Advertisement
ಏಪ್ರಿಲ್- ಮೇ ತಿಂಗಳಿನಲ್ಲಿ ಬೇಸಿಗೆ ಶಿಬಿರಗಳ ದರ್ಬಾರು ಶುರು. ಮಕ್ಕಳಲ್ಲಿ ಅಡಗಿರುವ ಚಿತ್ರಕಲೆ, ಸಂಗೀತ, ನೃತ್ಯ, ಕ್ರೀಡೆ, ವೈಜ್ಞಾನಿಕ ತುಡಿತಗಳನ್ನು ಪೋಷಿಸಲು ಬಗೆ ಬಗೆಯ ಬೇಸಿಗೆ ಶಿಬಿರಗಳು ಆರಂಭಗೊಳ್ಳುತ್ತವೆ. ಬೆಂಗಳೂರಿನಂಥ ಮಹಾನಗರದಲ್ಲಿ ಈಗಾಗಲೇ ನೂರಾರು ಕ್ಯಾಂಪುಗಳು ಮಕ್ಕಳ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಸಿದ್ಧತೆ ನಡೆಸಿಕೊಂಡಿವೆ. ರಾಜಧಾನಿಯಲ್ಲಿನ ಕೆಲವೇ ಕೆಲವು ಬೇಸಿಗೆ ಶಿಬಿರಗಳನ್ನು ಆರಿಸಿ, ನಿಮ್ಮ ಮುಂದೆ ಹರವಿದ್ದೇವೆ.
– ಬಲವಂತದ ಕಲಿಕೆ ಬೇಡ. ಶಿಬಿರಕ್ಕೆ ಸೇರುವ ಮುನ್ನ ನಿಮಗೆ ಕಲಿಕೆಯ ವಿಷಯದಲ್ಲಿ ಆಸಕ್ತಿ ಇದೆಯೇ ಎಂಬುದನ್ನು ದೃಢಪಡಿಸಿಕೊಳ್ಳಿ.
– ಶಿಬಿರಕ್ಕೆ ಬೇಕಾದ ಪೂರಕ ಉಪಕರಣಗಳನ್ನು ಮೊದಲೇ ಸಿದ್ಧಮಾಡಿಟ್ಟುಕೊಂಡಿರಿ.
– ಸ್ಕೂಲಲ್ಲಿ ಹೇಗೆ ಶಿಕ್ಷಕರ ಮಾತು ಕೇಳ್ತೀರೋ, ಶಿಬಿರದಲ್ಲಿ ತರಬೇತುದಾರನ ಸೂಚನೆ ಪಾಲಿಸುವುದು ಮುಖ್ಯ.
– ಶಿಸ್ತನ್ನು ಪಾಲಿಸಿ. ಸಹ ಶಿಬಿರಾರ್ಥಿಗಳೊಂದಿಗೆ ಕಿರಿಕ್ ಮಾಡಿಕೊಳ್ಳಬೇಡಿ.
– ಶಿಬಿರದಲ್ಲಿ ಇದ್ದಷ್ಟೂ ಹೊತ್ತು, ಕಲಿಕೆಯ ಸಂಗತಿಯ ಬಗ್ಗೆಯೇ ಚರ್ಚಿಸಿ.
– ಸಾಹಸ, ಕ್ರೀಡೆಯಂಥ ಶಿಬಿರಗಳಲ್ಲಿ ಪಾಲ್ಗೊಳ್ಳುವವರು ಅತಿ ಉತ್ಸಾಹ ಪ್ರದರ್ಶಿಸುವುದಕ್ಕಿಂತ ತಾಳ್ಮೆಯಿಂದ ಕಲಿಯುವುದು ಉತ್ತಮ.
– ಹಠ, ಆತುರ, ಕೋಪಗಳನ್ನು ಆದಷ್ಟು ನಿಯಂತ್ರಿಸಿಕೊಳ್ಳಿ.
– ಆಹಾರ ಕ್ರಮದಲ್ಲಿ ಶಿಸ್ತಿರಲಿ. ಸಿಕ್ಕಿದ್ದನ್ನೆಲ್ಲ ತಿಂದು ಆರೋಗ್ಯ ಕೆಡಿಸಿಕೊಳ್ಳದಿರಿ. ಪೋಷಕರ ಗಮನಕ್ಕೆ
– ಮಕ್ಕಳಿಗೆ ಆಸಕ್ತಿ ಇರುವ ಶಿಬಿರಕ್ಕೆ ಸೇರಿಸಿ.
– ಶಿಬಿರಕ್ಕೆ ಸೇರಿಸುವ ಮುನ್ನ, ಅವುಗಳ ಗುಣಮಟ್ಟ ತರಗತಿಗಳ ಪರಿಶೀಲನೆ ಅಗತ್ಯ.
– ಒಳ್ಳೆಯ ಮಾರ್ಗದರ್ಶಕರು, ಕೋಚ್ ಇದ್ದಾರಾ? ಪರೀಕ್ಷಿಸುವುದು ಮುಖ್ಯ.
