Advertisement

ಪ್ರೊ ಕುಸ್ತಿ ಲೀಗ್‌: ಸುಶೀಲ್‌ ಮತ್ತೆ ಹೊರಕ್ಕೆ

06:35 AM Jan 14, 2018 | Team Udayavani |

ಹೊಸದಿಲ್ಲಿ:  ಪ್ರೊ ಕುಸ್ತಿ ಲೀಗ್‌ನಲ್ಲಿ ಸುಶೀಲ್‌ ಕುಮಾರ್‌ ಸೆಣಸುವುದು ಮತ್ತೆ ಮುಂದಕ್ಕೆ ಹೋಗಿದೆ. ದಿಲ್ಲಿ ಸುಲ್ತಾನ್‌ ತಂಡದ ಆಟಗಾರನಾಗಿರುವ ಸುಶೀಲ್‌ ಶುಕ್ರವಾರ ಹರಿಯಾಣ ವಿರುದ್ಧ ಆಡಬೇಕಾಗಿತ್ತು. ಆದರೆ ಮಂಡಿನೋವಿನ ಕಾರಣ ಮತ್ತೆ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಸುಶೀಲ್‌ ಪಂದ್ಯದಿಂದ ಹಿಂದೆ ಸರಿಯುತ್ತಿರುವುದು ಇದು ಎರಡನೇ ಬಾರಿಯಾಗಿದೆ.

Advertisement

ಸುಶೀಲ್‌ ಕಣಕ್ಕೆ ಇಳಿಯುತ್ತಾರೆ ಎಂಬ ಉತ್ಸಾಹದಲ್ಲಿ ಶುಕ್ರವಾರ ಕ್ರೀಡಾಂಗಣ ತುಂಬಿತ್ತು. ಆದರೆ ಸುಶೀಲ್‌ ಪಂದ್ಯದಿಂದ ಹಿಂದೆ ಸರಿದಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ವೈದ್ಯರ ಸಲಹೆ ಮೇಲೆ ಸುಶೀಲ್‌ 2 ದಿನ ವಿಶ್ರಾಂತಿ ಪಡೆಯಲಿದ್ದಾರೆ. ಈ ಪಂದ್ಯದಲ್ಲಿ ಹರಿಯಾಣ 5-2ರಿಂದ ಗೆಲುವು ಸಾಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next