Advertisement
ಪುದೀನ ಚಟ್ನಿಬೇಕಾಗುವ ಸಾಮಗ್ರಿ: ಪುದೀನ ಸೊಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು, ಹುರಿಗಡಲೆ- 3 ಚಮಚ, ಬೆಳ್ಳುಳ್ಳಿ-10, ಶುಂಠಿ- ಒಂದು ಸಣ್ಣ ತುಣುಕು, ಹಸಿಮೆಣಸಿನ ಕಾಯಿ, ಉಪ್ಪು, ಲಿಂಬೆಹುಳಿ, ಜೀರಿಗೆ, ಚೂರು ಬೆಲ್ಲ.
ಮಾಡುವ ವಿಧಾನ: ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಒಟ್ಟಿಗೆ ಸೇರಿಸಿ, ನೀರು ಹಾಕದೆ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಅದಕ್ಕೆ ಉಪ್ಪು, ಲಿಂಬೆರಸ ಬೆರೆಸಿ. ಇದು ಬಹಳ ರುಚಿಯಾಗಿರುವುದಲ್ಲದೆ, ಐದಾರು ದಿನಗಳವರೆಗೆ ಕೆಡುವುದಿಲ್ಲ.
ಬೇಕಾಗುವ ಸಾಮಗ್ರಿ: ಖರ್ಜೂರ- 1 ಬಟ್ಟಲು, ಹುಣಸೆಹಣ್ಣು- ಕಾಲು ಬಟ್ಟಲು, ಬೆಲ್ಲ- ಕಾಲು ಬಟ್ಟಲು, ಜೀರಿಗೆ- 2 ಚಮಚ, ಕೆಂಪು ಖಾರದ ಪುಡಿ- 2 ಚಮಚ, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ: ಖರ್ಜೂರವನ್ನು ಒಂದು ಗಂಟೆ ನೀರಿನಲ್ಲಿ ನೆನೆ ಹಾಕಿ. ನೆಂದ ಖರ್ಜೂರವನ್ನು ನುಣ್ಣಗೆ ರುಬ್ಬಿಕೊಳ್ಳಿ. ಹುಣಸೆಹಣ್ಣನ್ನು ಬಿಸಿ ನೀರು ಬೆರೆಸಿ ಚೆನ್ನಾಗಿ ಕಿವುಚಿ ರಸ ತೆಗೆಯಿರಿ. ಖರ್ಜೂರ ಮತ್ತು ಹುಣಸೆ ರಸವನ್ನು ಬೆರೆಸಿ, ಸೋಸಿ. ಆ ಮಿಶ್ರಣಕ್ಕೆ ಉಪ್ಪು, ಖಾರದ ಪುಡಿ, ಬೆಲ್ಲ, ಹುರಿದ ಜೀರಿಗೆ ಪುಡಿ ಹಾಕಿ ಬೆರೆಸಿ, ಚೆನ್ನಾಗಿ ಕುದಿಸಿ. ಈ ಚಟ್ನಿಯನ್ನು ಸಮೋಸ, ಬೋಂಡಾ, ಪಕೋಡದ ಜೊತೆ ನೆಂಚಿಕೊಂಡು ತಿನ್ನಬಹುದು. ಸಿಹಿಗುಂಬಳ
ಬೇಕಾಗುವ ಸಾಮಗ್ರಿ: ಸಿಹಿಗುಂಬಳ- 1 ಕಪ್, ಕೆಂಪು ಮೆಣಸು- 6, ಹುರಿಗಡಲೆ- ಅರ್ಧ ಕಪ್, ಒಣಕೊಬ್ಬರಿ- ಅರ್ಧ ಕಪ್, ಕೊತ್ತಂಬರಿ ಸೊಪ್ಪು, ಜೀರಿಗೆ, ಉಪ್ಪು, ಸಕ್ಕರೆ, ಮಾವಿನತುರಿ/ ಲಿಂಬೆ ರಸ- ರುಚಿಗೆ ತಕ್ಕಷ್ಟು.
ಮಾಡುವ ವಿಧಾನ: ಸಿಹಿಗುಂಬಳದ ಸಿಪ್ಪೆ ತೆಗೆದು, ದಪ್ಪದಾಗಿ ಹೆಚ್ಚಿಕೊಳ್ಳಿ. ನಂತರ, ಅದನ್ನು ಎಣ್ಣೆಯಲ್ಲಿ ಚೆನ್ನಾಗಿ ಹುರಿಯಿರಿ (ನೀರು ಹಾಕಿ ಬೇಯಿಸಬಹುದು). ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಸಿಹಿಗುಂಬಳದ ಜೊತೆ ಸೇರಿಸಿ ರುಬ್ಬಿ. ಇದು ಕೊಬ್ಬರಿ ಚಟ್ನಿಯಷ್ಟೇ ರುಚಿಯಾಗಿರುತ್ತದೆ.