– ಶಿಬಿರಕ್ಕೆ ಅಗತ್ಯವಿರುವ ಉಡುಪು, ಉಪಕರಣಗಳನ್ನು ಹೊಂದಿಸುವುದು ನಿಮ್ಮ ಹೊಣೆ.
– ಮಕ್ಕಳು ಮಾನಸಿಕವಾಗಿ ಸದೃಢರಾಗಿದ್ದರಷ್ಟೇ ಕ್ರೀಡೆ, ಈಜು, ಸಾಹಸಮಯ ಶಿಬಿರಕ್ಕೆ ಕಳುಹಿಸಿ.
– ಪ್ರಥಮ ಚಿಕಿತ್ಸಾ ಪೆಟ್ಟಿಗೆಯು ಮಕ್ಕಳ ಬ್ಯಾಗಿನಲ್ಲಿ ಇರಲಿ.
– ಶಿಬಿರದ ಸ್ಥಳಕ್ಕೆ ಬಿಡುವುದು, ಅಲ್ಲಿಂದ ಕರೆದುಕೊಂಡು ಬರುವ ಹೊಣೆಯನ್ನು ನಿಭಾಯಿಸಬೇಕಾಗುತ್ತದೆ.
– ತೀರಾ ತಂಟೆ ಮಾಡುವ ಮಕ್ಕಳಾಗಿದ್ದರೆ, ಅವರಿಗೆ ಶಿಬಿರದಲ್ಲಿ ಹೇಗಿರಬೇಕೆಂದು ತಿಳಿ ಹೇಳಿ.
Related Articles
– ಆಟಿಕೆಗಳು
ಮನೆಯಲ್ಲಿರುವ ಆಟಿಕೆಗಳನ್ನು ಕ್ಯಾಂಪ್‌ಗೆ ಕೊಂಡೊಯ್ದರೆ, ಕಲಿಕೆಯ ಏಕಾಗ್ರತೆಗೆ ಡಿಸ್ಟರ್ಬ್ ಆಗ್ಬಹುದು.
– ಚೂಯಿಂಗ್‌ಗಮ್
ಚೂಯಿಂಗ್ ಗಮ್ ಅನ್ನು ಎಲ್ಲೆಲ್ಲೋ ಉಗಿದು, ಮತ್ತೂಬ್ಬರಿಗೆ ಅಂಟಿ ಅವಾಂತರ ಆಗುವ ಸಾಧ್ಯತೆ ಇರುತ್ತೆ.
– ಪಿನ್
ಸಣ್ಣಪುಟ್ಟ ಪಿನ್‌ನಂಥ ಅಪಾಯಕಾರಿ ವಸ್ತುಗಳಿಂದ ನಿಮಗೆ ಅಥವಾ ಅಕ್ಕಪಕ್ಕದವರಿಗೆ ದೈಹಿಕ ಹಾನಿ ಆಗ್ಬಹುದು.
– ಮೊಬೈಲು
ಕ್ಯಾಂಪ್ ಸ್ಥಳದಲ್ಲಿ ಮೊಬೈಲಲ್ಲಿ ಆಡೋದು, ಮಾತಾಡೋದು ಎರಡೂ ತಪ್ಪು. ಮನಸ್ಸು ವಿಚಲಿತವಾಗಬಹುದು.
– ಕರಿದ ತಿಂಡಿ
ಎಣ್ಣೆ ಪದಾರ್ಥಗಳು ಆರೋಗ್ಯ ಕೆಡಿಸುತ್ತವೆ. ಕುರ್ಕುರೆ, ಲೇಸ್, ಚಿಪ್ಸ್‌ನಂಥ ವಸ್ತುಗಳು ಶಿಬಿರ ಸ್ಥಳಕ್ಕೆ ಬೇಡ.
Advertisement
ತಗೊಂಡ್ ಹೋಗಿ– ನೀರು
ಮೊದೆಲೆ ಬೇಸಿಗೆ. ಆಗಾಗ್ಗೆ ಬಾಯಾರಿಕೆ ಆಗುತ್ತೆ. ಕ್ಯಾಂಪ್‌ನಲ್ಲಿ ನೀರಿನ ಸೌಲಭ್ಯ ಇದ್ದರೂ, ಶುದ್ಧ ನೀರನ್ನು ಮನೆಯಿಂದಲೇ ಕೊಂಡೊಯ್ಯಿರಿ.
– ಕರವಸ್ತ್ರ
ಅಭ್ಯಾಸದ ವೇಳೆ ಬೆವರುತ್ತೀರಿ. ಇದು ದೇಹಕ್ಕೆ ಇನ್ನೂ ಕಿರಿಕಿರಿ. ಕರವಸ್ತ್ರ ಅಥವಾ ಪುಟ್ಟ ಟವೆಲ್ ಅನ್ನು ನಿಮ್ಮ ಜತೆ ಇಟ್ಟುಕೊಂಡಿರಿ.
– ಚಾಕ್ಲೆಟ್
ಆಗಾಗ್ಗೆ ಬಾಯಿ ಸಿಹಿ ಮಾಡಿಕೊಳ್ತಿದ್ರೆ, ಇನ್ನೂ ಜೋಶ್ ಇರುತ್ತೆ. ಹೊಟ್ಟೆಯೂ ಜಾಸ್ತಿ ಹಸಿಯೋದಿಲ್ಲ. ಮುಖಭಾವವೂ ಫ್ರೆಶ್ ಆಗಿರುತ್ತೆ.
– ಫೋನ್ ನಂಬರ್
ಅಪ್ಪ, ಅಮ್ಮ ಅಥವಾ ಪೋಷಕರ ಫೋನ್ ನಂಬರ್ ಬರೆದ ಚೀಟಿ ಸದಾ ನಿಮ್ಮ ಜೊತೆಗಿರಲಿ. ಆಕಸ್ಮಿಕವಾಗಿ ಅವು ನೆರವಿಗೆ ಬರಬಹುದು.
– ಬ್ಯಾಂಡ್ ಏಡ್
ತರಬೇತಿ ವೇಳೆ ಬೀಳ್ಳೋದು, ಏಳ್ಳೋದು ಮಾಮೂಲಿ. ಗಾಯ ಆದ್ರೆ ಅದರ ಪ್ರಾಥಮಿಕ ಶುಶ್ರೂಷೆಗೆ ಬ್ಯಾಂಡ್ ಏಡ್ ಬೇಕೇ ಬೇಕಾಗುತ್ತೆ. ನೃತ್ಯ/ ಸಂಗೀತ
ಮಗ ಮೈಕೆಲ್ ಜಾಕ್ಸನ್ ಆಗ್ಬೇಕು, ಮಗಳು ಊರ್ಮಿಳಾ ರೀತಿ “ಯಾಯಿರೆ’ ಅನ್ಬೇಕು ಎಂಬ ಆಸೆ ಎಲ್ಲ ತಂದೆ- ತಾಯಿಗೂ ಇರುತ್ತೆ. ಈ ಕನಸುಗಳ ಸಾಕಾರಕ್ಕೆಂದೇ ಇವೆ ಒಂದಷ್ಟು ಸಮ್ಮರ್ ಕ್ಯಾಂಪುಗಳು. ದೇಸಿ ಶೈಲಿಯ ನೃತ್ಯ, ಪಾಶ್ಚಾತ್ಯ ಶೈಲಿಯ ನೃತ್ಯ ಅಲ್ಲದೆ ಸಂಗೀತ ಕಲೆಯನ್ನೂ ಇವು ಕಲಿಸುತ್ತವೆ. ನೃತ್ಯ- ಸಂಗೀತ ಅಭಿರುಚಿ ಇರುವ ಮಕ್ಕಳು ಆಯ್ದುಕೊಳ್ಳಬಹುದಾದ 4 ಬೆಸ್ಟ್ ಬೇಸಿಗೆ ಶಿಬಿರಗಳು ಹೀಗಿವೆ…
1. ಸ್ಪಿರಿಟ್ ಆಫ್ ಡ್ಯಾನ್ಸ್
ಏನನ್ನು ಕಲಿಸ್ತಾರೆ?: ಮಕ್ಕಳಿಗೆ ಹಿಪ್‌ಹಾಪ್, ಬಿ- ಬೋಯಿಂಗ್, ಬಾಲಿವುಡ್ ಡ್ಯಾನ್ಸ್ ಮತ್ತು ಸಮಕಾಲೀನ ಶೈಲಿಯ ಡ್ಯಾನ್ಸ್. ನಡುವೆ ಸಂಗೀತಕ್ಕೆ ಸಂಬಂಧಿಸಿದ ವಿಷಯಗಳನ್ನೂ ಕಲಿಸುತ್ತಾರೆ.
ವಯೋಮಿತಿ: 4-6 ವರ್ಷ, 7- 12 ವರ್ಷ.
ಯಾವಾಗ?: ಏಪ್ರಿಲ್- ಮೇ
ಸಮಯ: ಬೆ.9.30- 11.30, ಮಧ್ಯಾಹ್ನ 12- 2
ಶುಲ್ಕ: 3950 ರೂ. (ಒಬ್ಬರಿಗೆ). ಸೋದರರು ಜೊತೆಗೆ ಬಂದಲ್ಲಿ ಶೇ.10 ರಿಯಾಯಿತಿ.
