ತೈವಾನ್ : ತೈವಾನ್ ಸಂಬಂಧಿತ ನಿಬಂಧನೆಗಳ ಬಗ್ಗೆ ಶನಿವಾರ ಅಂಗೀಕರಿಸಿದ ಯುಎಸ್ ವಾರ್ಷಿಕ ರಕ್ಷಣಾ ವೆಚ್ಚ ಮಸೂದೆಯ ಕುರಿತು ಚೀನ ಕೋಪ ವ್ಯಕ್ತಪಡಿಸಿದ ನಂತರ ಚೀನದ ಮಿಲಿಟರಿ 71 ವಿಮಾನಗಳು ಮತ್ತು ಏಳು ಹಡಗುಗಳನ್ನು 24 ಗಂಟೆಗಳಲ್ಲಿ ತೈವಾನ್ ಕಡೆಗೆ ಕಳುಹಿಸಿದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ಸೋಮವಾರ ತಿಳಿಸಿದೆ.
ತನ್ನ ಸ್ವಂತ ಪ್ರದೇಶವೆಂದು ಹೇಳಿಕೊಳ್ಳುವ ಚೀನದ ಸ್ವಯಂ ಆಡಳಿತದ ತೈವಾನ್‌ನಲ್ಲಿ ಮಿಲಿಟರಿ ಕಿರುಕುಳವು ಇತ್ತೀಚಿನ ವರ್ಷಗಳಲ್ಲಿ ತೀವ್ರಗೊಂಡಿದೆ ಮತ್ತು ಕಮ್ಯುನಿಸ್ಟ್ ಪಕ್ಷದ ಪೀಪಲ್ಸ್ ಲಿಬರೇಶನ್ ಆರ್ಮಿಯು ಪ್ರತಿದಿನವೂ ದ್ವೀಪದ ಕಡೆಗೆ ವಿಮಾನಗಳು ಅಥವಾ ಹಡಗುಗಳನ್ನು ಕಳುಹಿಸುತ್ತಿದೆ.
ತೈವಾನ್‌ನ ರಾಷ್ಟ್ರೀಯ ರಕ್ಷಣಾ ಸಚಿವಾಲಯದ ಪ್ರಕಾರ, ಭಾನುವಾರ ಬೆಳಿಗ್ಗೆ 6 ರಿಂದ ಸೋಮವಾರ ಬೆಳಗ್ಗೆ 6 ಗಂಟೆಯ ನಡುವೆ, 47 ಚೀನೀ ವಿಮಾನಗಳು ತೈವಾನ್ ಜಲಸಂಧಿಯ ಮಧ್ಯಭಾಗವನ್ನು ದಾಟಿವೆ, ಅನಧಿಕೃತ ಗಡಿಯನ್ನು ಎರಡೂ ಕಡೆಯವರು ಮೌನವಾಗಿ ಒಪ್ಪಿಕೊಂಡಿದ್ದು., ಚೀನ ತೈವಾನ್ ಕಡೆಗೆ ಕಳುಹಿಸಿದ ವಿಮಾನಗಳಲ್ಲಿ 18 ಜೆ-16 ಫೈಟರ್ ಜೆಟ್‌ಗಳು, 11 ಜೆ-1 ಫೈಟರ್‌ಗಳು, 6 ಎಸ್‌ಯು-30 ಫೈಟರ್‌ಗಳು ಮತ್ತು ಡ್ರೋನ್‌ಗಳು ಸೇರಿವೆ.
ತೈವಾನ್ ತನ್ನ ಭೂ-ಆಧಾರಿತ ಕ್ಷಿಪಣಿ ವ್ಯವಸ್ಥೆಗಳ ಮೂಲಕ ಮತ್ತು ತನ್ನದೇ ಆದ ನೌಕಾಪಡೆಯ ಹಡಗುಗಳ ಮೂಲಕ ಚೀನದ ಚಲನೆಯನ್ನು ಮೇಲ್ವಿಚಾರಣೆ ಮಾಡಿದೆ ಎಂದು ಹೇಳಿದೆ.
ತೈವಾನ್‌ಗೆ ಬೆಂಬಲವಾಗಿ ಅಮೆರಿಕ ಸರ್ಕಾರದ ಕ್ರಮಗಳಿಗೆ ಪ್ರತಿಕ್ರಿಯೆಯಾಗಿ ಚೀನದ ಮಿಲಿಟರಿ ಸಾಮಾನ್ಯವಾಗಿ ದೊಡ್ಡ ಮಿಲಿಟರಿ ವ್ಯಾಯಾಮಗಳನ್ನು ಬಲದ ಪ್ರದರ್ಶನವಾಗಿ ಬಳಸಿದೆ. ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಗೆ ಪ್ರತಿಕ್ರಿಯೆಯಾಗಿ ಆಗಸ್ಟ್‌ನಲ್ಲಿ ದೊಡ್ಡ ಲೈವ್-ಫೈರ್ ಮಿಲಿಟರಿ ತಾಲೀಮುಗಳನ್ನು ನಡೆಸಿತ್ತು. ಚೀನ ವಿದೇಶಿ ಸರ್ಕಾರಗಳ ಪ್ರತಿನಿಧಿಗಳು ದ್ವೀಪಕ್ಕೆ ಭೇಟಿ ನೀಡುವುದನ್ನು ದ್ವೀಪದ ವಾಸ್ತವಿಕ ಮಾನ್ಯತೆ ಮತ್ತು ಚೀನದ ಸಾರ್ವಭೌಮತ್ವದ ಹಕ್ಕಿಗೆ ಸವಾಲು ಎಂದು ಹೇಳಿತ್ತು.