Advertisement

ಅನ್ಯಗ್ರಹ ಜೀವಿಗಳ ಕುರುಹು ಪತ್ತೆ? ಚೀನದ ಸ್ಕೈ ಐ ರೇಡಿಯೋ ಟೆಲೆಸ್ಕೋಪ್‌ಗೆ ಸಂಕೇತ!?

05:37 PM Jun 15, 2022 | Team Udayavani |

ಬೀಜಿಂಗ್‌: ಭೂಮಿಯಿಂದ ಆಚೆಗೆ ಜೀವಿಗಳು ಇವೆಯೇ ಎಂಬ ಬಗ್ಗೆ ಹಲವು ದೇಶಗಳು ದಶಕಗಳಿಂದ ಸಂಶೋಧನೆ ನಡೆಸುತ್ತಿವೆ. ಆದರೆ, ಈ ಬಗ್ಗೆ ಖಚಿತ ಎನ್ನಬಹುದಾದ ಉತ್ತರ ಇದುವರೆಗೆ ಸಿಕ್ಕಿಲ್ಲ. ಆದರೆ, ಚೀನದ ಇತ್ತೀಚಿನ ಹೇಳಿಕೆ ಪ್ರಕಾರ ಭೂಮಿಯಿಂದಾಚೆಗೆ ಜೀವಿಗಳು ಇವೆ.

Advertisement

ಚೀನದ ನೈಋತ್ಯ ಭಾಗದಲ್ಲಿರುವ ಗುಯಿಝೋವ್‌ ಪ್ರಾಂತ್ಯದಲ್ಲಿ 2020ರ ಸೆಪ್ಟೆಂಬರ್‌ನಲ್ಲಿ ಅಳವಡಿಸಲಾಗಿರುವ ಜಗತ್ತಿನ ಅತ್ಯಂತ ದೊಡ್ಡದು ಎಂದು ಹೇಳಲಾಗಿರುವ “ಸ್ಕೈ ಐ’ ಎಂಬ ರೇಡಿಯೋ ದೂರದರ್ಶಕಕ್ಕೆ ಭೂಮಿಯಿಂದ ಆಚೆಗೆ ಜೀವಿಗಳು ಇರುವ ಬಗ್ಗೆ ಸಂಕೇತಗಳು ಲಭ್ಯವಾಗಿದೆ. ಕೆಲವೇ ಗಂಟೆಗಳಲ್ಲಿ ಪತ್ರಿಕೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದ್ದ ವರದಿಯನ್ನು ವಾಪಸ್‌ ಪಡೆಯಲಾಗಿದೆ.

ಈ ಹಿಂದೆಯೂ ಕೂಡ ಇಂಥದ್ದೇ ಮಾದರಿಯ ಸಂಕೇತ ಲಭ್ಯವಾಗಿತ್ತು ಎಂದು ಮುಖ್ಯ ವಿಜ್ಞಾನಿ ಝಾಂಗ್‌ ತೋಂಜೆ ಪ್ರತಿಪಾದಿಸಿದ್ದಾರೆ. ಇದೊಂದು ರೇಡಿಯೋ ಸಂಕೇತಗಳ ಛೇದನವಾಗಿರಬಹುದು. ಅನ್ಯ ಜೀವಿಗಳು ಇರುವ ಬಗ್ಗೆ ಮತ್ತಷ್ಟು ಅಧ್ಯಯನಗಳು ಅಗತ್ಯವಿದೆ ಎಂದು ಝಾಂಗ್‌ ಹೇಳಿದ್ದಾರೆ. ವೆಬ್‌ಸೈಟ್‌ನಲ್ಲಿ ವರದಿ ಅಪ್‌ಲೋಡ್‌ ಮಾಡಲಾಗುತ್ತಿದ್ದಂತೆಯೇ ಜಗತ್ತಿನ ಮಾಧ್ಯಮಗಳಲ್ಲಿ ಅದು ಪ್ರಕಟವಾಗತೊಡಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next