ಅಲ್ಲಿನ ಸರಕಾರ ಇಂಥ ಹೆಸರುಗಳನ್ನೇ ಬ್ಯಾನ್ ಮಾಡಿದೆ.
Advertisement
ಮೊದಲೇ ಚೀನದಲ್ಲಿ ಇಂಗ್ಲಿಷ್ ಭಾಷೆ ಕಂಡರೆ ಅಷ್ಟಕಷ್ಟೇ. ಇಲ್ಲಿ ಏನು ಮಾಡಿದರೂ ಜನ ಇಂಗ್ಲಿಷ್ ಕಲಿಯಲಿಕ್ಕೇ ಹೋಗಲ್ಲ. ಆದರೂ ವಿದೇಶಿಗರನ್ನು ಸೆಳೆಯುವ ಸಲುವಾಗಿ ತಮ್ಮ ಅಂಗಡಿಗಳು, ಕಂಪೆನಿಗಳಿಗೆ ಹೇಗೆ ಬೇಕೋ ಹಾಗೆ ಹೆಸರಿಟ್ಟುಕೊಳ್ಳುತ್ತಾರೆ ಎಂಬುದೇ ಚೀನ ಸರಕಾರದ ನೋವು. ಆಗಿದ್ದಿಷ್ಟೇ ಕಾಂಡೋಮ್ ಕಂಪೆನಿಯೊಂದು, “ದೆರ್ ಈಸ್ ಎ ಗ್ರೂಪ್ ಆಫ್ ಯಂಗ್ ಪೀಪಲ್ ವಿತ್ ಡ್ರೀಮ್ಸ್, ಹೂ ಬಿಲೀವ್ ದೆ ಕ್ಯಾನ್ ಕ್ರಿಯೇಟ್ ವಂಡರ್ಸ್ ಆಫ್ ಲೈಫ್ ಅಂಡರ್ ಅಂಕಲ್ ನಿಯೂಸ್ ಲೀಡರ್‌ಶಿಪ್ ಇಂಟರ್ನೆಟ್ ಟೆಕ್ನಾಲಜಿ ಎಂಬ ಹೆಸರನ್ನು ಇಟ್ಟುಕೊಂಡಿತ್ತು. ಇದು ಯಾರಿಗೂ ಅರ್ಥವಾಗದ, ಅರ್ಥವಿಲ್ಲದ ಲೈನ್ ಆಗಿದ್ದರಿಂದ ಬೇಸತ್ತ ಸರಕಾರ, ಈ ಹೆಸರನ್ನೇ ನಿಷೇಧಿಸಿ ತುಂಡಾದ ಹೆಸರು ಇಟ್ಟುಕೊಳ್ಳುವಂತೆ ಸೂಚಿಸಿದೆ.
ಎರಡು ಸೇತುವೆಗಳನ್ನು ನಿರ್ಮಿಸಿದ್ದರಿಂದ ಬೇಸತ್ತ ಅಲ್ಲಿನ ಸರಕಾರ ಇಂತಹ ವಿನ್ಯಾಸಗಳ ಕಟ್ಟಡಗಳನ್ನು ನಿರ್ಮಿಸಬಾರದು ಎಂದು ಸೂಚಿಸಿದೆ. ಚೀನ ಸೆಂಟ್ರಲ್ ಟೆಲಿವಿಷನ್ ಕಟ್ಟಡ ಕೂಡ ಪ್ಯಾಂಟ್ಸ್ ಬಿಲ್ಡಿಂಗ್ ಎಂಬ ಹೆಸರಿನಿಂದಲೇ ಪ್ರಸಿದ್ಧಿಯಾಗಿದ್ದು ಇದೂ ಕೆಟ್ಟ ವಿನ್ಯಾಸವನ್ನು ಹೊಂದಿದೆ. ಭಾರತಕ್ಕೀಗ ಜಪಾನ್ ಬೆಂಬಲ
