Advertisement
ಮೂಡಿಗೆರೆ ತಾಲ್ಲೂಕಿನ ಚನ್ನಡ್ಲು ಗ್ರಾಮದ ಸುಂದರ ಹಾಗೂ ಅರುಣ ದಂಪತಿಗಳಿಗೆ ಮೂವರು ಮಕ್ಕಳು. ಇಬ್ಬರು ಮಕ್ಕಳು ಹುಟ್ಟಿನಿಂದ ಬುದ್ದಿಮಾಂದ್ಯತೆ ಹಾಗೂ ಅಂಗವೈಕಲ್ಯತೆಯಿಂದ ಬಳಲುತ್ತಿದ್ದು ಹಿರಿಯ ಮಗ ಬೆಂಗಳೂರಿನಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ತಂದೆ ಸುಂದರ ಅವರು ಕೂಲಿ ಕೆಲಸ ಮಾಡಿ ಕುಟುಂಬವನ್ನು ಸಾಕುತ್ತಿದ್ದರೆ, ತಾಯಿ ಅರುಣ ಅವರು ಅಂಗವೈಕಲ್ಯ ಮಕ್ಕಳು ನೋಡಿಕೊಂಡು ಮನೆಯಲ್ಲಿರುತ್ತಿದ್ದರು.
Related Articles
Advertisement
ಇದನ್ನೂ ಓದಿ:ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಉಗರಗೋಳ ಪೈಲ್ವಾನರು
ಇದೀಗ ಇಳಿವಯಸ್ಸಿನಲ್ಲಿ ಬುದ್ದಿಮಾಂದ್ಯ ಅಂಗವಿಕಲ ಮಕ್ಕಳನ್ನು ನೋಡಿಕೊಳ್ಳಲು ಆಗದೇ ಗ್ರಾಮಸ್ಥರು ಹಾಗೂ ಸಾರ್ವಜನಿಕರು ತಾಯಿ ಅರುಣ ಅವರ ಮನವೊಲಿಸಿ ಇಬ್ಬರು ಮಕ್ಕಳನ್ನು ಅನಾಥಾಶ್ರಮಕ್ಕೆ ಬಿಡಲು ಒಪ್ಪಿಸಿದ್ದು, ಶನಿವಾರ ಬುದ್ದಿಮಾಂದ್ಯ ಅಂಗವಿಕಲ ಇಬ್ಬರು ಮಕ್ಕಳನ್ನು ಬೆಂಗಳೂರಿನ ಬನ್ನೇರುಘಟ್ಟದ ಆರ್.ವಿ.ಎನ್ ಪೌಂಡೇಶನ್‌ನ ಅನಾಥಾಶ್ರಮಕ್ಕೆ ಕರೆದ್ಯೊಯಲಾಯಿತು.
ಗಂಡನನ್ನು ಕಳೆದುಕೊಂಡು ಇಬ್ಬರು ಮಕ್ಕಳನ್ನು ಅನಾಥಾಶ್ರಮಕ್ಕೆ ಕಳಿಸಿ ಏಕಾಂಗಿಯಾಗಿ ಕಣ್ಣೀರು ಹಾಕುತ್ತಿದ್ದ ಅರುಣ ಅವರ ದೃಶ್ಯ ಮನಕಲಕುವಂತಿತ್ತು. ಅನಾಥಾಶ್ರಮಕ್ಕೆ ಹೋಗಲು ಅಂಬುಲೆನ್ಸ್‌ಗೆ ಹಣವನ್ನು ಬಾಳೂರು ಗ್ರಾ.ಪಂ, ಬಾಳೂರು ಪೊಲೀಸರ ವತಿಯಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ಬಾಳೂರು ಗ್ರಾ.ಪಂ ಅಧ್ಯಕ್ಷೆ ಗೀತಾ, ಉಪಾದ್ಯಕ್ಷ ಬಿ.ಬಿ.ಮಂಜುನಾಥ್, ಸದಸ್ಯರಾದ ಮನೋಜ್, ಬಿಜೆಪಿ ಮುಖಂಡರಾದ ಬಿ.ಎಂ ಭರತ್, ಬಾಳೂರು ಠಾಣೆ ಪಿಎಸ್‌ಐ ರೇಣುಕಾ, ಸಿಬ್ಬಂದಿಗಳಾದ ಮಹೇಶ್, ವೈಭವ್, ಸಾಮಾಜಿಕ ಸಕ್ರಿಯ ಸೇವಾಸಂಸ್ಥೆಯ ಅಧ್ಯಕ್ಷ ಪಿಶ್‌ಮೋಣು, ಕಾರ್ಯಾಧ್ಯಕ್ಷ ಅಬ್ದುಲ್ ರೆಹಮಾನ್, ಉಪಾಧ್ಯಕ್ಷ ಹಸೆ„ನಾರ್ ಬಿಳುಗುಳ, ಗ್ರಾಮಸ್ಥರಾದ ರೋಹಿತ್, ಮದನ್, ಜಗದೀಶ್,ರಾಜು, ಸಂದೀಪ್, ವಿಜೇಂದ್ರ, ಸುದೀಪ್, ಪೂರ್ಣೇಶ್,ಚಂದ್ರಶೇಖರ್, ರವಿ, ಅಣ್ಣಪ್ಪ, ಇದ್ದರು.