Advertisement

ಭಾರತ ಗಡಿ ಬಳಿ ಚೀನ ವಾಯು ಪಡೆ ಜಮಾವಣೆ: ಅಮೆರಿಕಕ್ಕೆ warning

11:53 AM Feb 05, 2018 | Team Udayavani |

ಹೊಸದಿಲ್ಲಿ : ಭಾರತದ ಸಿಕ್ಕಿಂ ಗಡಿಯಲ್ಲಿನ ಡೋಕ್ಲಾಂ ವಿವಾದ  “ಶಾಂತಿಯುತ’ವಾಗಿ ಬಗೆಹರಿದ ಕೆಲವು ತಿಂಗಳ ಬಳಿಕ ಇದೀಗ ಚೀನ ಪುನಃ ತನ್ನ ಮಿಲಿಟರಿ ಶಕ್ತಿಯನ್ನು  ಚೀನ-ಟಿಬೆಟ್‌ ಗಡಿಯಲ್ಲಿ ಪ್ರದರ್ಶಿಸುವುದಕ್ಕೆ ಸಜ್ಜಾಗಿದೆ.

Advertisement

ಈ ಬಾರಿ ಚೀನ ತನ್ನ ವಾಯು ಪಡೆಯ ಶಕ್ತಿಯನ್ನು ಜಗತ್ತಿಗೆ ಜಾಹೀರು ಪಡಿಸುವುದಕ್ಕೆ ಮುಂದಾಗಿದ್ದು ಇದು ಬಹುತೇಕ ಅಮೆರಿಕಕ್ಕೆ ಸೆಡ್ಡು ಹೊಡೆಯವ ಉದ್ದೇಶವನ್ನು ಹೊಂದಿರುವಂತಿದೆ ಎಂದು ಅಂದಾಜಿಸಲಾಗಿದೆ. ಹಾಗಿದ್ದರೂ ಭಾರತದ ಗಡಿ ನೆಮ್ಮದಿ ಚೀನದ ಈ ಕೃತ್ಯದಿಂದ ಈಗ ಪುನಃ ಕದಡುವಂತಾಗಿದೆ.

ಚೀನ-ಟಿಬೆಟ್‌ ಗಡಿಯಲ್ಲಿ ಬೀಜಿಂಗ್‌ ಮಾಮೂಲಿಗಿಂತ ಶೇ.20ರಷ್ಟು ಹೆಚ್ಚು, ಎಂದರೆ ಒಟ್ಟು 51 ಫೈಟರ್‌ ಜೆಟ್‌ಗಳನ್ನು ಸಜ್ಜು ಗೊಳಿಸಿದೆ. ಲ್ಹಾಸಾ ಗೊಂಗರ್‌ ಪ್ರದೇಶದಲ್ಲಿ ಎಂಟು ಫೈಟರ್‌ ಜೆಟ್‌ಗಳನ್ನು ಇರಿಸಲಾಗಿದೆ. 

ಇದಲ್ಲದೆ 22 ಎಂಐ-017 ಹೆಲಿಕಾಪ್ಟರ್‌ ಗಳನ್ನು ತಂದು ನಿಲ್ಲಿಸಿದೆ. ಇವುಗಳ ಜತೆಗೆ ಚೀನ ಏರ್‌ ಮಿಸೈಲ್‌ ವ್ಯವಸ್ಥೆಯನ್ನೂ ಅಣಿಗೊಳಿಸಿದೆ. 

ರಿಕಾಜೆ ಭಾಗದಲ್ಲಿ 17 ಯುದ್ಧ ವಿಮಾನಗಳು, 11 ಎಂಐ-17 ಮಾನವ ರಹಿತ ವಿಮಾನಗಳನ್ನು  ಇರಿಸಲಾಗಿದೆ. ಸಿಕ್ಕಿಂ ವಲಯಕ್ಕೆ ಸನಿಹದಲ್ಲೇ ಜೆಟ್ಸ್‌ಗಳನ್ನು ಕೂಡ ಚೀನ ಸಮರ ಸನ್ನದ್ದ  ಸ್ಥಿತಿಯಲ್ಲಿ ಇರಿಸಿದೆ. 

Advertisement

ಇಷ್ಟಕ್ಕೂ ಚೀನ – ಟಿಬೆಟ್‌ ಗಡಿ ಪ್ರದೇಶ ಸಮರ ವಿಮಾನ ಹಾರಾಟದ ವಲಯವಲ್ಲ; ಅಂತಾಷ್ಟ್ರೀಯವಾಗಿ ಅದು ನಿಷಿದ್ಧ ಎನ್ನಲಾಗಿದೆ. 

ಈ ಎಲ್ಲ ಬೆಳವಣಿಗೆಗಳ ಹಿನ್ನೆಯಲ್ಲಿ ಚೀನ ಅಮೆರಿಕಕ್ಕೆ ಹಿಂದಿನ ಶೀತಲ ಸಮರ ಕಾಲದ ಮನೋಭಾವದಿಂದ ಹೊರ ಬರುವಂತೆ ನಿಷಿದ್ಧ  ಬುದ್ಧಿವಾದ ಹೇಳಿದೆ. ತನ್ನ ವಾಯುಪಡೆ ಬಲವನ್ನು ಕೀಳಂದಾಜು ಮಾಡದಂತೆಯೂ ಅಮೆರಿಕಕ್ಕೆ ಅದು ತಾಕೀತು ಮಾಡಿದೆ. 

ಹಾಗಿದ್ದರೂ ಇದೇ ವೇಳೆ ಚೀನದ ರಕ್ಷಣಾ ಸಚಿವಾಲಯ ಬಿಡುಗಡೆಗೊಳಿಸಿರುವ ಹೇಳಿಕೆಯ ಪ್ರಕಾರ ಚೀನವು ಶಾಂತಿ ಮತ್ತು ಅಭಿವೃದ್ಧಿಯನ್ನು ಪೋಷಿಸುವಂತೆ ಅಮೆರಿಕಕ್ಕೆ ಕರೆ ನೀಡಿದೆ ! 

ಅಮೆರಿಕ ಈಚೆಗೆ ತನ್ನಲ್ಲಿನ ಅಣ್ವಸ್ತ್ರಗಳ ಸಂಖ್ಯೆಯನ್ನು ಗಮನಾರ್ಹವಾಗಿ ಹೆಚ್ಚಿಸುವ ನಿರ್ಧಾರ ಕೈಗೊಂಡಿರುವುದೇ ಚೀನದ ಈ ಅತಿರೇಕದ ಪ್ರತಿಕ್ರಿಯೆಗೆ ಕಾರಣವೆಂದು ತಿಳಿಯಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next