ಕೆ.ಆರ್.ಪೇಟೆ: ಪ್ರತಿಭಾವಂತ ಮಕ್ಕಳ ಕೈಯಲ್ಲಿ ಪೆನ್ಸಿಲ್ ಮಸ್ಸಿನಲ್ಲಿ ಕನಸು ಇದ್ದರೆ ಸಾಕು ಅವರು ಏನೂ ಬೇಕಾದರೂ ಸಾಧನೆ ಮಾಡುತ್ತಾರೆ. ನಾವುಗಳು ಅವರಿಗೆ ಸೂಕ್ತ ವೇದಿಕೆ ನಿರ್ಮಾಣ ಮಾಡಿಕೊಡಬೇಕಷ್ಟೇ ಎಂದು ಬೆಂಗಳೂರಿನ ಆರ್.ಎಫ್.ಸಿ ಸಂಸ್ಥೆಯ ಸದಸ್ಯ ಆರ್. ರಾಖೇಶ್ ಹೇಳಿದರು.
ತಾಲೂಕಿನ ಅಂಬಿಗರಹಳ್ಳಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಪುರ, ಅಂಬಿಗರಹಳ್ಳಿ, ಸಂಗಾಪುರ ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ಮತ್ತು ಕಲಿಕಾ ಪರಿಕರಗಳನ್ನು ವಿತರಿಸಿ ಮಾತ ನಾಡಿ, ಸಮಾಜದಲ್ಲಿ ಗೌರವ ಸ್ಥಾನದಲ್ಲಿರುವ ಅತ್ಯಂತ ಪ್ರತಿಭಾವಂತ ವ್ಯಕ್ತಿಗಳು ಹಾಗೂ ಉನ್ನತ ಹುದ್ದೆಯಲ್ಲಿರುವ ಗಣ್ಯ ವ್ಯಕ್ತಿಗಳು ಗ್ರಾಮೀಣಭಾಗದಿಂದ ಬಂದವರೇ ಆಗಿದ್ದಾರೆ ಎಂದರು.
ಈಗಲೂ ಪ್ರತಿಭಾವಂತ ಮಕ್ಕಳು ಗ್ರಾಮೀಣ ಭಾಗದ ಬಡ ಕುಟುಂಬದಲ್ಲಿ ಜೀವನ ನಡೆಸುತ್ತಿದ್ದು ಕುಟುಂಬದ ಆರ್ಥಿಕ ಸಮಸ್ಯೆಯಿಂದಾಗಿ ಸ್ಥಳೀಯ ಸರ್ಕಾರಿ ಶಾಲೆಗೆ ಸೇರಿಕೊಳ್ಳುತ್ತಿದ್ದಾರೆ. ನಾವುಗಳು ಇಂತಹ ಮಕ್ಕಳಿಗೆ ಅನುಕೂಲ ಕಲ್ಪಿಸುವ ಸದುದ್ದೇಶದಿಂದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ಮಕ್ಕಳಿಗೆ ತಂಡ ರಚನೆ ಮಾಡಿಕೊಂಡು ಅಳಿಲು ಸೇವೆ ಮಾಡುತ್ತಿದ್ದೇವೆ. ಗ್ರಾಮೀಣ ಭಾಗದ ಪ್ರತಿಯೊಂದು ಮಗುವೂ ಕಡ್ಡಾಯವಾಗಿ ಶಾಲೆಗೆ ಬರಬೇಕು ಎಂಬುದೇ ನಮ್ಮ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.
ಸೋಮನಹಳ್ಳಿ ವ್ಯಾಪ್ತಿಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಸ್.ಐ.ನಾಗೇಂದ್ರ ಮಾತನಾಡಿ, ಆರೋಗ್ಯ, ಐಟಿಬಿಟಿ ಖಾಸಗಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದು ಸಮಾನ ಮನಸ್ಸನ್ನು ಹೊಂದಿರುವ ಯುವಕರ ತಂಡ ಆರ್.ಎಫ್.ಸಿ ಎಂಬ ಸಂಸ್ಥೆಯನ್ನು ಸ್ಥಾಪನೆ ಮಾಡಿಕೊಂಡು ಗ್ರಾಮೀಣ ಭಾಗದಲ್ಲಿರುವ ನಮ್ಮ ಸರ್ಕಾರಿ ಶಾಲಾ ಮಕ್ಕಳಿಗೆ ನೆರವಾಗಲು 170 ಕಿ.ಮೀ ದೂರದ ಊರಿನಿಂದ ಬಂದಿರುವ ಶಿಕ್ಷಣ ಆಶಕ್ತಿರಾಗಿರುವ ಅವರಿಗೆ ನಾನು ಋಣಿಯಾಗಿರುತ್ತೇನೆ. ಇವರಂತೆಯೇ ಎಲ್ಲರೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೊಡಿಸಿದೆ ನಮ್ಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯ ಕೊರತೆಯಾಗುವುದಿಲ್ಲ ಎಂದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಅಶ್ವಥ್, ಆರ್.ಎಫ್.ಸಿ ಸಂಸ್ಥೆಯ ಮಧು, ಸಂಜಯ್, ಅಂಬಿಗರಹಳ್ಳಿ ಶಾಲೆಯ ಮುಖ್ಯ ಶಿಕ್ಷಕರಾದ ಎಸ್.ಐಯ್ಯಣ್ಣ, ಪುರ ಶಾಲೆಯ ಮುಖ್ಯ ಶಿಕ್ಷಕ ರಾಜಣ್ಣ, ಸಂಗಾಪುರ ಶಾಲೆಯ ಮುಖ್ಯ ಶಿಕ್ಷಕ ಶ್ರೀಧರ್‌ಮೂರ್ತಿ, ಶಿಕ್ಷಕರಾದ ಪಿ.ಎನ್.ರಾಜಶೇಖರ್, ಸುಶೀಲಮ್ಮ, ಕಾರ್ಯಕ್ರಮದಲ್ಲಿ ಮಕ್ಕಳು ಸಾಂಸ್ಕೃತಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಆರ್.ಎಫ್.ಸಿ ಸಂಸ್ಥೆಯ ಪದಾಧಿಕಾರಿಗಳು ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಿದರು.