Advertisement
ಸ್ವತ್ಛತೆ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವ ಗ್ರಾಪಂ ಆಡಳಿತಾಧಿಕಾರಿಗಳು ಸ್ವತಃ ತಮ್ಮ ಪಂಚಾಯ್ತಿ ಸುತ್ತ ಶುಚಿಯಾಗಿಟ್ಟುಕೊಳ್ಳುವಲ್ಲೂ ವಿಫಲರಾಗಿದ್ದಾರೆ. ಇಲ್ಲಿನ ಶ್ರೀ ಕಾಲಭೈರವೇಶ್ವರ ದೇವಾಲಯ ರಾಜ್ಯದಲ್ಲೇ ಪ್ರಸಿದ್ಧಿಗೊಂಡಿದೆ. ಆದರೆ, ಗ್ರಾಮ ಮಾತ್ರ ಗ್ರಾಪಂ ನಿರ್ಲಕ್ಷ್ಯದಿಂದಾಗಿ ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿದೀಪ ಇತರೆ ಸೌಲಭ್ಯಗಳಿಂದ ವಂಚಿತವಾಗಿದೆ. ಗ್ರಾಮ ಪ್ರವೇಶಿಸುತ್ತಿದ್ದಂತೆ ರಸ್ತೆಯಲ್ಲಿ ನಿಂತ ಕಲುಷಿತ ನೀರು, ಕೆಲವು ಕಡೆ ಚರಂಡಿಯೇ ಇಲ್ಲ, ವಿದ್ಯುತ್ ಕಂಬಗಳಿದ್ದರೂ ಬಲ್ಬ್ಗಳೇ ಇಲ್ಲದಿರುವುದು ಗೋಚರಿಸುತ್ತದೆ.ಚಿಕ್ಕರಸಿನಕೆರೆ ಹೋಬಳಿ ಎಂದು ಘೋಷಣೆ ಯಾಗಿದ್ದರೂ ಮೂಲ ಸೌಲಭ್ಯ ಕಲ್ಪಿಸಲು ಗ್ರಾಪಂ ಮನಸ್ಸು ಮಾಡಿಲ್ಲ. ಚಿಕ್ಕರಸಿನಕೆರೆ, ಗುರುದೇವರಹಳ್ಳಿ, ಗುರು ದೇವರಹಳ್ಳಿ ಕಾಲೋನಿ, ಹುಣ್ಣನದೊಡ್ಡಿ, ಛತ್ರದ ಹೊಸಹಳ್ಳಿ ಗ್ರಾಮಗಳು ಈ ಗ್ರಾಪಂ ವ್ಯಾಪ್ತಿಗೆ ಸೇರಿಕೊಂಡಿವೆ. ಈ ಎಲ್ಲಾ ಗ್ರಾಮಗಳಲ್ಲೂ ಸೌಲಭ್ಯ ಒದಗಿ ಸಿಲ್ಲ. ಪಂಚಾಯ್ತಿ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪಟೇಲ್ ಗಿರೀಶ್, ಸ್ಥಳೀಯ ಅಣ್ಣೂರು ಸತೀಶ್