ಎಲ್ಲಿ?: ವಿಜಯಾ ಡ್ಯಾನ್ಸ್ ಸ್ಟುಡಿಯೋ, ಎನರ್ಜಿ ಫಿಟೆ°ಸ್, ಉರುಸ್ ಭವನ, ಮಿಲ್ಲರ್ ಟ್ಯಾಂಕ್, ಬೆಂಗಳೂರು-560052
ಸಂಪರ್ಕ: 9094073727 2. ರಂಗಾಭರಣ ಕಲಾಶಾಲೆ
ಏನನ್ನು ಕಲಿಸ್ತಾರೆ?: ನೃತ್ಯ, ಸಂಗೀತ, ಚಿತ್ರಕಲೆ ತರಬೇತಿ
ವಯೋಮಿತಿ:
ಯಾವಾಗ?: ಏ.3- ಮೇ 3
ಸಮಯ:
ಶುಲ್ಕ:
ಎಲ್ಲಿ?: ಚಂದ್ರಪ್ರಿಯಾ ರಂಗಮಂದಿರ, ಕೆಇಬಿ ಬಡಾವಣೆ, ಸಂಜಯನಗರ.
ಸಂಪರ್ಕ: ಮೊ. 9342672653 3. ಮ್ಯೂಸಿಕ್ ಸೆಂಟ್ರಲ್ ಸಮ್ಮರ್ ಜಾಸ್ ಡ್ಯಾನ್ಸ್
ಏನನ್ನು ಕಲಿಸ್ತಾರೆ?: ಪಾಶ್ಚಿಮಾತ್ಯ ನೃತ್ಯ, ಜಸ್ ವಾಕ್, ಸ್ಪಿನ್ಸ್
ವಯೋಮಿತಿ: 5ರಿಂದ 12 ವರ್ಷ
ಯಾವಾಗ?: ಏ.10ರಿಂದ ಏ.23
ಸಮಯ: ಬೆ.10- ಮ.12
ಶುಲ್ಕ: 2,500 ರೂ. (ತಿಂಗಳಿಗೆ)
ಎಲ್ಲಿ?: ವೀಲ್ಹರ್ ರೋಡ್ ಎಕ್ಸ್‌ಟೆನÒನ್, ಕಾಕ್ಸ್ ಟೌನ್, ಬೆಂಗಳೂರು
ಸಂಪರ್ಕ: ಮೊ. 9820761170
ಜಾಲತಾಣ: : www.musiccentral.in 4. ಶಿಯಾಮಾರ್ಕ್ ಸಮ್ಮರ್ ಫಂಕ್
ಏನನ್ನು ಕಲಿಸ್ತಾರೆ?: ಪಾಶ್ಚಿಮಾತ್ಯ ನೃತ್ಯ, ಇತರೆ ನೃತ್ಯ ತರಬೇತಿ
ವಯೋಮಿತಿ: 4 ವರ್ಷ ಮೇಲ್ಪಟ್ಟವರಿಗೆ
ಯಾವಾಗ?: ಏ.15ರಿಂದ.
ಸಮಯ: ಬೆ.10ರಿಂದ ಸಂಜೆ 5
ಶುಲ್ಕ: 4,200 ರೂ.
ಎಲ್ಲಿ?: ಸದಾಶಿವನಗರ, ಶಂಕರನಗರ, ಬನಶಂಕರಿ
ಸಂಪರ್ಕ: ಮೊ. 80 41317661
ಜಾಲತಾಣ: : www.shiamak.com/bangalore ಸಾಹಸ
ಮಕ್ಕಳು ಸದಾ ಸಾಹಸಪ್ರಿಯರು. ಈ ಸಾಹಸವೇ ಅವರಲ್ಲಿ ಧೈರ್ಯ ತುಂಬುತ್ತದೆ. ಎಂಥ ಕಷ್ಟ ಬಂದರೂ, ಎದುರಿಸೋಣ ಎಂಬ ಹುರುಪನ್ನು ಬಿತ್ತುತ್ತದೆ. ಎಲ್ಲೆಡೆ ಬಿಲ್ಡಿಂಗನ್ನೇ ತುಂಬಿಕೊಂಡಿರುವ ಬೆಂಗಳೂರಿನಲ್ಲಿ ಸ್ಪೈಡರ್‌ಮ್ಯಾನ್ ಆಗುವುದಂತೂ ಕನಸಿನ ಮಾತು. ಸಾಹಸಕ್ಕೆ ಹಾತೊರೆಯುವ ಮಕ್ಕಳಿಗಾಗಿಯೇ ಬೇಸಿಗೆ ಶಿಬಿರಗಳಿವೆ. ಇಲ್ಲಿಗೆ ಹೋದರೆ ಮಕ್ಕಳು ಸಾಹಪ್ರಿಯರಾಗುವ ಜತೆಗೆ ಧೈರ್ಯವಂತರೂ ಆಗೋದು ಪಕ್ಕಾ.
1. ನೇಚರ್ ಜರ್ನಿ ಡೇ ಸಮ್ಮರ್ ಕ್ಯಾಂಪ್
ಏನನ್ನು ಕಲಿಸ್ತಾರೆ?: ಸಾಹಸಮಯ ಚಟುವಟಿಕೆಗಳು, ಟ್ರಕ್ಕಿಂಗ್ ಇತರೆ ತರಬೇತಿ
ವಯೋಮಿತಿ: 9 ವರ್ಷದ ಮೇಲ್ಪಟ್ಟವರಿಗೆ
ಯಾವಾಗ?: ಏ.14ರಿಂದ
ಶುಲ್ಕ: 1635 ರೂ.
