Advertisement

ಕೇಂದ್ರ ಬಸ್‌ ನಿಲ್ದಾಣದಲ್ಲಿ ಚಿತ್ರಾಲೋಕ

07:31 PM Jun 13, 2021 | Girisha |

ವಿಜಯಪುರ: ಸಹಾಯಕ ಸಂಚಾರಿ ಅಧಿಧೀಕ್ಷಕರಾಗಿರುವ ದೇವೇಂದ್ರಪ್ಪ ಡಂಬಳ ಅವರು ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಬಿಡಿಸಿರುವ ವಿಭಿನ್ನ ದೃಷ್ಟಿಕೋನದ ಸಾಮಾಜಿಕ ಜಾಗೃತಿ ಸಂದೇಶ ಬೀರುವ ಚಿತ್ರಗಳು ಇದೀಗ ಗಮನ ಸೆಳೆಯುವ ಜತೆಗೆ ಮೆಚ್ಚುಗೆ ಗಳಿಸಿವೆ. ಬೆನ್ನಿಗೆ ಸಿಲಿಂಡರ್‌ ಹೊತ್ತ ಮಗು ಸಸಿ ನೆಡುವ ಚಿತ್ರಣ, ಕೈಗಾರಿಕೆ ಕಾರಣದಿಂದ ಪರಿಸರ ನಾಶವಾಗಿ ಜೀವ ಸಂಕುಲ ಸಂಚಕಾರಕ್ಕೆ ಸಿಲುಕಿರುವ ದುಸ್ಥಿತಿ, ಮದ್ಯಪಾನದಿಂದಾಗುವ ಅಪಘಾತಗಳು, ವೇಗ ನಿಯಂತ್ರಣ ತಪ್ಪಿದಲ್ಲಿ ಸಂಭವಿಸುವ ದುರಂತಗಳು, ಚಾಲಕರು ಮೊಬೈಲ್‌ನಲ್ಲಿ ಮಾತನಾಡುವುದರಿಂದ ಆಗಲಿರುವ ಅಪಘಾತಗಳು ಹೀಗೆ ವಿವಿಧ ವಿಷಯಗಳ ಚಿತ್ರಗಳನ್ನು ದೇವೇಂದ್ರ ಡಂಬಳ ತಮ್ಮ ಕುಂಚದಲ್ಲಿ ಅರಳಿಸಿದ್ದಾರೆ.

Advertisement

ವಿಜಯಪುರ 1ನೇ ಡಿಪೋದ ಕಾಂಪೌಂಡ್‌ ಗೋಡೆಗೆ ಬೆಳೆದ ಗಿಡ-ಬಳ್ಳಿಗೆ ಯುವತಿಯ ಚಿತ್ರ ಇಲಾಖೆ ಅಧಿ ಕಾರಿಗಳಿಂದ ಮನ್ನಣೆಗೆ ಪಾತ್ರವಾಗಿದೆ. ಇವರಲ್ಲಿರುವ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಿದ್ದರಿಂದಲೇ ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಇಂತಹ ವೈವಿಧ್ಯಮಯ ಚಿತ್ರಗಳು ಅರಳಿವೆ. ದೇವೇಂದ್ರ ಅವರ ಕುಂಚದಲ್ಲಿ ಅರಳಿರುವ ವರ್ಣಮಯ ಚಿತ್ತಾರಗಳನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೂರ್ಮಾರಾವ್‌ ಅವರಲ್ಲೂ ಕುತೂಹಲ ಮೂಡಿಸಿದ್ದು, ಈ ಚಿತ್ರಗಳ ವೀಕ್ಷಣೆಗೆಂದೇ ವಿಜಯಪುರಕ್ಕೆ ಬರುವುದಾಗಿ ಹೇಳಿರುವುದು ಬಹು ದೊಡ್ಡ ಬಹುಮಾನ-ಉಡುಗೊರೆಗೆ ಸಮಾನ ಎನ್ನುತ್ತಾರೆ ಕಲಾವಿದ ದೇವೇಂದ್ರ ಹಾಗೂ ಹಿರಿಯ ಅ ಧಿಕಾರಿಗಳು.

ಚಿತ್ರಕಲೆಯಲ್ಲಿ ಶಾಸ್ತ್ರೀಯ ಅಧ್ಯಯನ, ಶಿಕ್ಷಣ ಪಡೆಯದಿದ್ದರೂ ದೇವೇಂದ್ರಪ್ಪ ಅವರಲ್ಲಿ ಜನ್ಮದತ್ತವಾಗಿ ಚಿತ್ರಕಲೆ ಬಂದಿದೆ. ಬಾಲ್ಯದಲ್ಲಿ ಸ್ಕೆಚ್‌ ಪೆನ್‌, ಪೆನ್ಸಿಲ್‌ನಲ್ಲಿ ಬಿಡಿಸುತ್ತಿದ್ದ ಚಿತ್ರಕಲೆ ಸಹಜತೆ ಹೊಂದಿದ್ದವು. ಶಿಕ್ಷಕರಾಗಬೇಕೆಂಬ ಮಹದಾಸೆಯೊಂದಿಗೆ ಬಿಎ, ಬಿಇಡಿ ಮಾಡಿದ್ದ ಅವರು ಎಂಎ ಓದುವಾಗಲೇ 2008ರಲ್ಲಿ ಸಾರಿಗೆ ಸಂಸ್ಥೆಯ ಸಾರಿಗೆ ನಿರೀಕ್ಷಕ ಹುದ್ದೆಗೆ ಆಯ್ಕೆಯಾಗಿ ಬೆಂಗಳೂರು, ಮೈಸೂರು, ಕಲಬುರಗಿ ಅಂತೆಲ್ಲ ಸೇವಾ ಸಂಚಾರ ಮಾಡಿದ್ದಾರೆ.

ತಮ್ಮ ಎರಡು ಮೂತ್ರಕೋಶಗಳು ವಿಫಲವಾಗಿ ಅನಾರೋಗ್ಯ ಕಾರಣದಿಂದ ಎರಡು ವರ್ಷಗಳ ಹಿಂದೆ ವಿಜಯಪುರಕ್ಕೆ ವರ್ಗವಾಗಿ ಬಂದ ದೇವೇಂದ್ರ ತಾಯಿ ನಿಂಗಮ್ಮ ನೀಡಿದ ಒಂದು ಮೂತ್ರಕೋಶ ದಾನದಿಂದ ಇದೀಗ ಮರುಜೀವ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next