ಹೊಸದಿಲ್ಲಿ: ಪೂರ್ವ ಲಡಾಕ್‌ನ ಡೆಮ್‌ಚೋಕ್ ಸೆಕ್ಟರ್‌ನಲ್ಲಿ ಸೋಮವಾರ ಭಾರತೀಯ ಸೇನೆಯಿಂದ ಬಂಧಿಸಲ್ಪಟ್ಟ ಚೀನಿ ಸೈನಿಕನನ್ನು ಮಂಗಳವಾರ ರಾತ್ರಿ ಚೀನಾಕ್ಕೆ ಹಸ್ತಾಂತರ ಮಾಡಲಾಗಿದೆ.
ಸೋಮವಾರ (ಅ.19, 2020) ಬೆಳಗ್ಗೆ ಭಾರತೀಯ ಸೇನೆ ಚೀನಾದ ಕಾರ್ಪೊರಲ್ ವಾಂಗ್ ಯಾ ಲಾಂಗ್ ನನ್ನು ಲಡಾಖ್ ನ ಡೆಮ್‌ಚೋಕ್ ನಲ್ಲಿ ಬಂಧಿಸಿತ್ತು. ಬಂಧಿತ ಚೀನಾ ಸೈನಿಕನ ವಿಚಾರಣೆ ಪೂರ್ಣಗೊಂಡ ಬಳಿಕ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ ಎ)ಗೆ ಹಸ್ತಾಂತರಿಸಲಾಗಿದೆ.
“ಭಾರತೀಯ ಸೈನ್ಯವು ಕಳೆದ ರಾತ್ರಿ ಚುಶುಲ್ ಮೊಲ್ಡೊ ಮೀಟಿಂಗ್ ಪಾಯಿಂಟ್‌ನಲ್ಲಿ ಚೀನಾದ ಸೈನಿಕ ಕಾರ್ಪೋರಲ್ ವಾಂಗ್ ಯಾ ಲಾಂಗ್ ನನ್ನು ಚೀನಾದ ಸೈನ್ಯಕ್ಕೆ ಹಸ್ತಾಂತರಿಸಿದೆ” ಎಂದು ಸುದ್ದಿ ಸಂಸ್ಥೆ ಎಎನ್‌ಐ ಬುಧವಾರ ಬೆಳಿಗ್ಗೆ ಟ್ವಿಟರ್‌ನಲ್ಲಿ ವರದಿ ಮಾಡಿದೆ.
ಇದನ್ನೂ ಓದಿ:ತೈವಾನ್ ಜತೆ ವ್ಯಾಪಾರ?, ಚೀನ ಪ್ರಾಬಲ್ಯ ತಡೆಗೆ ಕೇಂದ್ರ ಸರಕಾರದಿಂದ ಹೊಸ ಸೂತ್ರ
ಗಡಿ ದಾಟಿದ್ದರೂ, ಚೀನೀ ಸೈನಿಕನಿಗೆ ವೈದ್ಯಕೀಯ ಸಹಾಯವಾದ ಆಮ್ಲಜನಕ, ಆಹಾರ, ಬೆಚ್ಚಗಿಡುವಂಥ ಬಟ್ಟೆ ನೀಡಲಾಗಿದೆ. ಲಡಾಖ್‌ನ ವಾತಾವರಣದಲ್ಲಿ ಲಾಂಗ್‌ನನ್ನು ಬಂಧಿಸಲಾಗಿರುವುದರಿಂದ ಈ ಎಲ್ಲಾ ಸೌಲಭ್ಯ ನೀಡಲಾಗಿದೆ ಎಂದು ಸೇನೆ ಹೇಳಿದೆ.
ಮೇ ಆರಂಭದಲ್ಲಿ ಭಾರತ- ಚೀನಿ ಗಡಿಯಲ್ಲಿ ನಡೆದ ಘರ್ಷಣೆಯ ನಂತರ ಪೂರ್ವ ಲಡಾಖ್ ನ ಡೆಮ್ ಚೋಕ್ ಸೆಕ್ಟರ್ ನಲ್ಲಿ ಭಾರತ – ಚೀನಾ ಸೇನೆಗಳಿಂದ ತಲಾ 50000 ಸೈನಿಕರನ್ನು ನಿಯೋಜನೆ ಮಾಡಲಾಗಿದೆ.