Advertisement
ಮಂಗಳೂರಿನಲ್ಲಿ ಬಿಷಪ್ ರೈ| ರೆ| ಡಾ| ಅಲೋಶಿಯಸ್ ಪಾವ್É ಡಿ’ಸೋಜಾ ರೊಜಾರಿಯೋ ಕೆಥೆಡ್ರಲ್‌ನಲ್ಲಿ ಮತ್ತು ಉಡುಪಿ ಬಿಷಪ್ ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೋ ತೊಟ್ಟಂ ಸಂತ ಅನ್ನಮ್ಮ ಮಾತೆ ಚರ್ಚ್‌ನಲ್ಲಿ ನಡೆದ ವಿಶೇಷ ಪ್ರಾರ್ಥನೆ ಮತ್ತು ಬಲಿ ಪೂಜೆಯಲ್ಲಿ ಪಾಲ್ಗೊಂಡು ಸಂದೇಶ ನೀಡಿದರು.
ಬಲಿ ಪೂಜೆಗೆ ಮೊದಲು ತೆಂಗಿನ ಗರಿಗಳನ್ನು ಚರ್ಚ್ ಆವರಣದಲ್ಲಿ ಧರ್ಮಗುರುಗಳು ಆಶೀರ್ವಚಿಸಿದರು. ಬಳಿಕ ಅವುಗಳನ್ನು ಭಾಗವಹಿಸಿದ್ದ ಎಲ್ಲ ಕ್ರೈಸ್ತರಿಗೆ ವಿತರಿಸಲಾಯಿತು. ಅವುಗಳನ್ನು ಹಿಡಿದು ಕ್ರೈಸ್ತರು ಯೇಸು ಕ್ರಿಸ್ತರಿಗೆ ಜೈಕಾರ ಹಾಕುತ್ತಾ ಮೆರವಣಿಗೆಯಲ್ಲಿ ಚರ್ಚ್ ಒಳಗೆ ಪ್ರವೇಶಿಸಿದರು. ಅಲ್ಲಿ ಬಲಿ ಪೂಜೆ ನಡೆಯಿತು.
Related Articles
Advertisement
ಹಿನ್ನೆಲೆ: ಯೇಸು ಕ್ರಿಸ್ತರು ಬೆಥಾನಿಯಾದಿಂದ ದೇವನಗರಿ ಎಂದೇ ಹೇಳಲಾದ ಜೆರುಸಲೆಮಿಗೆ ಪ್ರವೇಶ ಮಾಡುವಾಗ ಅಲ್ಲಿನ ಜನರು “ಒಲಿವ್’ ಮರದ ಗರಿಗಳನ್ನು ಹಿಡಿದು ವೈಭವದಿಂದ ಸ್ವಾಗತಿಸಿ ಬರಮಾಡಿಕೊಂಡಿದ್ದರು ಎಂಬ ಉಲ್ಲೇಖ ಬೈಬಲ್‌ನಲ್ಲಿದೆ. ಈ ಹಿನ್ನೆಲೆಯಲ್ಲಿ ಗರಿಗಳ ರವಿವಾರ ಆಚರಿಸಲಾಗುತ್ತದೆ. ಪ್ರಸ್ತುತ ಇಲ್ಲಿ ಒಲಿವ್ ಮರದ ಗರಿಗಳ ಬದಲು ತೆಂಗಿನ ಗರಿಗಳನ್ನು ಸಾಂಕೇತಿಕವಾಗಿ ಹಿಡಿದು ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಗರಿಗಳ ರವಿವಾರ ಆಚರಣೆಯೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹ ಆರಂಭಗೊಳ್ಳುತ್ತದೆ.
ಕಾಸರಗೋಡು: ಮಂಗಳೂರು ಧರ್ಮಪ್ರಾಂತಕ್ಕೆ ಒಳಪಟ್ಟ ಕಾಸರಗೋಡು ವಲಯದ ಎಲ್ಲ ಚರ್ಚ್ ಹಾಗೂ ಜಿಲ್ಲೆಯ ಇತರ ಚರ್ಚ್‌ಗಳಲ್ಲಿ ಗರಿಗಳ ರವಿವಾರ ವಿಶೇಷ ಪ್ರಾರ್ಥನೆ, ಬಲಿಪೂಜೆಯೊಂದಿಗೆ ನಡೆಯಿತು. ತೆಂಗಿನ ಗರಿಗಳನ್ನು ಹಿಡಿದು ಕ್ರೈಸ್ತರು ಬಲಿ ಪೂಜೆಯಲ್ಲಿ ಪಾಲ್ಗೊಂಡರು.