Advertisement

ಹೊಸ ಗಡಿ ಕಾನೂನಿಗೆ ಚೀನ ಒಪ್ಪಿಗೆ

12:40 AM Oct 25, 2021 | Team Udayavani |

ಬೀಜಿಂಗ್‌/ಗ್ರೇಟರ್‌ ನೋಯ್ಡಾ: ಹಲವು ಸುತ್ತುಗಳ ಮಾತುಕತೆ ಬಳಿಕವೂ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ತನ್ನ ದುಸ್ಸಾಹಸ ಮುಂದುವರಿಸಿರುವ ಚೀನ, ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೊಸ ಭೂಗಡಿ ಕಾನೂನಿಗೆ ಅಂಗೀಕಾರ ಪಡೆದುಕೊಂಡಿದೆ.

Advertisement

ಶನಿವಾರ ನ್ಯಾಶನಲ್‌ ಪೀಪಲ್ಸ್‌ ಕಾಂಗ್ರೆಸ್‌(ಎನ್‌ಪಿಸಿ)ನ ಸ್ಥಾಯಿ ಸಮಿತಿ ಸದಸ್ಯರು ಈ ಕಾನೂನಿಗೆ ಸಮ್ಮತಿ ನೀಡಿದ್ದಾರೆ. ಭೂ ಗಡಿ ಪ್ರದೇಶಗಳ ರಕ್ಷಣೆ ಮತ್ತು ಬಳಕೆಯೇ ಇದರ ಆಶಯವಾಗಿದೆ ಎಂದು ಚೀನದ ಸರಕಾರಿ ಸ್ವಾಮ್ಯದ ಕ್ಸಿನ್‌ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಜ.1ರಿಂದಲೇ ಜಾರಿ: ಹೊಸ ಕಾನೂನು ಮುಂದಿನ ವರ್ಷದ ಜನವರಿ 1ರಿಂದಲೇ ಅನುಷ್ಠಾನಗೊಳ್ಳಲಿದ್ದು, ಪೀಪಲ್ಸ್‌ ರಿಪಬ್ಲಿಕ್‌ ಆಫ್ ಚೀನದ ಸಾರ್ವಭೌಮತೆ ಮತ್ತು ಗಡಿ ಸಮ ಗ್ರತೆಯ ರಕ್ಷಣೆಯೇ ಇದರ ಉದ್ದೇಶ ಎಂದು ಹೇಳಲಾಗಿದೆ. ದೇಶದ ಗಡಿ ಸಮಗ್ರತೆ ಹಾಗೂ ಭೂ ಗಡಿಗಳನ್ನು ರಕ್ಷಿಸಲು ಸರ್ಕಾ ರವು ಯಾವುದೇ ಕ್ರಮ ಕೈಗೊಳ್ಳಲು ಸಿದ್ಧವಾ ಗಿರುತ್ತದೆ ಮತ್ತು ಗಡಿ ಸಾರ್ವಭೌಮತೆಗೆ ಅಡ್ಡಿಯಾಗುವಂಥ ಚಟುವಟಿಕೆಗಳನ್ನು ಎದುರಿಸಲು ಸನ್ನದ್ಧವಾಗಿರುತ್ತದೆ ಎಂದು ಕಾನೂನಿನಲ್ಲಿ ಉಲ್ಲೇಖಿಸಲಾಗಿದೆ. ಚೀನ ದೊಂದಿಗೆ ಭಾರತ ಮತ್ತು ಭೂತಾನ್‌ ಗಡಿ ವಿವಾದವು ಮುಂದುವರಿದಿದ್ದು, ಇನ್ನೂ ಯಾವುದೇ ಒಪ್ಪಂದಕ್ಕೆ ಬರಲಾಗಿಲ್ಲ.

ಇದನ್ನೂ ಓದಿ:ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಗಡಿ ಠಾಣೆ ರಚನೆ
ಭಾರತ-ಚೀನ ಗಡಿ ಪ್ರದೇಶದಲ್ಲಿ ಐಟಿಬಿಪಿ ಯ ಹೊಸ ಗಡಿ ಠಾಣೆ ಸ್ಥಾಪಿಸಲು ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಕೇಂದ್ರ ಸಚಿವ ನಿತ್ಯಾನಂದ ರಾಯ್‌ ಹೇಳಿದ್ದಾರೆ. ಗ್ರೇಟರ್‌ ನೋಯ್ಡಾದಲ್ಲಿ ಆಯೋಜಿಸಲಾಗಿದ್ದ ಐಟಿಬಿಪಿಯ 60ನೇ ಸಂಸ್ಥಾಪನ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಈ ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಸರಕಾರ 47 ಗಡಿ ಠಾಣೆ ಸ್ಥಾಪಿಸಲು ಅನು ಮೋದನೆ ನೀಡಿತ್ತು. 8 ಸಾವಿರ ಯೋಧರನ್ನು ಒಳಗೊಂಡ 7 ಹೊಸ ಬೆಟಾಲಿಯನ್‌ ಕೂಡ ಶೀಘ್ರದಲ್ಲಿಯೇ ಸ್ಥಾಪನೆಯಾಗಲಿದೆ ಎಂದಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಕಳೆದ ವರ್ಷ ಚೀನ ವಿರುದ್ಧ ವೀರೋಚಿತ ಹೋರಾಟ ನಡೆಸಿದ 20 ಮಂದಿ ಐಟಿಬಿಪಿ ಯೋಧರನ್ನು ಗೌರವಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next