ಕೇರಳ : ಮಲೆಯಾಳಂ ಚಿತ್ರರಂಗದಲ್ಲಿ ಲಿಜೋ ಪಲ್ಲಿಶೇರಿ ಜನಪ್ರಿಯ ಹೆಸರು, ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡಿದ ಲಿಜೋ ಅವರ ಮುಂದಿನ ಚಿತ್ರ “ಚುರುಳಿ” ಸಿನಿಮಾದ ಆಫೀಶಿಯಲ್ ಟ್ರೈಲರ್ ಬುಧವಾರ ಬಿಡುಗಡೆಯಾಗಿದೆ.
ಲಿಜೋ ಖ್ಯಾತಿ ಎಷ್ಟಿದೆ ಎಂದರೆ ಸಿನಿ ಪ್ರೇಕ್ಷಕರು ಅವರ ಮುಂದಿನ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿರುತ್ತಾರೆ. “ ಅಂಗಮಾಲಿ ಡೈರೀಸ್, ಇವರೊಳಗಿರುವ ನಿರ್ದೇಶಕನನ್ನು ಹೊರ ತಂದ ಚಿತ್ರ. ಈ.ಮಾ.ಯು ಹಾಗೂ ಜಲ್ಲಿಕಟ್ಟು ಮಲೆಯಾಳಂ ಚಿತ್ರರಂಗದಲ್ಲಿ ತನ್ನದೆ ಛಾಫನ್ನು ಹೊಂದಿದೆ, ಚಿತ್ರಕ್ಕೆ ಇತ್ತೀಚಿನ ವರ್ಷದಲ್ಲಿ ಹಲವಾರು ಪ್ರಶಸ್ತಿಗಳು ದೊರಕಿದೆ. ಲಿಜೋ ನಿರ್ದೇಶನದ ಹೊಸ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಟ್ರೆಂಡಿಂಗ್ ನಲ್ಲಿ ಸದ್ದು ಮಾಡುತ್ತಿದೆ.
“ಚುರುಳಿ” ಟ್ರೈಲರ್ ನಲ್ಲಿ ತೋರಿಸುವಂತೆ ಇಬ್ಬರು ದಟ್ಟಾರಣ್ಯದಲ್ಲಿ ಸಿಲುಕಿಕೊಂಡು, ಅಲ್ಲಿರುವ ವಿಚಿತ್ರ ಜನರ ಸಂಪರ್ಕದಿಂದ ಹೊರ ಬರಲು ಹರಸಾಹಸ ಪಡುವ ಸುತ್ತ ಚಿತ್ರ ಸಾಗುತ್ತದೆ ಎನ್ನುವುದು ಮೇಲ್ನೋಟಕ್ಕೆ ಟ್ರೈಲರ್ ಮೂಲಕ ಗಮನ ಸೆಳೆಯುತ್ತದೆ. ಇಡೀ ಟ್ರೈಲರ್ ಹಿಂದೆ ಕೇಳಿಸುವ ಹಿನ್ನಲೆ ಸಂಗೀತ ಕುತೂಹಲವನ್ನು ಹೆಚ್ಚಿಸುತ್ತದೆ. ತಾಂತ್ರಿವಾಗಿ ಚಿತ್ರ ತಂಡದ ಶ್ರಮ ಟ್ರೈಲರ್ ನಲ್ಲಿ ಎದ್ದು ಕಾಣುತ್ತದೆ.
ಜಲ್ಲಿಕಟ್ಟು ನಲ್ಲಿ ಚಿತ್ರಕಥೆಯಲ್ಲಿ ಗುರುತಿಸಿಕೊಂಡಿದ್ದ ಎಸ್ ಹರೀಶ್ ಚುರುಳಿಯಲ್ಲಿ ಕೂಡ ಅದೇ ಕಾಯಕವನ್ನು ಮಾಡಿದ್ದಾರೆ. ಚಿತ್ರದಲ್ಲಿ ಘಟಾನುಘಟಿ ಅನುಭವಿ ಕಲಾವಿದರು ಕಾಣಿಸಿಕೊಂಡಿದ್ದು ಪ್ರಮುಖವಾಗಿ ಚೆಂಬನ್ ವಿನೋದ್, ವಿನಯ್ ಫ್ರಂಟ್, ಜಿಜು ಜೋರ್ಜ್, ಸೌಬಿನ್ ಶಾಹೀರ್, ಜಾಫರ್ ಇಡುಕ್ಕಿ ಹಾಗೂ ಇತರ ಪ್ರಮುಖರು ಬಣ್ಣ ಹಂಚಿದ್ದಾರೆ.
ಚುರುಳಿ ಚಿತ್ರದ ಕಥೆಯನ್ನು ವಿನೋಯ್ ಥಾಮಸ್ ಬರೆದಿದ್ದು. ಚಿತ್ರವನ್ನು ಕೇವಲ 19 ದಿನಗಳಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ.