಿಗೆ ಒತ್ತುನೀಡಲಾ ಗುವುದು. “ಎಲ್ಲ ಶಿಕ್ಷಣ ಮಂಡಳಿ ಗಳಲ್ಲೂ ಸಮಾ ನತೆ ಸ್ಥಾಪನೆ’ ಎಂಬ ವರದಿ ಆಧರಿಸಿ ಈ ಪ್ರಸ್ತಾಪ ಮುಂದಿಡಲಾಗಿದೆ. ಈ ವರದಿ ಯು 9ನೇ ತರಗತಿಯ ಶೇ.15, 10ನೇ ತರಗತಿಯ ಶೇ.20, 11ನೇ ತರಗತಿಯ ಶೇ.25ರಷ್ಟು ಅಂಕಗಳನ್ನು ಒಟ್ಟುಹಾಕಿ ಅಂಕಪಟ್ಟಿ ನೀಡಲು ಸೂಚಿಸುತ್ತದೆ. 12ನೇ ತರಗತಿ ಬೋರ್ಡ್‌ ಫ‌ಲಿ ತಾಂಶ ದಲ್ಲಿ, 9ನೇ ತರಗತಿಯಿಂದ 11 ತರಗತಿ ವರೆಗೆ ಇರುವ ವಿದ್ಯಾರ್ಥಿಯ ಕಲಿಕಾ ಕ್ಷಮತೆ ಪರಿಗಣನೆಯಾಗ ಬೇಕು ಎಂದು ಪ್ರಸ್ತಾವನೆ ಹೇಳಿದೆ. ಎನ್‌ಸಿಇಆರ್‌ಟಿ ಸ್ಥಾಪಿಸಿರುವ ನಿರ್ವ ಹಣಾ ಕೇಂದ್ರವಾದ ಪರಾಖ್‌ (ಪಿಎಆರ್‌ಎಕೆಎಚ್‌) 2024ರ ಜುಲೈನಲ್ಲಿ ಶಿಕ್ಷಣ ಸಚಿವಾಲಯಕ್ಕೆ ಸಲ್ಲಿಸಿರುವ ವರದಿ ಭಾರತ ದಾದ್ಯಂತ ಎಲ್ಲಾ ಶಿಕ್ಷಣ ಮಂಡಳಿಗಳಲ್ಲಿ ಪ್ರಮಾ ಣಿಕೃತ ಮೌಲ್ಯಮಾಪನ ವಿಧಾನ ಇರಬೇಕೆಂದು ಹೇಳುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next