ಇಂಧೋರ್ (ಮಧ್ಯಪ್ರದೇಶ): ಕೋವಿಡ್ -19 ಸೋಂಕಿನ ಮಧ್ಯೆ ಗಣೇಶ್ ಚತುರ್ಥಿ ಹಬ್ಬ ಬಂದಿದೆ. ಕೋವಿಡ್ ಭೀತಿ ಇದ್ದರೂ ಸುರಕ್ಷಿತ ಕ್ರಮಗಳೊಂದಿಗೆ ಸರಳವಾಗಿ ಆಚರಿಸಲು ಜನತೆ ಸಿದ್ದತೆ ನಡೆಸುತ್ತಿದ್ದಾರೆ. ವಿವಿಧ ರೀತಿಯ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಆಗಮಿಸುತ್ತಿದ್ದು, ಇಂಧೋರ್ ನ ಮಹಿಳೆಯೊಬ್ಬರು ಚಾಕಲೇಟ್ ನಲ್ಲಿ ಗಣೇಶ ಮೂರ್ತಿ ರಚಿಸಿ ಗಮನ ಸೆಳೆದಿದ್ದಾರೆ.
ಮಧ್ಯಪ್ರದೇಶದ ಇಂಧೋರ್ ನ ನಿಧಿ ಶರ್ಮಾ ಎಂಬಾಕೆ ಈ ವಿಶಿಷ್ಟ ಚಾಕಲೇಟ್ ಗಣಪತಿ ತಯಾರಿಸಿದವರು.
ಪ್ರಸಕ್ತ ಪರಿಸ್ಥಿತಿಗೆ ಸರಿಹೊಂದುವಂತೆ ಇವರು ಮೂರ್ತಿ ರಚಿಸಿದ್ದು, ಗಣಪತಿಯು ಕೋವಿಡ್ ವೈರಸ್ ಗೆಲ್ಲುವ ರೀತಿ ಚಿತ್ರಿಸಿದ್ದಾರೆ. ಗಣಪತಿಯು ಕೋವಿಡ್ ವೈರಸ್ ನ್ನು ತ್ರಿಶೂಲದಿಂದ ಕೊಲ್ಲುವಂತೆ ಚಾಕಲೇಟ್ ನಲ್ಲಿ ನಿಧಿ ಶರ್ಮಾ ರಚಿಸಿದ್ದಾರೆ. ಇದರೊಂದಿಗೆ ಕೋವಿಡ್ ವಾರಿಯರ್ಸ್ ಗಳಾದ ಪೊಲೀಸ್ ಮತ್ತು ವೈದ್ಯರ ಸಣ್ಣ ಮೂರ್ತಿಯನ್ನು ಚಾಕಲೇಟ್ ನಲ್ಲಿ ರಚಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ನಿಧಿ ಶರ್ಮಾ, ಈ ಹಿಂದೆಯೂ ನಾನು ಚಾಕಲೇಟ್ ನಲ್ಲಿ ಸಣ್ಣ ಕಲಾಕೃತಿಗಳನ್ನು ರಚಿಸುತ್ತಿದೆ. ಈ ಗಣೇಶ್ ಮೂರ್ತಿಯನ್ನು ಹಾಲಿನಲ್ಲಿ ವಿಸರ್ಜಿಸಿ ನಂತರ ಪರಿಸರದಲ್ಲಿ ಹಂಚುವೆ ಎಂದಿದ್ದಾರೆ.