ಎಲ್ಲಿ?: ಸೌತ್ ಬೆಂಗಳೂರು, ಕನಕಪುರ ಹತ್ತಿರ ಕ್ಯಾಂಪ್ (ಸಂಸ್ಥೆ ವಿಳಾಸ: ಎಚ್‌ಎಸ್‌ಆರ್. ಲೇಔಟ್ ಬಿಡಿಎ ಕಾಂಪ್ಲೆಕ್ಸ್, ಬೆಂಗಳೂರು)
ಸಂಪರ್ಕ: ಮೊ. 7406690197 2. ಸಮ್ಮರ್ ಅಡ್ವೆಂಚರ್ ಕ್ಯಾಂಪ್
ಏನನ್ನು ಕಲಿಸ್ತಾರೆ?: ಟ್ರಕ್ಕಿಂಗ್, ನೇಚರ್ ವಾಕ್, ಬೆಟ್ಟಗಳ ಬಗ್ಗೆ ತರಬೇತಿ
ವಯೋಮಿತಿ: 8ರಿಂದ 15 ವರ್ಷ
ಯಾವಾಗ?: ಏ.8ರಿಂದ
ಶುಲ್ಕ: 1500 ರೂ.
ಎಲ್ಲಿ?: ಕ್ಯಾಂಪ್‌ಫೈರ್ ಸರ್ಕಲ್ ಅಡ್ವೆಂಚರ್ ಕ್ಯಾಂಪ್, ನಂ. 446, ಹುಲಿಕೆರೆ ಗುನ್ನೂರ್ ವಿಲೇಜ್, ಕೈಲಾಂಚ ಹೋಬಳಿ, ಎಸ್‌ಆರ್‌ಎಸ್ ಹಿಲ್ಸ್, ಬೆಂಗಳೂರು ಸಮೀಪ, ರಾಮನಗರ
ಸಂಪರ್ಕ: ಮೊ. 988047004 ವಿಜ್ಞಾನ
ಮಕ್ಕಳ ಕಲಿಯುವ ಉತ್ಸಾಹ, ಕುತೂಹಲಗಳು ವಿಜ್ಞಾನ ಅಭ್ಯಾಸಕ್ಕೆ ಬಹಳ ಹತ್ತಿರ. ಎಲ್ಲ ವಿಜ್ಞಾನಿಗಳ ಪ್ರತಿಭೆ ಅನಾವರಣಗೊಂಡಿದ್ದೇ ಬಾಲ್ಯದಲ್ಲಿ. ಯಾರಿಗ್ಗೊತ್ತು? ನಮ್ಮ ಮಕ್ಕಳೂ ಅಂಥ ಸಾಧ್ಯತೆಯಿಂದ ಹೊರತಾಗಿಲ್ಲದೆ ಇರಬಹುದು. ವಿಜ್ಞಾನದ ಬಗ್ಗೆ ಆಸಕ್ತಿಯುಳ್ಳ ಮಕ್ಕಳಿಗೆ ಸಮ್ಮರ್ ಕ್ಯಾಂಪ್‌ಗ್ಳು ವಿಶೇಷ ಪುಷ್ಟಿ ನೀಡಬಲ್ಲುವು.
1. ಸೈನ್ಸ್ ಸಮ್ಮರ್ ಕ್ಯಾಂಪ್
ಏನನ್ನು ಕಲಿಸ್ತಾರೆ?: ವಿನೋದ ವಿಜ್ಞಾನ, ಕೌತುಕ ಸಂಗತಿಗಳು, ವಿಜ್ಞಾನ ಚಟುವಟಿಕೆಗಳ ತರಬೇತಿ
ವಯೋಮಿತಿ: 7ರಿಂದ 15 ವರ್ಷ
ಯಾವಾಗ?: ಏಪ್ರಿಲ್
ಸಮಯ: 10.30- 12.30
ಶುಲ್ಕ: 2500 ರೂ.
ಎಲ್ಲಿ?: ಎಇಸಿಎಸ್ ಮೇನ್ ರೋಡ್, ಐಸಿಐಸಿಐ ಬ್ಯಾಂಕ್ ಹತ್ತಿರ, ಬ್ರೋಕ್‌ಫೀಲ್ಸರ್, ಬೆಂಗಳೂರು-37
ಸಂಪರ್ಕ: ಮೊ. 7406690197 2. ಸೈನ್ಸ್ ಉತ್ಸವ್ ಸಮ್ಮರ್ ಕ್ಯಾಂಪ್
ಏನನ್ನು ಕಲಿಸ್ತಾರೆ?: ವಿಜ್ಞಾನ ಪ್ರಯೋಗ, ವಿನೋದ ಪಾಠ, ವಿಜ್ಞಾನ ವಿನ್ಯಾಸಗಳು
ವಯೋಮಿತಿ: 5- 14 ವರ್ಷ
ಯಾವಾಗ?: ಏ.11 ರಿಂದ 19ರವರೆಗೆ
ಸಮಯ: ಬೆ.9.30
ಶುಲ್ಕ: 3,424 ರೂ.
