Advertisement

ಜನಪರ ಯೋಜನೆಗೆ ಜನಗಣತಿ ಸಹಕಾರಿ

12:52 PM Mar 06, 2020 | |

ಚಿಕ್ಕಮಗಳೂರು: ಜನಸಾಮಾನ್ಯರ ಅನುಕೂಲಕ್ಕಾಗಿ ವಿವಿಧ ಜನಪರ ಕಲ್ಯಾಣ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ರಚಿಸಲು ಜನಗಣತಿ ಮೂಲ ಮಾಹಿತಿ ಒದಗಿಸುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ| ಕುಮಾರ್‌ ತಿಳಿಸಿದರು.

Advertisement

ಗುರುವಾರ ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಭಾರತದ ಜನಗಣತಿ 2021ರ ಕಾರ್ಯಕ್ರಮಕ್ಕೆ ನೇಮಕಗೊಂಡಿರುವ ತಾಂತ್ರಿಕ ಸಹಾಯಕರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಸಾಧಿಸಲು, ಜನಸಾಮಾನ್ಯರ ಶೈಕ್ಷಣಿಕ, ಆರ್ಥಿಕ ಸಾಮರ್ಥಯ, ಭೌಗೋಳಿಕ ಪ್ರದೇಶಗಳಿಗೆ ಅನುಸಾರವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು, ಮೀಸಲಾತಿ ಒದಗಿಸಲು ಜನಗಣತಿಯಲ್ಲಿ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ ಕ್ರಮ ಕೈಗೊಳ್ಳುವುದರೊಂದಿಗೆ ಉತ್ತಮ ರಾಷ್ಟ್ರ ಕಟ್ಟುವ ಕಾರ್ಯ ಮಾಡಲಾಗುತ್ತದೆ ಎಂದರು.

ನಮ್ಮ ದೇಶದಲ್ಲಿ ಏಕಕಾಲದಲ್ಲಿ ಜನಗಣತಿ ಕಾರ್ಯವನ್ನು 1872 ರಿಂದ ಪ್ರತಿ 10 ವರ್ಷಕ್ಕೊಮ್ಮೆ ಮಾಡಲಾಗುತ್ತಿದ್ದು, ಪ್ರಸ್ತುತ 16ನೇ ಜನಗಣತಿ ಕಾರ್ಯ ನಡೆಯಲಿದೆ. ಜನಗಣತಿ ಕಾರ್ಯಕ್ಕೆ ಬಂದಾಗ ಸಾರ್ವಜನಿಕರು ನಿಖರ ಮಾಹಿತಿ ಒದಗಿಸಬೇಕು ಎಂದರು.

ಗಣತಿದಾರರು ಹಾಗೂ ಮೇಲ್ವಿಚಾರಕರು ಜನಗಣತಿಯನ್ನು ರಾಷ್ಟ್ರೀಯ ಮಹತ್ವದ ಕಾರ್ಯ ಎಂದು ಅರಿತು ಕರ್ತವ್ಯನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಮಾಡಬೇಕು. ಗಣತಿ ಕಾರ್ಯ ಕೈಗೊಳ್ಳುವ ಎಲ್ಲಾ ಸಿಬ್ಬಂದಿ ಸರ್ಕಾರದ ನಿಯಮ ಹಾಗೂ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು. ತಪ್ಪಿದಲ್ಲಿ ಅಂತಹವರ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ತರಬೇತಿ ಕಾರ್ಯದಲ್ಲಿ ತರಬೇತಿದಾರರು ನೀಡುವ ಎಲ್ಲಾ ಮಾಹಿತಿಗಳನ್ನು ಮನವರಿಕೆ ಮಾಡಿಕೊಳ್ಳುವುದರ ಜೊತೆಗೆ ಯಾವುದೇ ರೀತಿಯ ಸಂದೇಹಗಳು ಬಂದಲ್ಲಿ ಮೇಲ್ವಿಚಾರಕರಿಂದ ಮಾಹಿತಿ ಪಡೆದು ನಿವಾರಣೆ ಮಾಡಿಕೊಳ್ಳಬೇಕು. ಆಗ ಮಾತ್ರ ಜನಗಣತಿ ಕಾರ್ಯವನ್ನು ಯಾವುದೇ ಗೊಂದಲವಿಲ್ಲದೇ ಸುಸೂತ್ರವಾಗಿ ಮಾಡಲು ಸಾಧ್ಯ ಎಂದರು.

Advertisement

ಜಿಲ್ಲಾ ಸಾಂಖ್ಯೀಕ ಅಧಿಕಾರಿ ಕರಿಗೌಡ, ಉಪನ್ಯಾಸಕ ಶಿವಪ್ಪ ಹಾಗೂ ಜಿಲ್ಲಾ ನೋಡಲ್‌ ಅಧಿಕಾರಿ ಕೇಶವಮೂರ್ತಿ ತರಬೇತಿ ನೀಡಿದರು. ಸಭೆಯಲ್ಲಿ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ಪೂರ್ಣಿಮಾ, ಎನ್‌ಸಿಐ ಅಧಿ ಕಾರಿ ಕೃಷ್ಣ ಕಿರಣ್‌ ಹಾಗೂ ಜಿಲ್ಲಾ ಧಿಕಾರಿಗಳ ಕಚೇರಿ ಸಮಾಲೋಚಕ ಎಚ್‌.ಬಿ. ಚಂದ್ರಶೇಖರಯ್ಯ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next