Advertisement

ಪ್ರೇಕ್ಷಕರು ತರುವ ಹೊರಗಿನ ಆಹಾರಕ್ಕೆ ಕಡಿವಾಣ ಹಾಕುವ ಹಕ್ಕು ಥಿಯೇಟರ್ ಮಾಲೀಕರಿಗಿದೆ: ಸುಪ್ರೀಂ

06:13 PM Jan 03, 2023 | Team Udayavani |

ನವದೆಹಲಿ: ಸಿನಿಮಾ ಹಾಲ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಿಗೆ ಸಿನಿಮಾ ಪ್ರೇಕ್ಷಕರು ಆಹಾರ ಮತ್ತು ಪಾನೀಯವನ್ನು ಹೊರಗಿನಿಂದ ಕೊಂಡೊಯ್ಯುವುದನ್ನು ನಿಯಂತ್ರಿಸುವ ಹಕ್ಕನ್ನು ಥಿಯೇಟರ್ ಮಾಲೀಕರು ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

Advertisement

ಪ್ರೇಕ್ಷಕರು ಸಿನಿಮಾ ಹಾಲ್‌ಗಳಿಗೆ ಆಹಾರವನ್ನು ತೆಗೆದುಕೊಂಡು ಹೋಗಬಹುದೇ ಎಂಬ ಕುರಿತು ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಾದ ವಿವಾದಗಳು ನಡೆದ ಬಳಿಕ ಕೋರ್ಟ್ ತನ್ನ ವರದಿಯನ್ನು ನೀಡಿದ್ದು ನೀವು ಹೊರಗಿನಿಂದ ಆಹಾರ, ಪಾನೀಯಗಳನ್ನು ಥಿಯೇಟರ್ ಒಳಗೆ ನಿಮ್ಮಿಚ್ಛೆಯಂತೆ ತರಲು ಸಿನಿಮಾ ಹಾಲ್ ಜಿಮ್ ಅಲ್ಲ, ಹೊರಗಿನ ಆಹಾರಗಳನ್ನು ನಿಯಂತ್ರಿಸುವ ಅಧಿಕಾರ ಥಿಯೇಟರ್ ಮಾಲೀಕರಿಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು ಥಿಯೇಟರ್ ಮಾಲೀಕರ ಪರವಾಗಿ ಆದೇಶ ಹೊರಡಿಸಿದೆ. ಆದರೆ, ಪೋಷಕರು ತಮ್ಮ ಶಿಶುಗಳಿಗೆ ಕೊಂಡೊಯ್ಯುವ ಆಹಾರವನ್ನು ಚಿತ್ರಮಂದಿರಗಳು ವಿರೋಧಿಸಬಾರದು ಎಂದು ಪೀಠವು ಪುನರುಚ್ಚರಿಸಿದೆ.

ಸಿನಿಮಾ ವೀಕ್ಷಕರಿಗೆ ಥಿಯೇಟರ್ ಮಾಲೀಕರು ನೀಡುವ ಆಹಾರ ಮತ್ತು ಪಾನೀಯಗಳನ್ನು ಮಾತ್ರ ಕೊಂಡೊಯ್ಯುವ ಅವಕಾಶ ಕೋರ್ಟ್ ನೀಡಿದೆ ಅದನ್ನು ಪಡೆಯುವುದು ಸಿನಿಮಾ ವೀಕ್ಷಕರಿಗೆ ಬಿಟ್ಟದ್ದು ಎಂದು ಹೇಳಿದೆ.

ಇದನ್ನೂ ಓದಿ: ಚರ್ಮಕ್ಕೆ ಪ್ರಯೋಜನಕಾರಿ…ಸೌಂದರ್ಯದ ಪ್ರತೀಕ ರೋಸ್ ವಾಟರ್ ನಿಂದ ಹಲವು ಪ್ರಯೋಜನಗಳಿವೆ…

Advertisement
Advertisement

Udayavani is now on Telegram. Click here to join our channel and stay updated with the latest news.

Next