ಎಲ್ಲಿ?: ಮೊದಲನೇ ಮಹಡಿ, 42 ದಾಸ್ ಕಮರ್ಷಿಯಲ್ ಕಾಂಪ್ಲೆಕ್ಸ್, 7ನೇ ಬ್ಲಾಕ್, ಜಯನಗರ, ಜೆಎಸ್ಸೆಸ್ ಸರ್ಕಲ್ ಹತ್ತಿರ, ಕನಕಪುರ ರೋಡ್, ಬೆಂಗಳೂರು-82
ಸಂಪರ್ಕ: ಮೊ. 9094073724 ಕಲೆ
ಪ್ರತಿ ಮಕ್ಕಳಿನಲ್ಲೂ ಒಬ್ಬ ಸಂತನಂತೆ ಕುಳಿತಿರುತ್ತದೆ ಕಲೆ. ವ್ಯಾಸಂಗ ಮುಗಿದ ಬಳಿಕ ಆ ಕಲೆಯೇ ಅವರ ಕೈಹಿಡಿಯುವುದೂ ಇದೆ. ನಟನೆ, ಸಂಗೀತ, ಚಿತ್ರಕಲೆ ಅಥವಾ ಇನ್ನಾéವುದೇ ಸದಭಿರುಚಿಯ ಕಲೆಗಳೂ ಆಗಿರಬಹುದು. ಮಕ್ಕಳ ಸೃಜನಶೀಲತೆಗೆ ನೀರೆರೆದು, ವೇದಿಕೆ ಕಲ್ಪಿಸುವ ಬೇಸಿಗೆ ಶಿಬಿರಗಳಲ್ಲಿ ಪ್ರತಿಭೆಯನ್ನು ಅರಳಿಸಿಕೊಳ್ಳಬಹುದು. 1. ವರ್ಣಾಲಾಪ ಸಾಂಸ್ಕೃತಿಕ ಟ್ರಸ್ಟ್ ಮತ್ತು ಗಾನ ಸುಧಾ
ಏನನ್ನು ಕಲಿಸ್ತಾರೆ?: ಚಿತ್ರಕಲೆ, ಕರಕುಶಲ ಕಲೆ, ಮುಖವಾಡ ತಯಾರಿ, ಸುಗಮ ಸಂಗೀತ, ಜಾನಪದ ಸಂಗೀತ
ವಯೋಮಿತಿ: 6 ರಿಂದ 14 ವರ್ಷ
ಯಾವಾಗ?: ಏಪ್ರಿಲ್- ಮೇ
ಶುಲ್ಕ: 650 ರೂ.
ಎಲ್ಲಿ?: ಗಾನಸುಧಾ, 39, ಕಾನಿಷ್ಕಾ ಮಹಾರಾಜ ರಸ್ತೆ, ಭವಾನಿ ನಗರ, ಕೆಂಪೇಗೌಡ ನಗರ, ಬೆಂಗಳೂರು- ಧಿ560019
ಸಂಪರ್ಕ: ಮೊ. 9035106820 2. ಚಿತ್ರಕಲಾ ಪರಿಷತ್
ಏನನ್ನು ಕಲಿಸ್ತಾರೆ?: ಚಿತ್ರಕಲೆ (ಎಲ್ಲ ರೀತಿಯ ಪೇಂಟಿಂಗ್ಸ್)
ವಯೋಮಿತಿ: 8 ರಿಂದ 16 ವರ್ಷ
ಯಾವಾಗ?: ಏ.10- ಮೇ 26
ಸಮಯ: ಬೆ.11ರಿಂದ ಮಧ್ಯಾಹ್ನ 1
ಶುಲ್ಕ: 4000
ಎಲ್ಲಿ?: ಚಿತ್ರಕಲಾ ಪರಿಷತ್ ಆವರಣ, ಕುಮಾರಕೃಪಾ ರಸ್ತೆ, ಬೆಂಗಳೂರು
ಸಂಪರ್ಕ: ಮೊ. 9611835597 ವಸಂತ ಚಿಲಿಪಿಲಿ
ಏನನ್ನು ಕಲಿಸ್ತಾರೆ?: ಯೋಗ, ಧ್ಯಾನ, ಜಾನಪದ ನೃತ್ಯ, ರಂಗ ಕ್ರೀಡೆ, ಕಥೆ ಹೇಳುವ ಕಲೆ, ವಿವಿಧ ಶೈಲಿಯ ಸಂಗೀತ, ಮಕ್ಕಳ ಚಲನಚಿತ್ರ ಹಾಗೂ ಸಂವಾದ, ಮುಖವಾಡ ತಯಾರಿಕೆ, ನಾಟಕ ತಯಾರಿ ಮತ್ತು ಪ್ರದರ್ಶನ, ಚಿತ್ರಕಲೆ, ಒಂದು ದಿನದ ಪ್ರವಾಸ
ವಯೋಮಿತಿ: 5 ವರ್ಷ ಮೇಲ್ಪಟ್ಟವರಿಗೆ
ಯಾವಾಗ?: ಏ.11ರಿಂದ ಮೇ 4
ಸಮಯ: ಬೆ.10ರಿಂದ ಸಂಜೆ 4
ಶುಲ್ಕ: 2000 ರೂ.
ಎಲ್ಲಿ?: ಕೆ.ವಿ ಸುಬ್ಬಣ್ಣ ಆಪ್ತ ರಂಗಮಂದಿರ, 151, 7ನೇ ಅಡ್ಡರಸ್ತೆ, ಟೀಚರ್ ಕಾಲೋನಿ, ದಯಾನಂದ ಸಾಗರ್ ಕಾಲೇಜು ಬಳಿ, ಬೆಂಗಳೂರು- 78
ಸಂಪರ್ಕ: ಮೊ. 8892795666, 8050558831
—
ಎಲ್ಲೆಲ್ಲಿ ಚಿತ್ರಕಲೆ ಹೇಳಿಕೊಡ್ತಾರೆ?
1. ಕೊಂಸ್ತುಲ್ ಆರ್ಟ್ ಆ್ಯಂಡ್ ಡಿಸೈನ್ ಅಕಾಡೆಮಿ
ಎಲ್ಲಿ?: ಕನ್ಸಲ್ಟ್ ಆರ್ಟ್ ಅಕಾಡೆಮಿ, ಶೋಭ ಲ್ಯಾಕ್‌ವೀವ್ ಕ್ಲಬ್, ಮಾರ್ಗೋಸಾ ಅವಿನ್ಯೂ ಗ್ರೀನ್, ಗ್ಲೆàನ್ ಲೇಔಟ್, ಔಟರ್ ರಿಂಗ್‌ರೋಡ್, ಬೆಂಗಳೂರು- 560103
ಸಂಪರ್ಕ: ಮೊ. 95388 66185 2. ಹ್ಯಾಪಿ ಫೀಟ್ ಫಾರ್ ಕಿಡ್ಸ್
ವಿಳಾಸ: 70, 2ನೇ ಮುಖ್ಯ ರಸ್ತೆ, ಎಇಸಿಎಸ್ ಲೇಔಟ್, ಪೋಸ್ಟಲ್ ಕಾಲೋನಿ, ಸಂಜಯ ನಗರ, ಬೆಂಗಳೂರು- 560094
ಸಂಪರ್ಕ: 080- 4132 1761 3. ದಿ ಇನ್‌ಕ್ರೆಡಿಬಲ್ ಸಮ್ಮರ್ ಕ್ಯಾಂಪ್
ವಿಳಾಸ: ಅಡ್‌ವಿಟೈಟಂ, 867, 25 ಮೇನ್, ಎಚ್‌ಎಸ್‌ಆರ್ ಲೇಔಟ್, ಬ್ಯಾಂಕ್ ಆಫ್ ಬರೋಡಾ ಸಮೀಪ, ಬೆಂಗಳೂರು- 560102
ಸಂಪರ್ಕ: ಮೊ. 9513344121. ಈಜೋಣ ಬನ್ನಿ…
1. ಸ್ವಿಮ್ ಲೈಫ್ ಸ್ವಿಮಿಂಗ್ ಅಕಾಡೆಮಿ
ಎಲ್ಲಿ?: 165, 17 ಮೇನ್, 17 ಎ ಕ್ರಾಸ್, ಬಿಎಸ್‌ಕೆ 2ನೇ ಸ್ಟೇಜ್, 5 ಮೇನ್, ತ್ಯಾಗರಾಜ ನಗರ, ಬಸವನ ಗುಡಿ, ಬೆಂಗಳೂರು- 560070
ಸಮಯ: ಬೆ.10ರಿಂದ ಸಂಜೆ 8
ಸಂಪರ್ಕ: ಮೊ. 9845192047. 2. ನಿಶಾ ಮಿಲೆಟ್ಸ್ ಸ್ವಿಮ್ಮಿಂಗ್ ಅಕಾಡೆಮಿ
ಎಲ್ಲಿ?: ಕ್ಯಾಥೋಲಿಕ್ ಕ್ಲಬ್, 22 ಮ್ಯೂಸಿಯಂ ರೋಡ್, ಬೆಂಗಳೂರು- 560001
ಸಮಯ: ಬೆ.7, 8, ಸಂಜೆ 4.30, 5.30, ರಾತ್ರಿ 8, 9
ಸಂಪರ್ಕ: ಮೊ. 98453 98443 3. ಶನೇನಾ ಸ್ವಿಮ್ಮಿಂಗ್ ಕಾರ್ಪೋರೇಟ್ ಲೆಸನ್
ಎಲ್ಲಿ?: 154, ನೆಲ ಮಹಡಿ, 7 ಸೆಕ್ಟರ್, ಹೊಸೂರು ರಸ್ತೆ, ಕೋರಮಂಗಲ, ಬೆಂಗಳೂರು- 560102
ಸಂಪರ್ಕ: ಮೊ. 8884377160 4. ಈಜು ಲೈಫ್