ಡೋಕ್ಲಾಂ ವಿಚಾರದಲ್ಲೀಗ ಅಮೆರಿಕದ ಬಳಿಕ ಭಾರತದ ಪರ ಜಪಾನ್ ಬ್ಯಾಟ್ ಬೀಸಿದೆ. ಯಾವುದೇ ದೇಶ ಬಲವಂತವಾಗಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕಾದ ಸ್ಥಳದಲ್ಲಿ ಏಕಪಕ್ಷೀಯ ಪ್ರಯತ್ನಗಳನ್ನು ಮಾಡಬಾರದು ಎಂದು ನೇರವಾಗಿ ಹೇಳಿದೆ. ಈ ಬಗ್ಗೆ ಮಾತನಾಡಿರುವ ಭಾರತದಲ್ಲಿನ ಜಪಾನ್ ರಾಯಭಾರಿ ಕೆಂಜಿ ಹಿರಾಮಟ್ಸು ಅವರು, ಡೋಕ್ಲಾನಲ್ಲಿ ಚೀನ-ಭಾರತ ಸೇನೆ ಎದುರುಬದುರಾಗಿ ನಿಂತು 2 ತಿಂಗಳುಗಳೇ ಕಳೆದಿವೆ ಎಂಬುದು ನಮಗೂ ತಿಳಿದಿದೆ. ಇದು ಇಡೀ ಪ್ರದೇಶದ ಸ್ಥಿರತೆ ಮೇಲೆ ಪರಿಣಾಮ ಬೀರುತ್ತದೆ. ಸದ್ಯ ವಸ್ತುಸ್ಥಿತಿಯನ್ನು ನಾವು ಹತ್ತಿರದಿಂದ ಗಮನಿಸುತ್ತಿದ್ದೇವೆ ಎಂದಿದ್ದಾರೆ. ಅಲ್ಲದೇ ಸದ್ಯ ಚೀನ ಮತ್ತು ಭೂತಾನ್ ಮಧ್ಯೆ ಡೋಕ್ಲಾಂ ವಿಚಾರದಲ್ಲಿ ಗಡಿ ತಕರಾರಿದ್ದು, ಇದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಭೂತಾನ್ ಜೊತೆ ಭಾರತ ಒಪ್ಪಂದವೊಂದನ್ನು ಹೊಂದಿದ್ದು, ಅದರ ಸಾರ್ವಭೌಮತೆಯನ್ನು ರಕ್ಷಿಸುವ ಹೊಣೆ ಹೊತ್ತುಕೊಂಡಿದೆ. ಆದ್ದರಿಂದ ಡೋಕ್ಲಾಂನಲ್ಲಿ ಭಾರತದ ಸೇನೆ ಚೀನ ಯತ್ನಕ್ಕೆ ಎದುರಾಗಿ ನಿಂತಿದೆ ಎಂದು ಹೇಳಿದ್ದಾರೆ. ಜಪಾನ್ ಹೇಳಿಕೆಗೆ ಚೀನ ಪ್ರತಿಕ್ರಿಯಿಸಿದ್ದು, ಡೋಕ್ಲಾನಲ್ಲಿ ಯಥಾಸ್ಥಿತಿಯನ್ನು ಉಲ್ಲಂ ಸಿದ್ದು ಭಾರತವೇ ಹೊರತು ನಾವಲ್ಲ ಎಂದು ಪ್ರತಿ ಆರೋಪ ಮಾಡಿದೆ. ಭಾರತವನ್ನು ಜಪಾನ್ ಬೆಂಬಲಿಸಿ ನಿರಂತರ ಹೇಳಿಕೆಗಳನ್ನು ಕೊಡುವ ಮೊದಲು ನೈಜ ವಿಚಾರಗಳನ್ನು ಪರಾಮರ್ಶೆ ನಡೆಸಲಿ ಎಂದು ಚೀನ ವಿದೇಶಾಂಗ ಇಲಾಖೆ ಹೇಳಿದೆ.
Related Articles
ರವೀಶ್ ಕುಮಾರ್, ವಿದೇಶಾಂಗ ಇಲಾಖೆ ವಕ್ತಾರ
Advertisement