ಎಲ್ಲಿ?: ನಂ 43, 12 ಕ್ರಾಸ್, 1ನೇ ಮೇನ್, ವಿಠಲ್ ಮಲ್ಯ ರಸ್ತೆ, ಸಂಪಂಗಿರಾಮ ನಗರ, ಬೆಂಗಳೂರು- 560027
ಸಮಯ: ಬೆ. 9ರಿಂದ ರಾತ್ರಿ 10
ಸಂಪರ್ಕ: 080- 4113 5230 ಕ್ರೀಡೆ
ಮಕ್ಕಳಿಗೂ ಕ್ರೀಡೆಗೂ ಅವಿನಾಭಾವ ಸಂಬಂಧ. ವಿವಿಧ ರೀತಿಯ ಆಟಗಳು ಪುಟಾಣಿ ದೇಹಕ್ಕೆ, ಮನಸ್ಸಿಗೆ ಸದಾ ಲವಲವಿಕೆ, ಚೈತನ್ಯ ತುಂಬುತ್ತವೆ. ಅದರಲ್ಲೂ ರಜೆ ಬಂತಂದ್ರೆ ಕೇಳ್ಬೇಕಾ? ಮಕ್ಕಳು ಹಗಲಿಡೀ ಆಟದ ಮೈದಾನದಲ್ಲೇ ಕಾಲ ಕಳೆಯುತ್ತಾರೆ. ಕ್ರೀಡಾಪಟು ಆಗಲು ಕನಸು ಕಾಣುತ್ತಿರುವ ಮಕ್ಕಳಿಗೆ ಇಲ್ಲೊಂದಿಷ್ಟು ಶಿಬಿರಗಳ ಮಾಹಿತಿ ಇದೆ.
1. ಪ್ಲೆಸ್ಸರ್ ನ್ಪೋರ್ಟ್
ಏನನ್ನು ಕಲಿಸ್ತಾರೆ?: ಬ್ಯಾಡ್ಮಿಂಟನ್, ಟೆನಿಸ್, ಕ್ರಿಕೆಟ್
ಎಲ್ಲಿ?: ನಂ;2443, 16 ಬಿ ಮೇನ್, ಇಂದಿರಾ ನಗರ, ಬೆಂಗಳೂರುಧಿ- 560038
ಸಮಯ: ಮುಂಜಾನೆ 5ರಿಂದ ಸಂಜೆ 7ರ ವರೆಗೆ
ಸಂಪರ್ಕ: ಮೊ. 9845812841 2. ಎಗಾನ್ ನ್ಪೋರ್ಟ್ಸ್
ಏನನ್ನು ಕಲಿಸ್ತಾರೆ?: ಈಜು, ಬ್ಯಾಡ್ಮಿಂಟನ್
ಎಲ್ಲಿ?: 58/ಎ, ಗುಬ್ಬಿ ಕ್ರಾಸ್, ಕೊತ್ತನೂರು, ಬೆಂಗಳೂರು- 560077
ಸಂಪರ್ಕ: 9035123123 3. ಎಸ್‌ಪಿಟಿ ನ್ಪೋರ್ಟ್ಸ್
ಏನನ್ನು ಕಲಿಸ್ತಾರೆ?: ಫುಟ್ಬಾಲ್
ಎಲ್ಲಿ?: ಅರಕೆರೆ, ಬನ್ನೇರುಘಟ್ಟ ರಸ್ತೆ, ಎಇಸಿಎಸ್, ಮಾಗ್ನೊàಲಿಯಾ ಸ್ಕೂಲ್, ಬೆಂಗಳೂರು
ಸಮಯ: ಬೆ.8- 10.30
ಶುಲ್ಕ: 4000 ರೂ.
ಸಂಪರ್ಕ: ಮೊ. 9886512567, 8050077678 4. ಬ್ರಿಜೇಶ್ ಪಟೇಲ್ ಕ್ರಿಕೆಟ್ ಅಕಾಡೆಮಿ
ಏನನ್ನು ಕಲಿಸ್ತಾರೆ?: ಕ್ರಿಕೆಟ್
ವಿಳಾಸ: ಬಿಪಿಸಿಎ ಕ್ರಿಕೆಟ್ ಮೈದಾನ, ಬೆಂಗಳೂರು
ಸಂಪರ್ಕ: ಮೊ. 98450 42657 5. ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕ್ರಿಕೆಟ್
ಏನನ್ನು ಕಲಿಸ್ತಾರೆ?: ಕ್ರಿಕೆಟ್
ಎಲ್ಲಿ?: ನಂ 67/68, ಸೇಂಟ್ ಜಾನ್ಸ್ ರಸ್ತೆ, ಶಿವಾಜಿನಗರ
ಸಮಯ: ಬೆ. 6ರಿಂದ ರಾತ್ರಿ 9
ಸಂಪರ್ಕ: 080-2559 1089